alex Certify ʼಗುರುರಾಯʼರ ಕ್ಷೇತ್ರ ಮಂತ್ರಾಲಯದ ಮಹಾತ್ಮೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಗುರುರಾಯʼರ ಕ್ಷೇತ್ರ ಮಂತ್ರಾಲಯದ ಮಹಾತ್ಮೆ

ರಾಘವೇಂದ್ರ ಸ್ವಾಮಿಗಳು ಇಂದಿಗೂ ನೆಲೆಸಿದ್ದಾರೆ ಎಂದು ನಂಬಲಾದ ಮಂತ್ರಾಲಯವು ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯ ಆದವಾನಿ ತಾಲ್ಲೂಕಿನಲ್ಲಿದೆ. ಶ್ರೀ ರಾಘವೇಂದ್ರ ಸ್ವಾಮಿರವರ ನೆಲೆವೀಡಾಗಿದ್ದರಿಂದ ಪ್ರಖ್ಯಾತಿಗೊಂಡ ಸ್ಥಳವಿದು. ತುಂಗಭದ್ರಾ ನದಿಯ ದಂಡೆಯಲ್ಲಿದೆ.

ರಾಯರ ಭಕ್ತರಲ್ಲಿ ಎಂತಹ ಸಂಕಟಗಳು ಬಂದರೂ ಸರಿ ಶ್ರೀ ಗುರು ರಾಯರನ್ನು ಭಕ್ತಿಯಿಂದ ನೆನೆಸಿದರೆ ಸಾಕು ಕ್ಷಣಾರ್ಧದಲ್ಲಿ ಅವು ಮಾಯವಾಗುತ್ತವೆ ಎಂಬ ಅಚಲವಾದ ವಿಶ್ವಾಸವಿದೆ. ಗುರು ರಾಘವೇಂದ್ರರು ದ್ವೈತ ಪಂತದ ಸಂಸ್ಥಾಪಕರಾದ ಶ್ರೀ ಮಧ್ವಾಚಾರ್ಯರ ಅನುಯಾಯಿಯಾಗಿದ್ದು, ಅದರ ಪರಿಪಾಲಕರಾಗಿದ್ದರು.

ಪ್ರಸ್ತುತ ಅವರ ಬೃಂದಾವನದಲ್ಲಿ ಸಮಾಧಿ ತೆಗೆದುಕೊಳ್ಳುವ ಮುಂಚೆ ಭಕ್ತರನ್ನು ಕುರಿತು ಮುಂದಿನ 700 ವರ್ಷಗಳವರೆಗೆ ಇದರಲ್ಲಿ ಜೀವಿಸಿರುವುದಾಗಿ ಅಭಯ ಹಸ್ತ ನೀಡಿದ್ದರು. ಅದರಂತೆ ಈಗಾಗಲೆ 339 ವರ್ಷಗಳು ಗತಿಸಿದ್ದು ಇನ್ನೂ ಮುಂದಿನ 361 ವರ್ಷಗಳವರೆಗೆ ರಾಯರು ಜಾಗೃತರಾಗಿದ್ದು ಭಕ್ತರನ್ನು ಹರಸುತ್ತಾರೆ ಎಂಬ ವಿಶ್ವಾಸ ಅವರ ಅನುಯಾಯಿಗಳಲ್ಲಿದೆ.

ಮಂತ್ರಾಲಯವು ಕರ್ನಾಟಕದ ರಾಯಚೂರು ಪಟ್ಟಣದಿಂದ ಕೇವಲ 42 ಕಿ.ಮೀ. ದೂರದಲ್ಲಿದ್ದು, ಬಸ್ಸು ಹಾಗು ರೈಲಿನ ಮುಖಾಂತರ ಸುಲಭವಾಗಿ ತಲುಪಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...