alex Certify ಗುಪ್ತಾಂಗದಲ್ಲಿ ಗಾಂಜಾ ಇಟ್ಟುಕೊಂಡು ಜೈಲಿನಲ್ಲಿದ್ದ ಗೆಳೆಯರನ್ನು ನೋಡಲು ಬಂದ ಮಹಿಳೆಯರು ‘ಅಂದರ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಪ್ತಾಂಗದಲ್ಲಿ ಗಾಂಜಾ ಇಟ್ಟುಕೊಂಡು ಜೈಲಿನಲ್ಲಿದ್ದ ಗೆಳೆಯರನ್ನು ನೋಡಲು ಬಂದ ಮಹಿಳೆಯರು ‘ಅಂದರ್’

ಜೈಲಿನಿಂದ ಇಬ್ಬರು ಕೈದಿಗಳ ಗೆಳತಿಯರು ಅವರಗಳಿಗೆ ಗಾಂಜಾ ಪೂರೈಸುವ ಸಲುವಾಗಿ ತಮ್ಮ ಗುಪ್ತಾಂಗದಲ್ಲಿ ಗಾಂಜಾ ಇಟ್ಟುಕೊಂಡು ಬಂದಿದ್ದು, ಇದೀಗ ಪೊಲೀಸರಿಗೆ ಸಿಕ್ಕಿಬಿದ್ದಿರುವ ಘಟನೆ ಬೆಂಗಳೂರಿನ ಪರಪ್ಪನ ಅಗ್ರಹಾರದಲ್ಲಿ ನಡೆದಿದೆ.

ಚಾಮರಾಜಪೇಟೆಯ ಸಂಗೀತಾ ಎಂಬಾಕೆ ಕಳ್ಳತನ ಪ್ರಕರಣದಲ್ಲಿ ಬಂಧಿತನಾಗಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ತನ್ನ ಗೆಳೆಯ ಲೋಹಿತ್ ಗೆ ಗಾಂಜಾ ನೀಡಲು ಗುಪ್ತಾಂಗದಲ್ಲಿ 220 ಗ್ರಾಂ ಅಶಿಶ್ ಎಣ್ಣೆ ಪ್ಯಾಕೆಟ್ ಅನ್ನು ಇಟ್ಟುಕೊಂಡು ಬಂದಿದ್ದಳು.

ಸಂದರ್ಶನದ ನೆಪದಲ್ಲಿ ಬಂದ ಆಕೆಯ ನಡಿಗೆ ಕುರಿತು ಅನುಮಾನಗೊಂಡ ಜೈಲಿನ ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದು ಮಹಿಳಾ ಪೊಲೀಸರ ಮೂಲಕ ತಪಾಸಣೆ ನಡೆಸಿದಾಗ ಇದು ಬೆಳಕಿಗೆ ಬಂದಿದೆ.

ಮತ್ತೊಂದು ಪ್ರಕರಣದಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲೂಕಿನ ಛಾಯಾ ಎಂಬಾಕೆ ಜೈಲಿನಲ್ಲಿದ್ದ ಕಾಳಪ್ಪ ಎಂಬಾತನ ಭೇಟಿಗೆ ಬಂದಿದ್ದು, ತನ್ನ ಗುಪ್ತಾಂಗದಲ್ಲಿ 50 ml ಕೊಬ್ಬರಿ ಎಣ್ಣೆ ಬಾಟಲಿಯಲ್ಲಿ ಅಶಿಶ್ ಆಯಿಲ್ ತುಂಬಿ ಗೆಳೆಯನಿಗೆ ಕೊಡಲು ಮುಂದಾಗಿದ್ದಳು. ಈಕೆ ಕೂಡ ಈಗ ಸಿಕ್ಕಿಬಿದ್ದಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...