alex Certify ಗುಡ್​ ನ್ಯೂಸ್​: ಕಮರ್ಷಿಯಲ್​ ಸಿಲಿಂಡರ್​ಗಳ ಬೆಲೆಯಲ್ಲಿ 102.50 ರೂಪಾಯಿ ಇಳಿಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗುಡ್​ ನ್ಯೂಸ್​: ಕಮರ್ಷಿಯಲ್​ ಸಿಲಿಂಡರ್​ಗಳ ಬೆಲೆಯಲ್ಲಿ 102.50 ರೂಪಾಯಿ ಇಳಿಕೆ

ಹೊಸ ವರ್ಷದಂದು ಗ್ರಾಹಕರಿಗೆ ಗುಡ್​ ನ್ಯೂಸ್​ ಸಿಕ್ಕಿದ್ದು ನ್ಯಾಷನಲ್​ ಆಯಿಲ್​ ಮಾರ್ಕೆಟಿಂಗ್​ ಕಂಪನಿಗಳು 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್​ಗಳ ಬೆಲೆಯಲ್ಲಿ 102.50 ರೂಪಾಯಿ ಕಡಿತಗೊಳಿಸಿವೆ. ಇಂದಿನಿಂದ ಈ ಪರಿಷ್ಕೃತ ದರ ಜಾರಿಗೆ ಬಂದಿದೆ. ದರ ಕಡಿತದ ಬಳಿಕ ದೆಹಲಿಯಲ್ಲಿ ಇಂದಿನಿಂದ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್​ಗಳ ಬೆಲೆಯು 1998.50 ರೂಪಾಯಿಗಳಾಗಿವೆ ಎನ್ನಲಾಗಿದೆ.

19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್​ಗಳ ದರ ಕಡಿತದಿಂದಾಗಿ ರೆಸ್ಟಾರೆಂಟ್​ಗಳು, ಟೀ ಸ್ಟಾಲ್​ಗಳು ಹಾಗೂ ಹೋಟೆಲ್​ಗಳ ಮಾಲೀಕರಿಗೆ ಕೊಂಚ ನಿರಾಳ ಎನಿಸಿದೆ. ಡಿಸೆಂಬರ್​ 1ರಂದು 19 ಕೆಜಿ ಕಮರ್ಷಿಯಲ್​ ಸಿಲಿಂಡರ್​ಗಳ ಬೆಲೆಯಲ್ಲಿ 100 ರೂಪಾಯಿ ಏರಿಕೆ ಮಾಡಲಾಗಿತ್ತು. ಇದರಿಂದಾಗಿ ದೆಹಲಿಯಲ್ಲಿ ಕಮರ್ಷಿಯಲ್​ ಸಿಲಿಂಡರ್​ ಬೆಲೆ 2101 ರೂಪಾಯಿ ಆಗಿತ್ತು. 2012-13ನೇ ಸಾಲಿನಲ್ಲಿ ಕಮರ್ಷಿಯಲ್​ ಸಿಲಿಂಡರ್​ ಬೆಲೆ 2200 ರೂಪಾಯಿ ಆದ ಬಳಿಕ ನಿಗದಿಯಾದ ಅತೀ ಹೆಚ್ಚಿನ ದರ ಇದಾಗಿತ್ತು.

ಅಂದಹಾಗೆ 14.2 ಕೆಜಿ, 5 ಕೆಜಿ, 10 ಕೆಜಿ ಕಂಪೋಸಿಟ್​ ಅಥವಾ 5 ಕೆಜಿ ಕಂಪೋಸಿಟ್​ ದೇಶಿ ಸಿಲಿಂಡರ್​ಗಳ ಬೆಲೆಯಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ಈ ಬೆಲೆಗಳು ತಟಸ್ಥವಾಗಿ ಇದೆ ಎಂದು ನ್ಯಾಷನಲ್​ ಆಯಿಲ್​ ಮಾರ್ಕೆಟಿಂಗ್​ ಕಂಪನಿಗಳು ತಿಳಿಸಿವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...