ಹೊಸ ವರ್ಷದಂದು ಗ್ರಾಹಕರಿಗೆ ಗುಡ್ ನ್ಯೂಸ್ ಸಿಕ್ಕಿದ್ದು ನ್ಯಾಷನಲ್ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ಗಳ ಬೆಲೆಯಲ್ಲಿ 102.50 ರೂಪಾಯಿ ಕಡಿತಗೊಳಿಸಿವೆ. ಇಂದಿನಿಂದ ಈ ಪರಿಷ್ಕೃತ ದರ ಜಾರಿಗೆ ಬಂದಿದೆ. ದರ ಕಡಿತದ ಬಳಿಕ ದೆಹಲಿಯಲ್ಲಿ ಇಂದಿನಿಂದ 19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ಗಳ ಬೆಲೆಯು 1998.50 ರೂಪಾಯಿಗಳಾಗಿವೆ ಎನ್ನಲಾಗಿದೆ.
19 ಕೆಜಿ ತೂಕದ ವಾಣಿಜ್ಯ ಸಿಲಿಂಡರ್ಗಳ ದರ ಕಡಿತದಿಂದಾಗಿ ರೆಸ್ಟಾರೆಂಟ್ಗಳು, ಟೀ ಸ್ಟಾಲ್ಗಳು ಹಾಗೂ ಹೋಟೆಲ್ಗಳ ಮಾಲೀಕರಿಗೆ ಕೊಂಚ ನಿರಾಳ ಎನಿಸಿದೆ. ಡಿಸೆಂಬರ್ 1ರಂದು 19 ಕೆಜಿ ಕಮರ್ಷಿಯಲ್ ಸಿಲಿಂಡರ್ಗಳ ಬೆಲೆಯಲ್ಲಿ 100 ರೂಪಾಯಿ ಏರಿಕೆ ಮಾಡಲಾಗಿತ್ತು. ಇದರಿಂದಾಗಿ ದೆಹಲಿಯಲ್ಲಿ ಕಮರ್ಷಿಯಲ್ ಸಿಲಿಂಡರ್ ಬೆಲೆ 2101 ರೂಪಾಯಿ ಆಗಿತ್ತು. 2012-13ನೇ ಸಾಲಿನಲ್ಲಿ ಕಮರ್ಷಿಯಲ್ ಸಿಲಿಂಡರ್ ಬೆಲೆ 2200 ರೂಪಾಯಿ ಆದ ಬಳಿಕ ನಿಗದಿಯಾದ ಅತೀ ಹೆಚ್ಚಿನ ದರ ಇದಾಗಿತ್ತು.
ಅಂದಹಾಗೆ 14.2 ಕೆಜಿ, 5 ಕೆಜಿ, 10 ಕೆಜಿ ಕಂಪೋಸಿಟ್ ಅಥವಾ 5 ಕೆಜಿ ಕಂಪೋಸಿಟ್ ದೇಶಿ ಸಿಲಿಂಡರ್ಗಳ ಬೆಲೆಯಲ್ಲಿ ಯಾವುದೇ ಇಳಿಕೆ ಕಂಡುಬಂದಿಲ್ಲ. ಈ ಬೆಲೆಗಳು ತಟಸ್ಥವಾಗಿ ಇದೆ ಎಂದು ನ್ಯಾಷನಲ್ ಆಯಿಲ್ ಮಾರ್ಕೆಟಿಂಗ್ ಕಂಪನಿಗಳು ತಿಳಿಸಿವೆ.