ಸ್ವೀಡನ್ನ ಎಸ್ಕಿಲ್ಸ್ಟುನಾ ಬಳಿ ಇರುವ ಜೈಲೊಂದರಲ್ಲಿ ಬಂಧಿಗಳಾಗಿರುವ ಇಬ್ಬರು ಪ್ರಳಯಾಂತಕ ಖೈದಿಗಳು ಕಾರಾಗೃಹದ ಭದ್ರತಾ ಸಿಬ್ಬಂದಿಯನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡು ಪಿಜ್ಜಾಗೆ ಬೇಡಿಕೆ ಇಟ್ಟಿದ್ದಾರೆ. 24 ವರ್ಷದ ಹನೆದ್ ಮೊಹಮ್ಮದ್ ಅಬ್ದುಲ್ಲಾಹಿ ಹಾಗೂ 30 ವರ್ಷದ ಇಸಾಕ್ ದೇವಿತ್ ಎಂದು ಈ ಇಬ್ಬರು ಖೈದಿಗಳನ್ನು ಗುರುತಿಸಲಾಗಿದೆ.
ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದ ಜೈಲು ಆಡಳಿತದ ವಕ್ತಾರೆ ಸ್ಟಿನಾ ಲಿಲ್ಸ್, 20 ಪಿಜ್ಜಾಗಳನ್ನು ಈ ಖೈದಿಗಳಿಗೆ ಕೊಟ್ಟ ಬಳಿಕ ಭದ್ರತಾ ಸಿಬ್ಬಂದಿಯನ್ನು ಒತ್ತೆಯಿಂದ ಬಿಡುಗಡೆ ಮಾಡಿಕೊಳ್ಳಲಾಗಿದೆ ಎಂದಿದ್ದಾರೆ.
BIG NEWS: 6 ತಿಂಗಳಾದರೂ ಯಡಿಯೂರಪ್ಪನವರನ್ನು ಮುಂದುವರಿಸಿ; ಮಠಾಧೀಶರ ಮಾತು ಗೌರವಿಸಿ; ಹೈಕಮಾಂಡ್ ಗೆ ಮತ್ತೆ ಎಚ್ಚರಿಕೆ ನೀಡಿದ ಸ್ವಾಮೀಜಿಗಳು
ಕೊಲೆ ಅಪರಾಧವೊಂದರಲ್ಲಿ ತಪ್ಪಿತಸ್ಥರಾಗಿರುವ ಈ ಇಬ್ಬರು ಖೈದಿಗಳು ಸ್ಟಾಕ್ಹೋಂನಿಂದ 70 ಮೈಲಿ ಪಶ್ಚಿಮಕ್ಕಿರುವ ಈ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿದ್ದಾರೆ. ಭದ್ರತಾ ಸಿಬ್ಬಂದಿ ಇರುವ ಜಾಗಕ್ಕೆ ನುಸುಳಿ ಬಂದ ಈ ಇಬ್ಬರೂ, ಅಲ್ಲಿದ್ದ ಇಬ್ಬರು ಗಾರ್ಡ್ಗಳನ್ನು ಒತ್ತೆಯಾಳುಗಳನ್ನಾಗಿ ಇಟ್ಟುಕೊಂಡಿದ್ದಾರೆ. ಆ ವೇಳೆ ರೇಜ಼ರ್ ಬ್ಲೇಡ್ಗಳನ್ನು ಇಟ್ಟುಕೊಂಡಿದ್ದ ಈ ಖೈದಿಗಳು ಒತ್ತೆಯಾಳುಗಳೊಂದಿಗೆ ಜೈಲಿನ ಕೋಣೆಯೊಂದಕ್ಕೆ ಲಾಕ್ ಆಗಿದ್ದಾರೆ.
ಗಾರ್ಡ್ಗಳ ಬಿಡುಗಡೆಗೆ ಇಟ್ಟ ಡಿಮ್ಯಾಂಡ್ನಲ್ಲಿ ಹೆಲಿಕಾಪ್ಟರ್ ಒಂದನ್ನು ತರಬೇಕೆಂದ ಈ ಖೈದಿಗಳು, ಅದರಲ್ಲಿ ತಂತಮ್ಮ ಮನೆಗಳಿಗೆ ಹೋಗಬೇಕೆಂದಿದ್ದಾರೆ. ಇವರ ಎರಡನೇ ಬೇಡಿಕೆಯಾಗಿದ್ದ ಪಿಜ್ಜಾಗಳನ್ನು ಅಲ್ಲಿದ್ದ ಎಲ್ಲಾ ಖೈದಿಗಳಿಗೆ ಪೂರೈಸಿದ ಜೈಲಿನ ಆಡಳಿತ, ಗಾರ್ಡ್ಗಳನ್ನು ಬಿಡಿಸಿಕೊಂಡಿದೆ. ವಿಶೇಷ ಘಟಕದ ಪೊಲೀಸರು ಈ ಇಬ್ಬರು ಖೈದಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.