alex Certify ಗಾನ ಕೋಗಿಲೆ ಲತಾ ಮಂಗೇಶ್ಕರ್​ ಆರೋಗ್ಯದ ಬಗ್ಗೆ ವೈದ್ಯರಿಂದ ಮಹತ್ವದ ಮಾಹಿತಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾನ ಕೋಗಿಲೆ ಲತಾ ಮಂಗೇಶ್ಕರ್​ ಆರೋಗ್ಯದ ಬಗ್ಗೆ ವೈದ್ಯರಿಂದ ಮಹತ್ವದ ಮಾಹಿತಿ

ಕೋವಿಡ್​ ಸೋಂಕಿಗೆ ಒಳಗಾಗಿರುವ ಗಾನ ಕೋಗಿಲೆ ಲತಾ ಮಂಗೇಶ್ಕರ್​ರಿಗೆ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದೆ.

ಕೊರೊನಾ ಸೋಂಕು ಇರುವ ಹಿನ್ನೆಲೆಯಲ್ಲಿ ಲತಾ ಮಂಗೇಶ್ಕರ್​ 7 ದಿನಗಳ ಕಾಲ ವೈದ್ಯರ ನಿಗಾದಲ್ಲಿಯೇ ಇರಲಿದ್ದಾರೆ. ಆರು ಮಂದಿ ವೈದ್ಯರ ತಂಡ ಲತಾ ಮಂಗೇಶ್ಕರ್​ರ ಆರೋಗ್ಯದ ಮೇಲೆ ನಿರಂತರ ನಿಗಾ ಇರಿಸಿದೆ. ಲತಾ ಮಂಗೇಶ್ಕರ್​ರ ಆರೋಗ್ಯ ಸ್ಥಿರವಾಗಿದ್ದು ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಆಸ್ಪತ್ರೆಗಳ ಮೂಲಗಳು ತಿಳಿಸಿವೆ.

ಲತಾ ಮಂಗೇಶ್ಕರ್​ ಕೊರೊನಾ ಸೋಂಕಿಗೆ ಒಳಗಾಗಿರುವ ಬಗ್ಗೆ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದ ಅವರ ಸೊಸೆ ರಚನಾ ಲತಾ ಮಂಗೇಶ್ಕರ್​ರ ವಯಸ್ಸನ್ನು ಗಮನದಲ್ಲಿಟ್ಟುಕೊಂಡು ಮುಂಜಾಗ್ರತಾ ಕ್ರಮವಾಗಿ ಅವರನ್ನು ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಗೆ ದಾಖಲು ಮಾಡಿದ್ದಾಗಿ ಮಾಹಿತಿ ನೀಡಿದ್ದರು. ಅಲ್ಲದೇ ಈ ಸಮಯದಲ್ಲಿ ಕುಟುಂಬದ ಖಾಸಗಿತನಕ್ಕೆ ಭಂಗ ತಾರದಂತೆ ಮಾಧ್ಯಮಗಳಲ್ಲಿ ಮನವಿ ಮಾಡಿದ್ದರು.

ಲತಾ ಮಂಗೇಶ್ಕರ್​ರ ಆರೋಗ್ಯದ ವಿಚಾರವಾಗಿ ಮಾಹಿತಿ ನೀಡಿದ ಮುಂಬೈನ ಬ್ರೀಚ್​ ಕ್ಯಾಂಡಿ ಆಸ್ಪತ್ರೆಯ ಡಾ. ಪ್ರತೀತ್​ ಸಂದಾನಿ, ಲತಾ ಮಂಗೇಶ್ಕರ್​ರಿಗೆ ಐಸಿಯುವಿನಲ್ಲಿ ಚಿಕಿತ್ಸೆ ಮುಂದುವರಿದಿದೆ. 10 ರಿಂದ 12 ದಿನಗಳ ಕಾಲ ಅವರು ವೈದ್ಯರ ನಿಗಾದಲ್ಲಿಯೇ ಇರಲಿದ್ದಾರೆ. ಕೋವಿಡ್​ ಜೊತೆಯಲ್ಲಿ ಲತಾ ಮಂಗೇಶ್ಕರ್​ರಿಗೆ ನ್ಯುಮೋನಿಯಾ ಕೂಡ ಇದೆ ಎಂದು ಹೇಳಿದ್ದಾರೆ.

ದೀದಿ ಸಂಪೂರ್ಣ ಆರೋಗ್ಯವಾಗಿದ್ದಾರೆ. ದೇವರು ನಿಜಕ್ಕೂ ದಯಾಮಯಿ, ಅವರು ಹೋರಾಟಗಾರ್ತಿ ಹಾಗೂ ತಮ್ಮ ಹೋರಾಟದಲ್ಲಿ ಜಯಶಾಲಿಯಾಗಿತ್ತಾರೆ ಎಂಬುದು ನಮಗೆಲ್ಲ ತಿಳಿದಿದೆ. ಲತಾ ಮಂಗೇಶ್ಕರ್​ರ ಶೀಘ್ರ ಚೇತರಿಕೆಗೆ ಪ್ರಾರ್ಥಿಸುತ್ತಿರುವ ಅವರ ಅಭಿಮಾನಿಗಳಿಗೆ ಧನ್ಯವಾದಗಳು. ಎಲ್ಲರೂ ಪ್ರಾರ್ಥಿಸಿದಾಗ ಯಾವುದೇ ರೀತಿಯ ಸಂಕಷ್ಟ ಎದುರಾಗೋದಿಲ್ಲ ಎಂದು ರಚನಾ ಶಾ ಹೇಳಿದ್ದಾರೆ.

ವೈದ್ಯರು ಕೂಡ ಅದ್ಭುತವಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಡಾ. ಪ್ರತೀಕ್​ ಸಂದಾನಿ ಕೂಡ ಲತಾ ಮಂಗೇಶ್ಕರ್​ ಆರೋಗ್ಯದ ಬಗ್ಗೆ ಹೇಳಿಕೆ ನೀಡಿದ್ದಾರೆ. ಅತ್ಯುತ್ತಮ ವೈದ್ಯರೇ ಲತಾ ಮಂಗೇಶ್ಕರ್​ರಿಗೆ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ರಚನಾ ಮಾಹಿತಿ ನೀಡಿದ್ದಾರೆ.

ಲತಾ ಮಂಗೇಶ್ಕರ್​ ಆರೋಗ್ಯದಲ್ಲಿ ಸುಧಾರಣೆ ಕಂಡು ಬರುತ್ತಿದೆ ಎನ್ನಲಾಗಿದ್ದು ಕುಟುಂಬಸ್ಥರಿಗೆ ಲತಾ ಮಂಗೇಶ್ಕರ್​ ಭೇಟಿಗೆ ಅನುಮತಿ ನಿರಾಕರಿಸಲಾಗಿದೆ ಎಂದು ಕುಟುಂಬಸ್ಥರು ಮಾಹಿತಿ ನೀಡಿದ್ದಾರೆ.

ಲತಾ ಮಂಗೇಶ್ಕರ್​ ಸಹೋದರಿ ಉಷಾ ಮಂಗೇಶ್ಕರ್​ ಕೂಡ ಈ ವಿಚಾರವಾಗಿ ಮಾಹಿತಿ ನೀಡಿದ್ದು ದೀದಿಗೆ ಕೋವಿಡ್​ ಇರುವ ಹಿನ್ನೆಲೆಯಲ್ಲಿ ನಮಗೆ ಅವರನ್ನು ಭೇಟಿ ಮಾಡಲು ಆಗುತ್ತಿಲ್ಲ. ಅಲ್ಲಿ ಅತ್ಯುತ್ತಮ ವೈದ್ಯರು ಹಾಗೂ ನರ್ಸ್​ಗಳು ಇದ್ದಾರೆ. ಲತಾ ಮಂಗೇಶ್ಕರ್​ ಸ್ವಲ್ಪ ಹೆಚ್ಚು ದಿನಗಳ ಕಾಲ ಆಸ್ಪತ್ರೆಯಲ್ಲಿರಬೇಕಾಗಿ ಬರಬಹುದು. ಅವರ ವಯಸ್ಸಿನ ಕಾರಣಕ್ಕೆ ಹೆಚ್ಚಿನ ದಿನ ಇಟ್ಟುಕೊಳ್ಳುತ್ತೇವೆ ಎಂದು ವೈದ್ಯರು ಹೇಳಿದ್ದಾರೆ ಅಂತಾ ಮಾಹಿತಿ ನೀಡಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...