alex Certify ಗಾಜಿಯಾಬಾದ್‌ನಲ್ಲಿ ಸೆರೆಯಾಗಿದೆ ಬೈಕ್‌-ಕಾರು ಅಪಘಾತದ ಭೀಕರ ದಶ್ಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಾಜಿಯಾಬಾದ್‌ನಲ್ಲಿ ಸೆರೆಯಾಗಿದೆ ಬೈಕ್‌-ಕಾರು ಅಪಘಾತದ ಭೀಕರ ದಶ್ಯ….!

ಗಾಜಿಯಾಬಾದ್‌ನ ಇಂದಿರಾಪುರಂನಲ್ಲಿ ಭಯಾನಕ ಅಪಘಾತವೊಂದು ಕ್ಯಾಮರಾದಲ್ಲಿ ಸೆರೆಯಾಗಿದೆ. ಬೈಕ್‌ಗೆ ಡಿಕ್ಕಿ ಹೊಡೆದ ಕಾರು ಸುಮಾರು ಒಂದು ಕಿಲೋ ಮೀಟರ್‌ವರೆಗೂ ಬೈಕ್‌ ಅನ್ನು ಎಳೆದೊಯ್ದಿದೆ.

ಆದರೆ ಕಾರು ಡಿಕ್ಕಿಯಾದ ರಭಸಕ್ಕೆ ಬೈಕ್‌ನಲ್ಲಿದ್ದ ಇಬ್ಬರು ಸವಾರರು ಪಕ್ಕಕ್ಕೆ ಬಿದ್ದಿದ್ದಾರೆ. ಕಾರಿನ ಬದಿಯಲ್ಲಿ ಬಿದ್ದಿದ್ದರೆ ಬಚಾವ್‌ ಆಗುತ್ತಿರಲಿಲ್ಲ. ಕಾರು ಬೈಕನ್ನು ಎಳೆದೊಯ್ಯುತ್ತಿರುವಾಗ ಬೆಂಕಿ ಕಿಡಿಗಳು ಅದರಿಂದ ಹೊರಹೊಮ್ಮುತ್ತಿದ್ದವು. ಈ ದೃಶ್ಯ ಕೂಡ ಕ್ಯಾಮರಾದಲ್ಲಿ ಸೆರೆಯಾಗಿದೆ.

ರಾತ್ರಿ 11.30 ರವೇಳೆಗೆ ನಡೆದ ಅಪಘಾತ ಇದು. ಕೌಶಂಬಿ ಗ್ರಾಮದ ಇಬ್ಬರು ನಿವಾಸಿಗಳು ಬೈಕ್‌ನಲ್ಲಿ ತೆರಳುತ್ತಿದ್ದರು. ಈ ವೇಳೆ ಕಾರು ಹಿಂದಿನಿಂದ ಡಿಕ್ಕಿ ಹೊಡೆದಿದೆ. ಇಬ್ಬರೂ ಎಗರಿ ಪಕ್ಕಕ್ಕೆ ಬಿದ್ದಿದ್ದಾರೆ, ಆದ್ರೆ ಕಾರಿಗೆ ಬೈಕ್‌ ಸಿಕ್ಕಿಹಾಕಿಕೊಂಡಿತ್ತು. ಕಾರನ್ನು ನಿಲ್ಲಿಸದೇ ಚಾಲಕ ಬೈಕನ್ನು ಎಳೆದುಕೊಂಡೇ ಹೋಗಿದ್ದಾನೆ.

ಬಳಿಕ ಕಾರು ಚಾಲಕನನ್ನು ಬಂಧಿಸಿರೋ ಪೊಲೀಸರು, ಗಾಯಗೊಂಡಿರೋ ಬೈಕ್‌ ಸವಾರರನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಈ ಭೀಕರ ಅಪಘಾತದ ದೃಶ್ಯಗಳು ಇಂಟರ್ನೆಟ್‌ನಲ್ಲಿ ಹರಿದಾಡ್ತಿದ್ದು, ಸಾರ್ವಜನಿಕರಲ್ಲಿ ಭೀತಿ ಹುಟ್ಟಿಸಿದೆ.

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...