alex Certify ಗರ್ಭಿಣಿಯರು ಮಾವಿನ ಹಣ್ಣು ತಿನ್ನಬೇಕಾ….? ತಜ್ಞರಿಂದಲೇ ಉತ್ತರ ತಿಳಿಯಿರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರ್ಭಿಣಿಯರು ಮಾವಿನ ಹಣ್ಣು ತಿನ್ನಬೇಕಾ….? ತಜ್ಞರಿಂದಲೇ ಉತ್ತರ ತಿಳಿಯಿರಿ

ಗರ್ಭಾವಸ್ಥೆಯಲ್ಲಿ ಮಹಿಳೆಯರು ಡಯಟ್‌ ಬಗ್ಗೆ ವಿಶೇಷ ಕಾಳಜಿ ವಹಿಸಬೇಕು. ಅಪಾಯ ತಂದೊಡ್ಡಬಲ್ಲ ಕೆಲವೊಂದು ಆಹಾರ ಪದಾರ್ಥಗಳಿಂದ ಗರ್ಭಿಣಿಯರು ದೂರವಿರಬೇಕು. ಗರ್ಭಾವಸ್ಥೆಯಲ್ಲಿ ಹಣ್ಣುಗಳ ಸೇವನೆ ಅತ್ಯಂತ ಸೂಕ್ತ. ಗರ್ಭಿಣಿಯರು ಎಲ್ಲಾ ರೀತಿಯ ಹಣ್ಣುಗಳನ್ನು ಸೇವಿಸಬಹುದು. ಆದರೆ ಈ ಸಮಯದಲ್ಲಿ ಮಧುಮೇಹದ ಅಪಾಯವು ಹೆಚ್ಚಾಗುವುದರಿಂದ ಹೆಚ್ಚಿನ ಮಹಿಳೆಯರು ಮಾವಿನ ಹಣ್ಣನ್ನು ತಿನ್ನುವುದಿಲ್ಲ. ಗರ್ಭಾವಸ್ಥೆಯಲ್ಲಿ ಮಹಿಳೆಯರು ಮಾವಿನಹಣ್ಣನ್ನು ತಿನ್ನಬೇಕೇ? ಬೇಡವೇ ಎಂಬ ಬಗ್ಗೆ ವೈದ್ಯರ ಸಲಹೆ ಏನಿದೆ ಅನ್ನೋದನ್ನು ನೋಡೋಣ.

ಗರ್ಭಿಣಿಯರು ಮಾವಿನ ಹಣ್ಣನ್ನು ತಿನ್ನಬಹುದು, ಆದರೆ ಅತಿಯಾಗಿ ಸೇವನೆ ಮಾಡುವಂತಿಲ್ಲ. ಮಾವಿನ ಹಣ್ಣಿನಲ್ಲಿ ವಿಟಮಿನ್ ಸಿ ಸಾಕಷ್ಟು ಪ್ರಮಾಣದಲ್ಲಿದೆ. ದಿನಕ್ಕೆ ಒಂದು ಕಪ್‌ನಷ್ಟು ಮಾವಿನ ಹಣ್ಣಿನ ಹೋಳುಗಳನ್ನು ತಿನ್ನಬಹುದು, ಅದಕ್ಕಿಂತ ಜಾಸ್ತಿ ಸೇವಿಸುವಂತಿಲ್ಲ. ಒಂದು ಕಪ್ ಮಾವಿನ ಹೋಳುಗಳಲ್ಲಿ ಇಡೀ ದಿನಕ್ಕೆ ಬೇಕಾದಷ್ಟು ವಿಟಮಿನ್‌ ಸಿ ಇರುತ್ತದೆ. ಅಂಗಾಂಶಗಳನ್ನು ಸರಿಪಡಿಸುವುದರ ಜೊತೆಗೆ, ವಿಟಮಿನ್ ಸಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಮತ್ತು ಮಕ್ಕಳ ಹಲ್ಲು, ಮೂಳೆಗಳನ್ನು ಅಭಿವೃದ್ಧಿಪಡಿಸಲು ಸಹಕಾರಿಯಾಗಿದೆ.

ಮಾವಿನಲ್ಲಿ ವಿಟಮಿನ್ ಸಿ ಮಾತ್ರವಲ್ಲ, ವಿಟಮಿನ್ ಎ ಕೂಡ ಉತ್ತಮ ಪ್ರಮಾಣದಲ್ಲಿ ಕಂಡುಬರುತ್ತದೆ. ಜನನದ ಸಮಯದಲ್ಲಿ ವಿಟಮಿನ್ ಎ ಕೊರತೆಯು ಮಗುವಿನ ರೋಗನಿರೋಧಕ ಶಕ್ತಿಯನ್ನು ದುರ್ಬಲಗೊಳಿಸುತ್ತದೆ. ಅತಿಸಾರ ಮತ್ತು ಉಸಿರಾಟದ ಸೋಂಕುಗಳಿಗೆ ಇದು ಕಾರಣವಾಗಬಹುದು. ಮಾವಿನ ಹಣ್ಣಿನಲ್ಲಿ ಅನೇಕ ಅಗತ್ಯ ಪೋಷಕಾಂಶಗಳು ಕಂಡುಬರುತ್ತವೆ. ಇದು ಉತ್ಕರ್ಷಣ ನಿರೋಧಕಗಳು ಮತ್ತು ಶಕ್ತಿಯ ಉತ್ತಮ ಮೂಲವೆಂದು ಪರಿಗಣಿಸಲಾಗಿದೆ.

ಗರ್ಭಾವಸ್ಥೆಯಲ್ಲಿ ಮಹಿಳೆಯರು ಮಾವಿನ ಹಣ್ಣನ್ನು ಸೇವಿಸಿದರೆ ರಕ್ತಹೀನತೆಯನ್ನು ತಡೆಯಬಹುದು. ಭ್ರೂಣವು ಚೆನ್ನಾಗಿ ಬೆಳವಣಿಗೆಯಾಗುತ್ತದೆ. ದ್ರವ ಸಮತೋಲನವನ್ನು ಕಾಯ್ದುಕೊಳ್ಳಬಹುದು. ಜೊತೆಗೆ ಪ್ರಿಕ್ಲಾಂಪ್ಸಿಯಾದ ಅಪಾಯವು ಕಡಿಮೆಯಾಗುತ್ತದೆ. ಗರ್ಭಿಣಿಯರು ಮಾವಿನ ಹಣ್ಣನ್ನು ತಿನ್ನುವಾಗ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು. ಇದನ್ನು ಸೀಮಿತ ಪ್ರಮಾಣದಲ್ಲಿ ಮಾತ್ರ ಸೇವಿಸಿ. ಏಕೆಂದರೆ ಹೆಚ್ಚು ತಿನ್ನುವುದು ಅತಿಸಾರ ಮತ್ತು ನಿರ್ಜಲೀಕರಣದ ಸಮಸ್ಯೆಗೆ ಕಾರಣವಾಗಬಹುದು. ಇದಲ್ಲದೆ, ಗರ್ಭಾವಸ್ಥೆಯ ಮಧುಮೇಹ ಮತ್ತು ತೂಕ ಹೆಚ್ಚಾಗುವ ಸಮಸ್ಯೆಯೂ ಉದ್ಭವಿಸಬಹುದು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...