
ಡೈರಿ ಉತ್ಪನ್ನಗಳಲ್ಲಿ ಕ್ಯಾಲ್ಸಿಯ, ಪ್ರೋಟೀನ್, ವಿಟಮಿನ್ ಡಿ, ರಂಜಕ ಮತ್ತು ಇತರ ಅಗತ್ಯ ಜೀವಸತ್ವ ಮತ್ತು ಖನಿಜಗಳಿವೆ. ಇದನ್ನು ಗರ್ಭಿಣಿಯರು ಸೇವಿಸಿದರೆ ಆರೋಗ್ಯವಂತ ಮಗುವಿಗೆ ಜನ್ಮ ನೀಡಬಹುದು.
ಹೌದು, ಡೈರಿ ಉತ್ಪನ್ನಗಳಿಂದ ಮಗುವಿನ ಮೂಳೆಗಳು, ಹಲ್ಲುಗಳು, ಸ್ನಾಯುಗಳು, ಹೃದಯ ಮತ್ತು ನರಗಳ ಬೆಳವಣಿಗೆಗೆ ಉತ್ತಮವಾಗುತ್ತದೆ.
ಆದಕಾರಣ ಗರ್ಭಿಣಿಯರು ದಿನಕ್ಕೆ 3ರಿಂದ 4 ಬಾರಿ ಡೈರಿ ಉತ್ಪನ್ನಗಳನ್ನು ಸೇವಿಸುವುದರ ಮೂಲಕ 1000 ಮೈಕ್ರೋಗ್ರಾಂ ಕ್ಯಾಲ್ಸಿಯಂ ನ್ನು ಪೂರೈಸಬಹುದು. ದಿನಕ್ಕೆ 1ಕಪ್ ಹಾಲು, 1 ಕಪ್ ಮೊಸರು, 1 ಕಪ್ ಮಜ್ಜಿಗೆ, 1 ಕಪ್ ಕಸ್ಟರ್ಡ್ ನ್ನು ತಿನ್ನಬಹುದು.
ಆದರೆ ಕೆಲವೊಂದು ಡೈರಿ ಉತ್ಪನ್ನಗಳು ನಿಮಗೆ ಹಾನಿಯನ್ನುಂಟು ಮಾಡಬಹುದು. ಪಾಶ್ಚರೀಕರಿಸದ ಡೈರಿ ಉತ್ಪನ್ನಗಳನ್ನು ಸೇವಿಸಬೇಡಿ. ಅವುಗಳಲ್ಲಿ ಹಾನಿಕಾರಕ ಬ್ಯಾಕ್ಟೀರಿಯಾಗಳಿದ್ದು, ಅವು ಭ್ರೂಣಕ್ಕೆ ಹಾನಿ ಮಾಡಬಹುದು. ಹಾಗೇ ಸಂಸ್ಕರಿಸಿದ ಚೀಸ್, ಮೊಸರನ್ನು ಸೇವಿಸಬೇಡಿ.