alex Certify ಗರಿ ಗರಿಯಾದ ‘ಹೆಸರು ಬೇಳೆ’ ಚಕ್ಕುಲಿ ಮಾಡುವ ವಿಧಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗರಿ ಗರಿಯಾದ ‘ಹೆಸರು ಬೇಳೆ’ ಚಕ್ಕುಲಿ ಮಾಡುವ ವಿಧಾನ

ಬೇಕಾಗುವ ಸಾಮಗ್ರಿಗಳು : ಅಕ್ಕಿ ಹಿಟ್ಟು- 4 ಕಪ್, ಹೆಸರು ಬೇಳೆ- 1 ಕಪ್, ಇಂಗು ಪುಡಿ- 1 ಚಮಚ, ಖಾರದ ಪುಡಿ- 1 1/2 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಎಣ್ಣೆ- ಕರಿಯಲು, ತೆಂಗಿನ ಹಾಲು-1/2 ಕಪ್.

ಮಾಡುವ ವಿಧಾನ : ಹೆಸರು ಬೇಳೆಯನ್ನು ಚೆನ್ನಾಗಿ ಬೇಯಿಸಿಕೊಂಡು 1 ಬೌಲ್ ಗೆ ಹಾಕಿ, ನಂತರ ಅದಕ್ಕೆ ಅಕ್ಕಿ ಹಿಟ್ಟು, ಇಂಗು, ಖಾರದ ಪುಡಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಮಿಕ್ಸ್ ಮಾಡಿ ತೆಂಗಿನ ಹಾಲು ಹಾಕಿ ಮೃದುವಾಗಿ ಹಿಟ್ಟನ್ನು ಕಲಸಿಕೊಳ್ಳಿ.

ಚೆನ್ನಾಗಿ ಮಿಶ್ರಣವಾದ ಹಿಟ್ಟನ್ನು ಚಕ್ಕುಲಿ ಒರಳಿನ ಮೂಲಕ ಕಾದ ಎಣ್ಣೆಯಲ್ಲಿ ಚಕ್ಕುಲಿ ಒತ್ತಿ ಕರಿಯಿರಿ ಈಗ ಗರಿ ಗರಿಯಾದ ಹೆಸರುಬೇಳೆ ಚಕ್ಕುಲಿ ಸವಿಯಲು ಸಿಧ್ಧ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...