alex Certify ಗಮನಿಸಿ: ಶಿವಮೊಗ್ಗ – ಬೆಂಗಳೂರು ಮಾರ್ಗದ ನಡುವೆ ಸಂಚರಿಸುವ ಕೆಲ ರೈಲು ಸಂಚಾರ ರದ್ದು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಮನಿಸಿ: ಶಿವಮೊಗ್ಗ – ಬೆಂಗಳೂರು ಮಾರ್ಗದ ನಡುವೆ ಸಂಚರಿಸುವ ಕೆಲ ರೈಲು ಸಂಚಾರ ರದ್ದು

ಶಿವಮೊಗ್ಗ – ಬೆಂಗಳೂರು ನಡುವೆ ಸಂಚರಿಸಲು ರೈಲು ಪ್ರಯಾಣ ಅತ್ಯುತ್ತಮ. ಈಗ ಬಹಳಷ್ಟು ರೈಲುಗಳು ಸಂಚರಿಸುತ್ತಿರುವುದರಿಂದ ಅಗತ್ಯ ಕಾರ್ಯಗಳಿಗೆ ತೆರಳುವವರು ಬೆಳಿಗ್ಗೆ ಹೋಗಿ ಸಂಜೆ ಬರಬಹುದಾಗಿದೆ.

ಆದರೆ ಇದೀಗ ಮೈಸೂರು ವಿಭಾಗದ ಬಾಣಾವರ ಮತ್ತು ಬಳ್ಳೇಕೆರೆ ನಡುವೆ ತುರ್ತು ಕಾಮಗಾರಿ ನಡೆಯುತ್ತಿರುವ ಕಾರಣ ಶಿವಮೊಗ್ಗ – ತುಮಕೂರು, ಶಿವಮೊಗ್ಗ – ಬೆಂಗಳೂರು ನಡುವೆ ಸಂಚರಿಸುವ ಕೆಲ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿದೆ.

ತುಮಕೂರು – ಶಿವಮೊಗ್ಗ (16567) ನಡುವೆ ಸಂಚರಿಸುವ ರೈಲು ಜೂನ್ 11, 18, 25, ಜುಲೈ 7, 9ರಂದು ರದ್ದುಗೊಂಡಿದೆ. ಹಾಗೆಯೇ ಶಿವಮೊಗ್ಗ – ತುಮಕೂರು (16568) ನಡುವೆ ಸಂಚರಿಸುವ ಡೈಲಿ ಎಕ್ಸ್ ಪ್ರೆಸ್ ರೈಲು ಜೂನ್ 12, 19, 26, ಜುಲೈ 8, 10ರಂದು ಸಂಚರಿಸುವುದಿಲ್ಲ.

ಬೆಂಗಳೂರು – ಶಿವಮೊಗ್ಗ ಟೌನ್ (12089) ನಡುವೆ ಸಂಚರಿಸುವ ಜನಶತಾಬ್ದಿ ಡೈಲಿ ಎಕ್ಸ್ ಪ್ರೆಸ್ ರೈಲು ಜೂನ್ 11, 18, 25, ಜುಲೈ 7, 9 ರಂದು, ಶಿವಮೊಗ್ಗ ಟೌನ್ – ಕೆಂಪೇಗೌಡ ರೈಲ್ವೆ ನಿಲ್ದಾಣ ಬೆಂಗಳೂರು ನಡುವೆ ಸಂಚರಿಸುವ ರೈಲು ಜೂನ್ 12, 19, 26, ಜುಲೈ 8, 10 ರಂದು ಶಿವಮೊಗ್ಗ ಮತ್ತು ಅರಸೀಕೆರೆ ನಡುವೆ ಭಾಗಶಃ ಇರುವುದಿಲ್ಲ ಎಂದು ತಿಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...