alex Certify ಗಣಪತಿ ಪೆಂಡಾಲ್‌ಗೆ ಬಂದ ಶಾರುಖ್‌ ಪುತ್ರ ಅಬ್ರಾಹಂ; ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಣಪತಿ ಪೆಂಡಾಲ್‌ಗೆ ಬಂದ ಶಾರುಖ್‌ ಪುತ್ರ ಅಬ್ರಾಹಂ; ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ ವಿಡಿಯೋ

ಗೌರಿ ಗಣೇಶ ಹಬ್ಬವನ್ನು ಬಾಲಿವುಡ್‌ ಸೆಲೆಬ್ರಿಟಿಗಳು ಜೋರಾಗಿ ಆಚರಿಸ್ತಾರೆ. ಜಾತಿ ಧರ್ಮದ ಬೇಧವಿಲ್ಲದೆ ಪ್ರತಿಯೊಬ್ಬರೂ ವಿಘ್ನವಿನಾಯಕನನ್ನು ಮನೆಗೆ ತಂದು ಆರಾಧಿಸುವುದು ವಿಶೇಷ. ನಟ ಶಾರುಖ್‌ ಖಾನ್‌ ಕೂಡ ಪ್ರತಿವರ್ಷ ಗಣಪನನ್ನು ಕೂರಿಸಿ ಪೂಜೆಯನ್ನು ನೆರವೇರಿಸುತ್ತಾರೆ.

ಈ ಬಾರಿ ಕೂಡ ಶಾರುಖ್‌ ಮನೆಯಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಲಾಗಿತ್ತು. ಮನೆಯಲ್ಲಿ ಗಣೇಶ ಹಬ್ಬವನ್ನು ಸೆಲೆಬ್ರೇಟ್‌ ಮಾಡಿದ ಕಿಂಗ್‌ ಖಾನ್‌ರ ಕಿರಿಯ ಪುತ್ರ ಅಬ್ರಾಹಂ, ನಂತರ ಮುಂಬೈನ ಅತ್ಯಂತ ಜನಪ್ರಿಯ ಗಣಪತಿ ಪೆಂಡಾಲ್‌ಗಳಲ್ಲಿ ಒಂದಾದ ಲಾಲ್‌ಬಾಗ್ಚಾ ರಾಜಾಗೆ ಭೇಟಿ ನೀಡಿದ್ದರು.

ಅಬ್ರಾಹಂ ಗಣಪತಿ ದರ್ಶನಕ್ಕೆ ಆಗಮಿಸಿದ್ದ ವಿಡಿಯೋ ಇಂಟರ್ನೆಟ್‌ನಲ್ಲಿ ವೈರಲ್‌ ಆಗಿದೆ. SRK ಅಂಗರಕ್ಷಕ ರವಿ ಸಿಂಗ್ ಮತ್ತು ಇತರ ಭದ್ರತಾ ಸಿಬ್ಬಂದಿಯೊಂದಿಗೆ ಅಬ್ರಾಹಂ ಆಗಮಿಸಿದ್ದ. ಗಣೇಶ ಚತುರ್ಥಿ ಸಂದರ್ಭದಲ್ಲಿ ಲಾಲ್‌ಬೌಚಾ ರಾಜ ಪೆಂಡಾಲ್‌ನ ಹೊರಭಾಗದಲ್ಲಿ ಅಬ್ರಾಹಂ ನಿಂತಿರುವ ವಿಡಿಯೋ ಲಭ್ಯವಾಗಿದೆ.

ಆಗಸ್ಟ್ 31ರಂದು ಶಾರುಖ್‌ ಕೂಡ ಗಣಪತಿಯ ವಿಗ್ರಹವನ್ನು ಮನೆಗೆ ತಂದಿದ್ದರು. ಆ ಫೋಟೋವನ್ನು ಸಹ ಶೇರ್‌ ಮಾಡಿದ್ದರು. ಎಲ್ಲರಿಗೂ ಗೌರಿ ಗಣೇಶ ಹಬ್ಬದ ಶುಭಾಶಯ ತಿಳಿಸಿದ್ದರು. ಈ ಮಧ್ಯೆ ಶಾರುಖ್ ಖಾನ್ ನಾಲ್ಕು ವರ್ಷಗಳ ನಂತರ ಬೆಳ್ಳಿತೆರೆಗೆ ಮರಳಲು ಸಿದ್ಧರಾಗಿದ್ದಾರೆ. 2023ರ ಜನವರಿ 25ರಂದು ಶಾರುಖ್‌ ಅಭಿನಯದ ಪಠಾಣ್‌ ಚಿತ್ರ ರಿಲೀಸ್‌ ಆಗಲಿದೆ. ಈ ಸಿನೆಮಾದಲ್ಲಿ ದೀಪಿಕಾ ಪಡುಕೋಣೆ ಮತ್ತು ಜಾನ್ ಅಬ್ರಹಾಂ ಕೂಡ ನಟಿಸಿದ್ದಾರೆ.

https://www.instagram.com/reel/Ch9cNBtoYNP/?utm_source=ig_embed&ig_rid=a889596e-eca6-465c-8f8f-f648b81e56c9

 

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...