alex Certify ಗಗನಚುಂಬಿ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ; ಎದೆ ನಡುಗಿಸುತ್ತೆ ಇದರ ವಿಡಿಯೋ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗಗನಚುಂಬಿ ಕಟ್ಟಡದ ಮೇಲೆ ರಷ್ಯಾ ಕ್ಷಿಪಣಿ ದಾಳಿ; ಎದೆ ನಡುಗಿಸುತ್ತೆ ಇದರ ವಿಡಿಯೋ

ರಷ್ಯಾ ಹಾಗೂ ಉಕ್ರೇನ್‌ ನಡುವಣ ಯುದ್ಧ ಅತ್ಯಂತ ಭೀಕರವಾಗಿದೆ. ರಷ್ಯಾ ಪಡೆಗಳು ಉಕ್ರೇನ್‌ ರಾಜಧಾನಿ ಕೀವ್‌ ನಗರವನ್ನು ಛಿದ್ರ ಛಿದ್ರ ಮಾಡುತ್ತಿವೆ. ಕ್ಷಣಕ್ಷಣಕ್ಕೂ ಗುಂಡಿನ ಮೊರೆತ, ಆಗಾಗ್ಗೆ ಬಂದಪ್ಪಳಿಸುವ ಕ್ಷಿಪಣಿಗಳು ಉಕ್ರೇನಿಯನ್ನರನ್ನು ನಡುಗಿಸಿಬಿಟ್ಟಿವೆ.

ಕೀವ್‌ ನಲ್ಲಿರೋ ಗಗನಚುಂಬಿ ಅಪಾರ್ಟ್‌ ಮೆಂಟ್‌ ಒಂದರ ಮೇಲೆ ರಷ್ಯಾ ಕ್ಷಿಪಣಿ ದಾಳಿ ಮಾಡಿದೆ. ಈ ವಿಡಿಯೋ ಸೆರೆ ಸಿಕ್ಕಿದ್ದು, ಅದರ ಭೀಕರತೆ ಎದೆ ನಡುಗಿಸುವಂತಿದೆ. ಝುಲಿಯನಿ ಎಂಬ ಜಿಲೆಯಲ್ಲಿರೋ ಈ ಅಪಾರ್ಟ್ಮೆಂಟ್‌ ಅನ್ನು ರಷ್ಯಾ ಪುಡಿಗಟ್ಟಿದೆ.

ಸುಮಾರು 5 ಮಹಡಿಗಳು ಕ್ಷಿಪಣಿ ದಾಳಿಗೆ ಸಂಪೂರ್ಣ ಛಿದ್ರವಾಗಿವೆ. ದಾಳಿಯಲ್ಲಿ ಹಲವರು ಮೃತಪಟ್ಟಿದ್ದಾರೆ. ಇನ್ನಷ್ಟು ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅವರನ್ನೆಲ್ಲ ರಕ್ಷಿಸುವ ಕಾರ್ಯ ಚುರುಕುಗೊಂಡಿದೆ. ಇಷ್ಟೆಲ್ಲಾ ಸಾವು-ನೋವು ಸಂಭವಿಸುತ್ತಿದ್ರೂ ಹಠ ಬಿಡದ ರಷ್ಯಾ, ಉಕ್ರೇನ್‌ ಮೇಲೆ ದಾಳಿಯನ್ನು ಮುಂದುವರಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...