alex Certify ‘ಗಂಗೂಬಾಯಿ’ ರಿಲೀಸ್​ಗೂ ಮುನ್ನವೇ ವಿವಾದ..! ಇವೆಲ್ಲ ಪ್ರಚಾರಕ್ಕಾಗಿ ಎಂದ ಬನ್ಸಾಲಿ ಪ್ರೊಡಕ್ಷನ್ ಪರ ವಕೀಲ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಗಂಗೂಬಾಯಿ’ ರಿಲೀಸ್​ಗೂ ಮುನ್ನವೇ ವಿವಾದ..! ಇವೆಲ್ಲ ಪ್ರಚಾರಕ್ಕಾಗಿ ಎಂದ ಬನ್ಸಾಲಿ ಪ್ರೊಡಕ್ಷನ್ ಪರ ವಕೀಲ

ಬಾಲಿವುಡ್ ನಟಿ ಆಲಿಯಾ ಭಟ್​ ಮುಖ್ಯ ಭೂಮಿಕೆಯಲ್ಲಿ ನಟಿಸಿರುವ ಗಂಗೂಬಾಯಿ ಸಿನಿಮಾ ಇದೇ ಶುಕ್ರವಾರದಂದು ರಿಲೀಸ್​ ಆಗಲಿದೆ.

ಆದರೆ ಇದಕ್ಕೂ ಮುನ್ನ ಗಂಗೂಬಾಯಿ ಸಿನಿಮಾದ ವಿರುದ್ಧ ಸಲ್ಲಿಕೆಯಾದ ಮೂರು ಅರ್ಜಿಗಳ ವಿಚಾರಣೆಯನ್ನು ಹೈಕೋರ್ಟ್ ಇಂದು ನಡೆಸಿದೆ.

ಸಿನಿಮಾದ ಟ್ರೇಲರ್​ನಲ್ಲಿ ಬಳಕೆಯಾದ ‘ಚೀನಾ’ ಎಂಬ ಪದದ ವಿರುದ್ಧ ಅರ್ಜಿಯನ್ನು ಸಲ್ಲಿಸಲಾಗಿದೆ. ಸಿನಿಮಾದಲ್ಲಿ ದಂತ ವೈದ್ಯರ ಬಳಿ ತೆರಳುವ ಗಂಗೂಬಾಯಿ, ನೀವೇನು ಪೂರ್ತಿ ಚೀನಾವನ್ನು ನನ್ನ ಬಾಯಿಯೊಳಗೆ ಹಾಕುತ್ತೀರಾ..? ಎಂದು ಕೇಳುತ್ತಾಳೆ.

ಇದನ್ನು ವಿರೋಧಿಸಿ ಅರ್ಜಿ ಸಲ್ಲಿಸಿರುವ ವಕೀಲ ಅಶೋಕ್​ ಸರಗಿ ದೇಶದ ಈಶಾನ್ಯ ಭಾಗದ ಜನರು ಚೀನಾದೊಂದಿಗೆ ಸಂಪರ್ಕ ಹೊಂದಿದ್ದಾರೆ. ನಮ್ಮದೇ ಜನರ ಭಾವನೆಗಳಿಗೆ ಏಕೆ ನೋವುಂಟು ಮಾಡುತ್ತೀರಿ..? ಎಂದು ಕೇಳಿದ್ದಾರೆ. ಆದರೆ ಈ ಸಿನಿಮಾದ ಬಿಡುಗಡೆಗೆ ನನ್ನಿಂದ ಯಾವುದೇ ವಿರೋಧವಿಲ್ಲ ಎಂದಿದ್ದಾರೆ.

ಇದೊಂದು ಆಧಾರವಿಲ್ಲದ ವಾದವಾದ್ದರಿಂದ ಈ ಅರ್ಜಿಯನ್ನು ಕೂಡಲೇ ವಜಾಗೊಳಿಸಬೇಕು ಎಂದು ಬನ್ಸಾಲಿ ಪ್ರೊಡಕ್ಷನ್ ಪರ ವಕೀಲ ರವಿ ಕದಂ ಹೇಳಿದ್ದಾರೆ.

ಈ ಪ್ರದೇಶವು ಸಾಂಪ್ರದಾಯಿಕ ಚೀನಿ ವೈದ್ಯರನ್ನು ಹೊಂದಿದೆ. ಇದಕ್ಕೂ ಈಶಾನ್ಯ ಭಾಗದ ನಿವಾಸಿಗಳಿಗೂ ಯಾವುದೇ ಸಂಬಂಧವಿಲ್ಲ. ಚೀನಾದ ವೈದ್ಯರ ಜೊತೆಯಲ್ಲಿ ದಂತ ಸಮಸ್ಯೆಯ ಬಗ್ಗೆ ಚರ್ಚಿಸುತ್ತಿರುವ ದೃಶ್ಯವನ್ನು ತೋರಿಸಿದರೆ ಅದರಲ್ಲಿ ತಪ್ಪೇನಿದೆ..? ಎಂದು ಪ್ರಶ್ನೆ ಮಾಡಿದ್ದಾರೆ.

ಸಿನಿಮಾದಲ್ಲಿ ದಂತವೈದ್ಯರ ಬೋರ್ಡ್​ನಲ್ಲಿ ಅವರು ಚೀನಾದ ವೈದ್ಯ ಎಂಬುದನ್ನು ಸ್ಪಷ್ಟವಾಗಿ ತೋರಿಸಲಾಗಿದೆ. ಕಾಮಟಿಪುರದಲ್ಲಿ ಚೈನೀಸ್​ ಸ್ಮಶಾನವಿದೆ. ವಾಸ್ತವದಲ್ಲಿ ಮುಂಬೈನ ಎರಡು ಹಳೆಯ ಚೈನೀಸ್​ ರೆಸ್ಟಾರೆಂಟ್​ಗಳಲ್ಲಿ ಒಂದು ಕಾಮಟಿಪುರದಲ್ಲಿತ್ತು. ಇವೆಲ್ಲ ಐತಿಹಾಸಿಕವಾಗಿ ಸಾಬೀತುಮಾಡಬಹುದಾದ ಸತ್ಯವಾಗಿದೆ. ಈ ಚಿತ್ರವು 1950ರ ದಶಕದ ಘಟನೆಗಳನ್ನು ಆಧರಿಸಿದೆ ಎಂದು ಕೋರ್ಟ್​ ಮುಂದೆ ವಕೀಲ ರವಿ ಕದಂ ವಾದಿಸಿದ್ದಾರೆ.

ಅಲ್ಲದೇ ಈ ಸಿನಿಮಾವು ಮಾಫಿಯಾ ಕ್ವೀನ್ಸ್​ ಆಫ್​ ಮುಂಬೈ ಎಂಬ ಪುಸ್ತಕವನ್ನು ಆಧರಿಸಿದೆ. ಈ ಪುಸ್ತಕವನ್ನು ಎಸ್​ ಹುಸೇನ್​ ಜೈದಿ ಹಾಗೂ ಜೇನ್​ ಬೋರ್ಗೆಸ್​ ಬರೆದಿದ್ದಾರೆ ಎಂದು ಹೈಕೋರ್ಟ್​ಗೆ ರವಿ ಕದಂ ಹೇಳಿದರು. ಮತ್ತೊಂದು ಅರ್ಜಿಯಲ್ಲಿ ಸಿನಿಮಾದಲ್ಲಿ ಕಥಿಯಾವಾಡಿ ಹಾಗೂ ಕಾಮಟಿಪುರ ಎಂಬ ಊರಿನ ಹೆಸರುಗಳನ್ನು ಬಳಕೆ ಮಾಡದಂತೆ ಕೋರ್ಟ್ ಆದೇಶ ನೀಡಬೇಕೆಂದು ಮನವಿ ಮಾಡಲಾಗಿದೆ.

ಈ ಅರ್ಜಿದಾರರು ಪ್ರಚಾರದ ಆಸೆಗಾಗಿ ಗಂಗೂಬಾಯಿ ಸಿನಿಮಾದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ್ದಾರೆ. ನ್ಯಾಯಾಲಯದ ಸಮಯವನ್ನು ವ್ಯರ್ಥ ಮಾಡಿದ್ದಕ್ಕೆ ಇಂತವರಿಗೆ ಭಾರೀ ದಂಡವನ್ನು ವಿಧಿಸಬೇಕು ಎಂದು ಬನ್ಸಾಲಿ ಪ್ರೊಡಕ್ಷನ್ ಪರ ವಕೀಲ ರವಿ ಕದಂ ಆಗ್ರಹಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...