alex Certify ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ದೇಸಿ ತುಪ್ಪ ಸೇವಿಸಿ ಪಡೆಯಿರಿ ಈ ಆರೋಗ್ಯ ಲಾಭ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ದೇಸಿ ತುಪ್ಪ ಸೇವಿಸಿ ಪಡೆಯಿರಿ ಈ ಆರೋಗ್ಯ ಲಾಭ

ನಮ್ಮಲ್ಲಿ ಹಲವಾರು ಜನರು ತೂಕ ಇಳಿಸಿಕೊಳ್ಳಲು ಡಯೆಟ್ ಮಾಡುತ್ತಾರೆ. ಅದರಲ್ಲೂ ಎಣ್ಣೆಯುಕ್ತ ಆಹಾರದಿಂದ ಮಾರುದ್ದ ದೂರವಿರುತ್ತಾರೆ. ಅಷ್ಟೇ ಅಲ್ಲ ತುಪ್ಪವನ್ನೂ ಅಷ್ಟೇ ದೂರವಿಡುತ್ತಾರೆ. ಆದರೆ, ದೇಸಿ ತುಪ್ಪವನ್ನು ಮಾತ್ರ ಎಂದಿಗೂ ದೂರವಿರಿಸಬೇಡಿ. ಏಕೆಂದರೆ, ಇದು ಆರೋಗ್ಯಕ್ಕೆ ಬಹಳ ಒಳ್ಳೆಯದು ಎಂದು ಪರಿಗಣಿಸಲಾಗಿದೆ.

ದೇಸಿ ತುಪ್ಪ ತಿನ್ನುವುದು ಆಹಾರದ ರುಚಿಯನ್ನು ಹೆಚ್ಚಿಸುವುದಲ್ಲದೆ ಆರೋಗ್ಯಕ್ಕೂ ಪ್ರಯೋಜನವನ್ನು ನೀಡುತ್ತದೆ ಎಂದು ಖ್ಯಾತ ಪೌಷ್ಟಿಕತಜ್ಞ ಅವಂತಿ ದೇಶಪಾಂಡೆ ತಿಳಿಸಿದ್ದಾರೆ. ನೀವು ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ಸೇವಿಸಿದರೆ ಅದು ನಿಮಗೆ ಅದ್ಭುತವಾದ ಪ್ರಯೋಜನಗಳನ್ನು ನೀಡುತ್ತದೆ.

ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ದೇಸಿ ತುಪ್ಪ ತಿನ್ನುವುದರಿಂದ ಏನೆಲ್ಲಾ ಪ್ರಯೋಜನಗಳಿವೆ ಬನ್ನಿ ನೋಡೋಣ..

  1. ಖಾಲಿ ಹೊಟ್ಟೆಯಲ್ಲಿ ತುಪ್ಪವನ್ನು ತಿನ್ನುವುದು ಚರ್ಮಕ್ಕೆ ಪ್ರಯೋಜನಕಾರಿ ಎಂದು ಪರಿಗಣಿಸಲಾಗಿದೆ. ಹೀಗೆ ಮಾಡುವುದರಿಂದ ಮುಖದಲ್ಲಿ ಹೊಳಪು ಬರುತ್ತದೆ.
  2. ದೇಸಿ ತುಪ್ಪವನ್ನು ತಿನ್ನುವುದರಿಂದ, ಜೀರ್ಣಾಂಗ ವ್ಯವಸ್ಥೆಯು ಆರೋಗ್ಯಕರವಾಗಿರುತ್ತದೆ. ಇದರಿಂದಾಗಿ ಹೊಟ್ಟೆಗೆ ಸಂಬಂಧಿಸಿದ ಯಾವುದೇ ಸಮಸ್ಯೆ ಇರುವುದಿಲ್ಲ.
  3. ಬೆಳಗ್ಗೆ ಎದ್ದ ನಂತರ ಖಾಲಿ ಹೊಟ್ಟೆಯಲ್ಲಿ ಒಂದು ಚಮಚ ತುಪ್ಪವನ್ನು ಸೇವಿಸುವುದರಿಂದ ಹೊಟ್ಟೆಯಲ್ಲಿ ಉತ್ತಮ ಕಿಣ್ವಗಳನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
  4. ಮಲಬದ್ಧತೆಯಿಂದ ಬಳಲುತ್ತಿರುವವರು ಬೆಳಿಗ್ಗೆ ತುಪ್ಪವನ್ನು ತಿನ್ನಬೇಕು, ಇದು ಕರುಳಿನ ಚಲನೆಯನ್ನು ಸುಧಾರಿಸುತ್ತದೆ.
  5. ದೇಸಿ ತುಪ್ಪ ಹಸಿವನ್ನು ನಿಯಂತ್ರಿಸುತ್ತದೆ ಮತ್ತು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
  6. ತುಪ್ಪ ತಿಂದರೆ ಎಲುಬುಗಳು ಬಲಿಷ್ಠವಾಗುತ್ತವೆ ಮತ್ತು ದೇಹ ದುರ್ಬಲವಾಗುವುದಿಲ್ಲ.

ಮನೆಯಲ್ಲಿಯೇ ತುಪ್ಪ ತಯಾರಿಸಿ:

ನಾವು ಮಾರುಕಟ್ಟೆಯಿಂದ ತುಪ್ಪವನ್ನು ಖರೀದಿಸಿದಾಗ, ಎಣ್ಣೆ ಮತ್ತು ಕೊಬ್ಬನ್ನು ಹೆಚ್ಚಾಗಿ ಬೆರೆಸುವುದರಿಂದ ಅದು ಅಸಲಿಯೋ ಅಲ್ಲವೋ ಎಂಬ ಅನುಮಾನವಿರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮನೆಯಲ್ಲಿ ತುಪ್ಪವನ್ನು ತಯಾರಿಸುವುದು ಉತ್ತಮ. ಇದು ಕಷ್ಟಕರವಾದ ಕೆಲಸವಲ್ಲ. ಇದನ್ನು ಮಾಡಲು, ಹಾಲನ್ನು ಬಿಸಿ ಮಾಡಿ ಅದರಿಂದ ಬಂದ ಕೆನೆಯನ್ನು ಒಂದು ಬಾಕ್ಸ್ ನಲ್ಲಿ ಶೇಖರಿಸಿ ಫ್ರಿಡ್ಜ್ ನಲ್ಲಿಡಿ. ಸಾಕಷ್ಟು ಪ್ರಮಾಣದ ಕೆನೆ ರೂಪುಗೊಳ್ಳುವವರೆಗೆ ಹೀಗೆ ಮಾಡಿ. ಬಾಕ್ಸ್ ನಲ್ಲಿ ಕೆನೆ ತುಂಬಿದ ನಂತರ ಅದಕ್ಕೆ ಸ್ವಲ್ಪ ಮೊಸರು ಬೆರೆಸಿ ಮಿಕ್ಸ್ ಮಾಡಿ ರಾತ್ರಿಯಿಡೀ ಹಾಗೆ ಇಡಿ.

ನಂತರ ಬೆಳಗ್ಗೆ ಅದನ್ನು ಮಿಕ್ಸಿಯಲ್ಲಿ ಹಾಕಿ ರುಬ್ಬಿದಾಗ, ಚೆನ್ನಾಗಿ ಬೆಣ್ಣೆ ಬರುತ್ತದೆ. ಆ ಬೆಣ್ಣೆಯನ್ನು ಬಾಣಲೆಯಲ್ಲಿ ಬಿಸಿ ಮಾಡಿ. ಸ್ವಲ್ಪ ಸಮಯದ ನಂತರ, ತುಪ್ಪ ಕಾಣಿಸಿಕೊಳ್ಳಲು ಪ್ರಾರಂಭಿಸುತ್ತದೆ. ನಂತರ ಅದನ್ನು ಫಿಲ್ಟರ್ ಮಾಡಿ ಮತ್ತು ಶುದ್ಧವಾದ ಪಾತ್ರೆಯಲ್ಲಿ ಇರಿಸಿದರೆ ತುಪ್ಪ ಸಿದ್ಧ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...