alex Certify ಖಾಲಿ ಇರುವ ಹುದ್ದೆಗೆ ಫೇಸ್ ​ಬುಕ್​​ ಮೂಲಕ ಅರ್ಜಿ ಆಹ್ವಾನಿಸಿದ ಡಿಜಿಪಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಾಲಿ ಇರುವ ಹುದ್ದೆಗೆ ಫೇಸ್ ​ಬುಕ್​​ ಮೂಲಕ ಅರ್ಜಿ ಆಹ್ವಾನಿಸಿದ ಡಿಜಿಪಿ….!

ಇದೇ ಮೊದಲ ಬಾರಿಗೆ ಎಂಬಂತೆ ಮಹಾರಾಷ್ಟ್ರ ಪೊಲೀಸ್​ ಮಹಾನಿರ್ದೇಶಕ ಸಂಜಯ್​ ಪಾಂಡೆ ಮುಂಬೈನ ಭಯೋತ್ಪಾದಕ ನಿಗ್ರಹ ದಳದಲ್ಲಿ ಎರಡು ಸೂಪರಿಂಟೆಂಡೆಂಟ್​ ಹುದ್ದೆ ಖಾಲಿ ಇರುವ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಆಸಕ್ತ ಅಭ್ಯರ್ಥಿಗಳು ಇಲಾಖೆಯನ್ನು ಸಂಪರ್ಕಿಸುವಂತೆ ಸಾಮಾಜಿಕ ಮಾಧ್ಯಮದ ಮೂಲಕ ಹುದ್ದೆಗೆ ಆಹ್ವಾನಿಸಿದ್ದಾರೆ.

ಫೇಸ್​ಬುಕ್​ನಲ್ಲಿ ಡಿಜಿಪಿ ಪಾಂಡೆ ಎಟಿಎಸ್​ ಪ್ರತಿಷ್ಠಿತವಾದ ಹುದ್ದೆಯಾಗಿದ್ದು ಇದು 25 ಪ್ರತಿಶತ ವಿಶೇಷ ಭತ್ಯೆಯನ್ನು ಒದಗಿಸುತ್ತದೆ ಎಂದು ಉಲ್ಲೇಖಿಸಿದ್ದಾರೆ. ಆಸಕ್ತ ಅಭ್ಯರ್ಥಿಗಳು ನೇರವಾಗಿ ಎಡಿಜಿ ಎಟಿಎಸ್​ ಅಥವಾ ಎಡಿಜಿ ಎಸ್ಟಾಬ್ಲಿಷ್​ಮೆಂಟ್​ನ್ನು ಸಂಪರ್ಕಿಸಬಹುದು ಎಂದು ಪಾಂಡೆ ಮಾಹಿತಿ ನೀಡಿದ್ದಾರೆ.

ಮುಂಬೈ ಪೊಲೀಸ್​ ಅಧಿಕಾರಿಯೊಬ್ಬರು, ಎಟಿಎಸ್​ ಅತ್ಯಂತ ಪ್ರತಿಷ್ಟಿತ ಇಲಾಖೆಯಾಗಿದೆ. ಪ್ರತಿಯೊಬ್ಬರೂ ಅಲ್ಲಿ ಕೆಲಸ ಮಾಡಲು ಬಯಸುತ್ತಾರೆ ಎಂದು ಹೇಳಿದರು. ಆದರೆ ಫೇಸ್​ಬುಕ್​ನಲ್ಲಿ ಪೋಸ್ಟ್​ ಶೇರ್​ ಮಾಡಿರುವ ಡಿಜಿಪಿ ಯಾರ ಗೊಂದಲಗಳಿಗೂ ಅಲ್ಲಿ ಉತ್ತರ ನೀಡುವುದಿಲ್ಲ. ಇತ್ತೀಚಿನ ವರ್ಷಗಳಲ್ಲಿ, ಎಟಿಎಸ್ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕ ಸಂಘಟನೆಗೆ ಸಂಬಂಧಿಸಿದ ಪ್ರಕರಣಗಳ ತನಿಖೆ ನಡೆಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...