alex Certify ಖಂಡಿತವಾಗಿಯೂ ಇಂತದೊಂದು ಮದುವೆ ವಿಚಾರ ನೀವು ಕೇಳಿರಲು ಸಾಧ್ಯವೇ ಇಲ್ಲ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಖಂಡಿತವಾಗಿಯೂ ಇಂತದೊಂದು ಮದುವೆ ವಿಚಾರ ನೀವು ಕೇಳಿರಲು ಸಾಧ್ಯವೇ ಇಲ್ಲ….!

ಲಾಸ್ ವೇಗಾಸ್‌: ಬ್ರೆಜಿಲ್ ನಲ್ಲಿ ರೂಪದರ್ಶಿಯೊಬ್ಬಳು ತನ್ನನ್ನು ತಾನು ಮದುವೆಯಾಗಿ, ಕೊನೆಗೆ ತನಗೆ ತಾನೇ ವಿಚ್ಛೇದನ ಪಡೆದುಕೊಂಡಿದ್ದ ಸುದ್ದಿಯನ್ನು ಬಹುಷಃ ನೀವು ಓದಿರಬಹುದು. ಹಾಗೆಯೇ ಇಲ್ಲೊಂದೆಡೆ ವಿಲಕ್ಷಣ ಪ್ರಕರಣದಲ್ಲಿ ಮಹಿಳೆಯೊಬ್ಬಳು ಬಣ್ಣವನ್ನು ಮದುವೆಯಾಗಿದ್ದಾಳೆ.

ಹೌದು, ಹೊಸ ವರ್ಷದ ದಿನದಂದು ಲೆಸ್ ವೇಗಾಸ್‌ನಲ್ಲಿ ಮಹಿಳೆಯೊಬ್ಬರು ತಮ್ಮ ನೆಚ್ಚಿನ ಗುಲಾಬಿ ಬಣ್ಣವನ್ನು ವಿವಾಹವಾಗಿದ್ದು, ಇತಿಹಾಸವನ್ನು ಸೃಷ್ಟಿಸಿದ್ದಾರೆ. ಕಿಟನ್ ಕೇ ಸೆರಾ ಎಂಬಾಕೆ ಜನವರಿ 1 ರಂದು ಗುಲಾಬಿ ಬಣ್ಣದೊಂದಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.

ಗುಲಾಬಿ ಬಣ್ಣವನ್ನು ಮದುವೆಯಾಗಲು ನಿರ್ಧರಿಸಿದ್ದರ ಹಿಂದಿದೆ ಬೇರೆಯದ್ದೆ ಕಥೆ..! ಸ್ಕೇಟ್‌ಬೋರ್ಡ್‌ನಲ್ಲಿ ಬಾಲಕನೊಬ್ಬ ಸೆರಾಗೆ ಗುಲಾಬಿ ಬಣ್ಣವನ್ನೇ ಏಕೆ ಪ್ರೀತಿಸುತ್ತೀರಿ ಎಂದು ಪ್ರಶ್ನಿಸಿದ್ದಾನೆ. ತಾನು ತುಂಬಾ ಪ್ರೀತಿಸುತ್ತೇನೆಂದು ಹೇಳಿದ ಸೆರಾಗೆ ಹಾಗಿದ್ದರೆ ಮದುವೆಯಾಗಬಹುದಲ್ಲವೇ ಎಂದು ಕೇಳಿದ್ದನಂತೆ.

ಇದರಿಂದ ಹೌದಲ್ವಾ ತಾನು ಅಷ್ಟೊಂದು ಪ್ರೀತಿಸುತ್ತಿರುವ ಗುಲಾಬಿ ಬಣ್ಣವನ್ನು ಏಕೆ ಮದುವೆಯಾಗಬಾರದು ಎಂದು ನಿರ್ಧರಿಸಿದ ಈಕೆ, ಹೊಸ ವರ್ಷದಂದು ಹೊಸ ಜೀವನಕ್ಕೆ ಕಾಲಿಟ್ಟಿದ್ದಾಳೆ.

ತನ್ನ ಮದುವೆಯ ದಿನದಂದು ಸೆರಾ, ಗುಲಾಬಿ ಬಣ್ಣದ ಗೌನ್, ಗುಲಾಬಿ ಕೋಟ್, ಜೊತೆಗೆ ಗುಲಾಬಿ ಬಣ್ಣದ ಕಿರೀಟವನ್ನು ಧರಿಸಿದ್ದಳು. ಅಷ್ಟೇ ಅಲ್ಲ ಆಕೆಯ ಕೂದಲೂ ಕೂಡ ಗುಲಾಬಿ ಬಣ್ಣದಲ್ಲೇ ಕಂಗೊಳಿಸುತ್ತಿತ್ತು. ಗುಲಾಬಿ ಬಣ್ಣದ್ದೇ ಲಿಪ್ಸ್ಟಿಕ್ ಮತ್ತು ಆಭರಣ ಧರಿಸಿದ್ದಳು. ತನ್ನ ಮದುವೆ ಮಂಟಪಕ್ಕೆ ಗುಲಾಬಿ ಬಣ್ಣದ ಕಾರ್ ನಲ್ಲೇ ಪ್ರಯಾಣಿಸಿದ ಈಕೆ, ಗುಲಾಬಿ ಬಣ್ಣದ ಹೂವಿನ ಬೊಕೆಯನ್ನು ಕೈಯಲ್ಲಿ ಹಿಡಿದಿದ್ದಳು. ಕೇಕ್, ಮದುವೆ ಮಂಟಪ ಮುಂತಾದವುಗಳೆಲ್ಲಾ ಗುಲಾಬಿ ಬಣ್ಣದಲ್ಲೇ ಅಲಂಕಾರಗೊಂಡಿತ್ತು. ಇನ್ನು ಮದುವೆಗೆ ಬಂದ ಅತಿಥಿಗಳು ಕೂಡ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸಿ ಸೆರಾ ಅವರ ಬಣ್ಣದ ಪ್ರೀತಿಯನ್ನು ಆಚರಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...