alex Certify ಕ್ವೀನ್ ಕಂಗನಾಗೆ ಬಿಗ್ ರಿಲೀಫ್; ಲಾಕ್ಅಪ್ ಮೇಲಿನ ತಡೆಯಾಜ್ಞೆಯನ್ನು ತೆರವುಗೊಳಿಸಿದ ನ್ಯಾಯಾಲಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ವೀನ್ ಕಂಗನಾಗೆ ಬಿಗ್ ರಿಲೀಫ್; ಲಾಕ್ಅಪ್ ಮೇಲಿನ ತಡೆಯಾಜ್ಞೆಯನ್ನು ತೆರವುಗೊಳಿಸಿದ ನ್ಯಾಯಾಲಯ….!

Kangana Ranauts Lock Upp To Stream As Per Schedule Court Vacates Stay Orderತನ್ನ ಹೊಸ ಶೋ “ಲಾಕ್ಅಪ್”, ಮೇಲೇರಿದ್ದ ತಡೆಯಾಜ್ಞೆಯಿಂದ ಕಂಗಾಲಾಗಿದ್ದ ಕಂಗನಾಗೆ ಬಿಗ್ ರಿಲೀಫ್ ದೊರೆತಿದೆ. ಶೋ ಮೇಲಿನ ತಡೆಯಾಜ್ಞೆಯನ್ನು ತೆರವುಗೊಳಿಸಿರುವ ಹೈದರಾಬಾದ್ ನ್ಯಾಯಾಲಯವು, ರಿಯಾಲಿಟಿ ಶೋ ‘ಲಾಕ್ ಅಪ್’ ಅನ್ನು ಯೋಜಿಸಿದಂತೆ ಸ್ಟ್ರೀಮ್ ಮಾಡಲು ಅನುಮತಿ ನೀಡಿದೆ.

ಬಾಲಿವುಡ್ ನಟಿ ಕಂಗನಾ ರಣಾವತ್ ಹಾಗೂ ಆಕೆ ನಡೆಸಿಕೊಡುತ್ತಿರುವ ಲಾಕ್ಅಪ್ ರಿಯಾಲಿಟಿ ಶೋ, ತನ್ನ ಕಾನ್ಸೆಪ್ಟ್ ಮೂಲಕ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಆದರೆ ಈ ಸಂಪೂರ್ಣ ಕಾನ್ಸೆಪ್ಟ್ ಅನ್ನು ಕಳ್ಳತನ ಮಾಡಲಾಗಿದೆ ಎಂದು ವ್ಯಕ್ತಿಯೊಬ್ಬರು ಆರೋಪಿಸಿ ನ್ಯಾಯಾಲಯದ ಮೊರೆ ಹೋಗಿದ್ದರು.

ವಿಚಾರಣೆ ನಡೆಸಿದ ಹೈದರಾಬಾದ್‌ನ ಸಿಟಿ ಸಿವಿಲ್ ಕೋರ್ಟ್,‌ ರಿಯಾಲಿಟಿ ಶೋನ ಸ್ಟ್ರೀಮಿಂಗ್ ದಿನಾಂಕಕ್ಕೆ ತಡೆಯಾಜ್ಞೆಯನ್ನು ನೀಡಿತ್ತು. ಆದರೆ ಇಂದು ನ್ಯಾಯಾಲಯ ತಡೆಯಾಜ್ಞೆಯನ್ನು ತೆರವುಗೊಳಿಸಿ, ರಿಯಾಲಿಟಿ ಶೋ ಪ್ರದರ್ಶನಕ್ಕೆ ಅವಕಾಶ ನೀಡಿದೆ. ಇದರಿಂದ ಕಾರ್ಯಕ್ರಮದ ತಯಾರಕರಿಗೆ ಹಾಗೂ ಕಂಗನಾಗೆ ಬಿಗ್ ರಿಲೀಫ್ ದೊರೆತಿರುವುದಂತು ಸತ್ಯ. ಅಂದಹಾಗೇ ಲಾಕ್ಅಪ್ ಅನ್ನು ಇಂದಿನಿಂದ ಸ್ಟ್ರೀಮ್ ಮಾಡಲು, ತಯಾರಕರು ನಿರ್ಧರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...