alex Certify ಕ್ಯಾನ್ಸರ್ ಬರುವ ಮೊದಲು ದೇಹ ನೀಡುತ್ತದೆ ಈ ಸಂಕೇತ; ನಿರ್ಲಕ್ಷಿಸಿದರೆ ಪ್ರಾಣಕ್ಕೇ ಅಪಾಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾನ್ಸರ್ ಬರುವ ಮೊದಲು ದೇಹ ನೀಡುತ್ತದೆ ಈ ಸಂಕೇತ; ನಿರ್ಲಕ್ಷಿಸಿದರೆ ಪ್ರಾಣಕ್ಕೇ ಅಪಾಯ….!

ಅನಾರೋಗ್ಯಕ್ಕೂ ಮುನ್ನ ದೇಹವು ಅನೇಕ ಸಂಕೇತಗಳನ್ನು ನೀಡುತ್ತದೆ. ಬಹಳಷ್ಟು ಬಾರಿ ಈ ಸಂಕೇತಗಳನ್ನು ಸಾಮಾನ್ಯವೆಂದು ಪರಿಗಣಿಸಿ ನಾವು ನಿರ್ಲಕ್ಷಿಸುತ್ತೇವೆ. ಆದರೆ ಹಾಗೆ ಮಾಡುವುದರಿಂದ ತೊಂದರೆಗೆ ಸಿಲುಕಬಹುದು. ಯಾವುದೇ ರೀತಿಯ ಕಾಯಿಲೆಯ ಲಕ್ಷಣಗಳನ್ನು ನಿರ್ಲಕ್ಷಿಸಬಾರದು. ಏಕೆಂದರೆ ಈ ಲಕ್ಷಣಗಳು ಕ್ಯಾನ್ಸರ್‌ನಂತಹ  ಮಾರಣಾಂತಿಕ ಕಾಯಿಲೆಗಳೂ ಆಗಿರಬಹುದು. ಕ್ಯಾನ್ಸರ್‌ನಂತಹ ಅಪಾಯಕಾರಿ ಕಾಯಿಲೆಯನ್ನು ಸರಿಯಾದ ಸಮಯದಲ್ಲಿ ಪತ್ತೆ ಮಾಡಿದರೆ, ಅದನ್ನು ಗುಣಪಡಿಸಬಹುದು. ಕ್ಯಾನ್ಸರ್ ಬರುವ ಮೊದಲು ದೇಹವು ಯಾವ್ಯಾವ ರೀತಿಯ ಸಂಕೇತಗಳನ್ನು ನೀಡುತ್ತದೆ ಎಂಬುದನ್ನು ನೋಡೋಣ.

ಯಾವಾಗಲೂ ದಣಿದ ಭಾವನೆ- ಸಾಕಷ್ಟು ನಿದ್ದೆ ಮಾಡಿದರೆ ಮತ್ತು ಸರಿಯಾದ ಆಹಾರ ಕ್ರಮವನ್ನು ಅನುಸರಿಸಿದ ಬಳಿಕವೂ ಯಾವಾಗಲೂ ದಣಿವಾಗುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು. ಏಕೆಂದರೆ ಆಯಾಸವು ಯಾವಾಗಲೂ ಕೆಲವು ಗಂಭೀರ ಅನಾರೋಗ್ಯದ ಕಾರಣದಿಂದಾಗಿರಬಹುದು.

ದೇಹದಲ್ಲಿ ವಿಪರೀತ ನೋವು – ದೇಹವು ದೀರ್ಘಕಾಲದವರೆಗೆ ನೋವಿನಿಂದ ಬಳಲುತ್ತಿದ್ದರೆ ಮತ್ತು ಅಸ್ವಸ್ಥತೆಯನ್ನು ಅನುಭವಿಸುತ್ತಿದ್ದರೆ ಅದನ್ನು ನಿರ್ಲಕ್ಷಿಸಬಾರದು. ಏಕೆಂದರೆ ಇವೆಲ್ಲವೂ ಯಾವುದೋ ಪ್ರಮುಖ ಕಾಯಿಲೆಯ ಲಕ್ಷಣ. ಆದ್ದರಿಂದ ದೇಹದಲ್ಲಿ ನೋವು ಅಥವಾ ಅಸ್ವಸ್ಥತೆಯಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸಿ.

ಹಠಾತ್ ತೂಕ ನಷ್ಟಆಹಾರ ಮತ್ತು ದೇಹದ ಚಟುವಟಿಕೆಗಳನ್ನು ಬದಲಾಯಿಸದೆ ನೀವು ವೇಗವಾಗಿ ತೂಕವನ್ನು ಕಳೆದುಕೊಳ್ಳುತ್ತಿದ್ದರೆ, ಅದು ಗಂಭೀರ ಸಮಸ್ಯೆಗಳಿಗೆ ಕಾರಣವಾಗಬಹುದು. ಏಕೆಂದರೆ ಕ್ಯಾನ್ಸರ್ ಇದ್ದರೆ ದೇಹದ ತೂಕ ವೇಗವಾಗಿ ಕಡಿಮೆಯಾಗುತ್ತದೆ. ಹಾಗಾಗಿ ನಿಮಗೂ ಹೀಗಾಗುತ್ತಿದ್ದರೆ ನಿರ್ಲಕ್ಷಿಸಬೇಡಿ.

ಚರ್ಮದ ಬದಲಾವಣೆಗಳುಚರ್ಮದ ಬದಲಾವಣೆಗಳು ಕ್ಯಾನ್ಸರ್‌ನ ಆರಂಭಿಕ ಲಕ್ಷಣಗಳಲ್ಲಿ ಒಂದು. ಕ್ಯಾನ್ಸರ್‌ ಇದ್ದರೆ  ವ್ಯಕ್ತಿಯ ಚರ್ಮದ ಬಣ್ಣವು ಬದಲಾಗಲು ಪ್ರಾರಂಭಿಸುತ್ತದೆ. ಕ್ಯಾನ್ಸರ್‌ನಿಂದಾಗಿ ಚರ್ಮದಲ್ಲಿ ವಿಪರೀತ ತುರಿಕೆ, ರಕ್ತಸ್ರಾವ ಮತ್ತು ದದ್ದುಗಳ ಸಮಸ್ಯೆ ಬರಬಹುದು. ತ್ವಚೆಗೆ ಸಂಬಂಧಿಸಿದ ಯಾವುದೇ ಸಮಸ್ಯೆಯಿದ್ದರೆ ಅದನ್ನು ನಿರ್ಲಕ್ಷಿಸಬೇಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...