alex Certify ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿರುವ ಬಾಲಕಿಗೆ ಹೃತ್ಪೂರ್ವಕ ಸಂದೇಶ ಬರೆದ ಅಮೆಜಾನ್ ಚಾಲಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿರುವ ಬಾಲಕಿಗೆ ಹೃತ್ಪೂರ್ವಕ ಸಂದೇಶ ಬರೆದ ಅಮೆಜಾನ್ ಚಾಲಕ

Amazon driver leaves message of hope for Lakeland girl fighting cancer |  WFLAಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿರುವ 8 ವರ್ಷದ ಬಾಲಕಿಗೆ ಅಮೆಜಾನ್ ಚಾಲಕನ ಹೃತ್ಪೂರ್ವಕ ಸಂದೇಶವು ನೆಟ್ಟಿಗರ ಹೃದಯ ಕರಗಿಸಿದೆ.

ಆಬ್ರೆ ಹಟ್ಸನ್ ಎಂಬ ಬಾಲಕಿ ಕ್ಯಾನ್ಸರ್‌ನೊಂದಿಗೆ ಹೋರಾಡುತ್ತಿದ್ದು, ರೋಗ 4ನೇ ಹಂತದಲ್ಲಿದೆ. ವಸ್ತುವನ್ನು ಪಾರ್ಸೆಲ್ ತಂದ ಅಮೆಜಾನ್ ಚಾಲಕ, ಬಾಲಕಿಯ ಮನೆಯ ಮುಂದೆ ವಿಶೇಷ ಸಂದೇಶವನ್ನು ಬರೆದಿದ್ದಾರೆ.

ಅಮೆಜಾನ್ ಬಾಲಕಿ ಆಬ್ರೆಗಾಗಿ ಪ್ರಾರ್ಥಿಸುತ್ತಿದೆ. ಲವ್ ಯು ಎಂಬ ಸಂದೇಶವನ್ನು ಬರೆಯಲಾಗಿದೆ. ಆಬ್ರೆಯ ತಾಯಿ ಲಿಂಡ್ಸಿ ಹಟ್ಸನ್, ಆಂಡರ್ಸನ್ ಬರೆದ ಹೃದಯಸ್ಪರ್ಶಿ ಸಂದೇಶವನ್ನು ನೋಡಿ ಭಾವುಕಳಾಗಿದ್ದಾಳೆ. ಕೂಡಲೇ ಅಮೆಜಾನ್ ಚಾಲಕನ ಹಿಂದೆ ಓಡಿದ ಆಕೆ, ಸಂದೇಶ ಒಳ್ಳೆಯತನದಿಂದ ಕೂಡಿದ್ದು ಅದ್ಭುತವಾಗಿದೆ ಎಂದು ತಿಳಿಸಿದ್ದಾಳೆ. ಇದಕ್ಕೆ ಆತ, ತಾನು ಅದ್ಭುತವಲ್ಲ.. ಬಾಲಕಿ ಆಬ್ರೆ ಬಹಳ ಅದ್ಭುತ ಎಂದು ಉತ್ತರಿಸಿದ್ದಾನೆ.

ಆಬ್ರೆ ಹಟ್ಸನ್ ಳ ತಲೆ ಬೋಳಿಸಿದ ಕಾರಣ ಮತ್ತು ಹೋಪ್ ಫಾರ್ ಆಬ್ರೆ ಎಂಬ ಬರಹವು ಆಕೆಯ ಮನೆಯ ಹೊರಗೆ ಇರುವ ಚಿಹ್ನೆಗಳಿಂದಾಗಿ, ಆಬ್ರೆ ಹಟ್ಸನ್ ಗೆ ಕ್ಯಾನ್ಸರ್ ಇರುವುದು ಆಂಡರ್ಸನ್ ಅವರಿಗೆ ಗೊತ್ತಾಗಿದೆ. ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಳ್ಳಲಾಗಿದ್ದು, ಇದೊಂದು ಭಾವುಕ ಕ್ಷಣ ಅಂತೆಲ್ಲಾ ಬಳಕೆದಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಬಾಲಕಿಯ ಶೀಘ್ರ ಚೇತರಿಕೆಗೆ ನೆಟ್ಟಿಗರು ಹಾರೈಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...