alex Certify ಕೋವಿಡ್ ಡ್ಯೂಟಿಯಲ್ಲಿ ಮೃತಪಟ್ಟ ಶಿಕ್ಷಕರಿಗೆ ವರ್ಷವಾದರು ಸಿಗದ ಪರಿಹಾರ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್ ಡ್ಯೂಟಿಯಲ್ಲಿ ಮೃತಪಟ್ಟ ಶಿಕ್ಷಕರಿಗೆ ವರ್ಷವಾದರು ಸಿಗದ ಪರಿಹಾರ..!

ಕೊರೋನಾ ವಿಶ್ವಕ್ಕೆ ಕಾಲಿಟ್ಟು, ಭಾರತಕ್ಕೆ ಹೊಕ್ಕು ಈಗಾಗ್ಲೇ ಎಡರು ವರ್ಷದ ಮೇಲಾಗಿದೆ. ಅಂಗನವಾಡಿ ಕಾರ್ಯಕರ್ತರಿಂದ ಹಿಡಿದು ವೈದ್ಯರವರೆಗು ಪ್ರತಿಯೊಬ್ಬರು ಈ ಸಾಂಕ್ರಾಮಿಕದ ವಿರುದ್ಧ ಹೋರಾಟ ಮಾಡಿ, ಜನಸಾಮಾನ್ಯರಿಗೆ ಆರೋಗ್ಯದ ಭರವಸೆ ನೀಡುತ್ತಿದ್ದಾರೆ. ಇದನ್ನ ಕೋವಿಡ್ ಡ್ಯೂಟಿ ಎಂದು ಪರಿಗಣಿಸಿರುವ ಸರ್ಕಾರ ಎಲ್ಲರಿಗು ಪರಿಹಾರ ಧನ ನೀಡಿದೆ. ಆದರೆ ನಮ್ಮ ಶಿಕ್ಷಕ ವೃಂದಕ್ಕೆ ಈ ಪರಿಹಾರ ದೊರೆಯುವುದಿರಲಿ, ಪರಿಹಾರ ಸಿಗುತ್ತೊ ಇಲ್ಲವೊ ಅನ್ನೋ ಭಯದಲ್ಲಿ ಇದ್ದೀವಿ ಎಂದು ಶಿಕ್ಷಕರು ಆರೋಪಿಸಿದ್ದಾರೆ.

2020-21ರ ವರ್ಷದಲ್ಲಿ ಕೋವಿಡ್ ಕರ್ತವ್ಯದಲ್ಲಿದ್ದ 30 ಶಿಕ್ಷಕರು ಸಾವನ್ನಪ್ಪಿದ್ದಾರೆ. ಅವರ ಕುಟುಬಕ್ಕೆ ಇದುವರೆಗು ಪರಿಹಾರವಾಗಲಿ, ವಿಮಾ ಮೊತ್ತವಾಗಲಿ ದೊರೆತಿಲ್ಲ. ಶಿಕ್ಷಕರನ್ನ ಕೋವಿಡ್ ಡ್ಯೂಟಿಗೆ ಹಾಜರಾಗಬೇಕು ಅನ್ನೋ ಸರ್ಕಾರ ಅದೇ ಕೆಲಸ ಮಾಡುತ್ತಾ ಅವರು ಸತ್ತರೆ ಯಾವ ಪರಿಹಾರ ನೀಡುತ್ತಿದೆ. ಶಿಕ್ಷಕರನ್ನ ಸರ್ಕಾರ ಕೊರೋನಾ ವಾರಿಯರ್ಗಳೆಂದು ಪರಿಗಣಿಸಿಲ್ಲ. ವೈದ್ಯರು, ನರ್ಸ್ ಗಳು, ಅಂಗನವಾಡಿ ಕಾರ್ಯಕರ್ತೆಯರು, ಪೋಲಿಸರು, ಹಾಗೂ ಇತರ ಸಿಬ್ಬಂದಿಗಳನ್ನ ಕೋವಿಡ್ ವಾರಿಯರ್‌ ಎಂದು ಪರಿಗಣಿಸಿರುವ ಸರ್ಕಾರ ನಮ್ಮನ್ನು ಕಡೆಗಣಿಸಿದೆ ಎಂದು ಶಿಕ್ಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿರುವ ಶಿಕ್ಷಕರು ಕೋವಿಡ್ ಕಾರ್ಯಕ್ಕೆ ಶಿಕ್ಷಕರ ನಿಯೋಜನೆಯನ್ನು ವಿರೋಧಿಸಿದ್ದಾರೆ. ಕರ್ತವ್ಯದ ವೇಳೆ ಸೋಂಕಿಗೆ ತುತ್ತಾಗಿ ಸಾವನ್ನಪ್ಪಿದರೆ ಸರ್ಕಾರ ಪರಿಹಾರ ನೀಡುತ್ತದೆ ಎಂಬ ನಂಬಿಕೆಯಿಲ್ಲ. ಮೊದಲು ನಮ್ಮನ್ನು ಕೊರೋನಾ ವಾರಿಯರ್ಗಳೆಂದು ಪರಿಗಣಿಸಿ, ಕರ್ತವ್ಯದ ವೇಳೆ ಮೃತಪಟ್ಟ ಶಿಕ್ಷಕರಿಗೆ ಮೂವತ್ತು ಲಕ್ಷ ಪರಿಹಾರ ನೀಡಿ ಎಂದು ಒತ್ತಾಯಿಸಿದ್ದಾರೆ‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...