alex Certify ಕೋವಿಡ್​ ಲಸಿಕೆಗಳ ಕುರಿತಂತೆ ಮಹತ್ವದ ಮಾಹಿತಿ ನೀಡಿದ ಐಸಿಎಂಆರ್​ ಮಹಾನಿರ್ದೇಶಕ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋವಿಡ್​ ಲಸಿಕೆಗಳ ಕುರಿತಂತೆ ಮಹತ್ವದ ಮಾಹಿತಿ ನೀಡಿದ ಐಸಿಎಂಆರ್​ ಮಹಾನಿರ್ದೇಶಕ

ಕೋವಿಡ್​ನ ಎಲ್ಲಾ ಲಸಿಕೆಗಳು ಸೋಂಕನ್ನು ತಡೆಯುವುದಿಲ್ಲ. ಅವು ಪ್ರಾಥಮಿಕ ಹಂತದಲ್ಲಿಯೇ ಸೋಂಕನ್ನು ಮಾರ್ಪಾಡು ಮಾಡುತ್ತವೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ ಮಹಾನಿರ್ದೇಶಕ ಡಾ. ಬಲರಾಮ ಭಾರ್ಗವ ಹೇಳಿದ್ದಾರೆ.

ಈ ವಿಚಾರವಾಗಿ ಮಾತನಾಡಿದ ಐಸಿಎಂಆರ್​ ಡಿಜಿ ಬಲರಾಮ ಭಾರ್ಗವ, ಭಾರತದ್ದೇ ಆಗಿರಲಿ ಅಥವಾ ಇಸ್ರೆಲ್​, ಅಮೆರಿಕ, ಯುರೋಪ್​, ಬ್ರಿಟನ್​, ಚೀನಾ ಹೀಗೆ ಯಾವುದೇ ದೇಶದ್ದಾಗಿರಲಿ ಅವು ಪ್ರಾಥಮಿಕವಾಗಿ ರೋಗವನ್ನು ಮಾರ್ಪಾಡು ಮಾಡುತ್ತವೆ. ಅವು ಸೋಂಕನ್ನು ತಡೆಯುವುದಿಲ್ಲ. ಈ ಲಸಿಕೆಗಳು ಪ್ರಾಥಮಿಕ ಹಂತದಲ್ಲಿ ರೋಗದ ತೀವ್ರತೆಯನ್ನು ತಗ್ಗಿಸಲು ಹಾಗೂ ಆಸ್ಪತ್ರೆಗೆ ದಾಖಲಾಗುವವರು ಮತ್ತು ಮರಣದ ಪ್ರಮಾಣವನ್ನು ಕಡಿಮೆ ಮಾಡುತ್ತದೆಯೇ ಹೊರತು ಸೋಂಕನ್ನು ತಡೆಯುವುದಿಲ್ಲ ಎಂದು ಹೇಳಿದರು.

ಕೊರೊನಾ ಲಸಿಕೆಗಿಂತ ಮುನ್ನ ಹಾಗೂ ಲಸಿಕೆ ಸ್ವೀಕರಿಸಿದ ಬಳಿಕ ಮಾಸ್ಕ್​ಗಳನ್ನು ಧರಿಸುವುದು ಅನಿವಾರ್ಯವಾಗಿದೆ. ಜನದಟ್ಟಣೆಯ ಸ್ಥಳಗಳಿಗೆ ಯಾವುದೇ ಕಾರಣಕ್ಕೂ ತೆರಳಬಾರದು. ಈ ಹಿಂದಿನ ಅಥವಾ ಈಗಿರುವ ಕೊರೊನಾದ ಯಾವುದೇ ತಳಿಗಳಿಗೆ ಕೊರೊನಾ ಮಾರ್ಗಸೂಚಿಗಳು ಒಂದೇ ಆಗಿದೆ. ಈಗಲೂ ಕೂಡ ಹೋಂ ಐಸೋಲೇಷನ್​ ಎನ್ನುವುದು ಪ್ರಮುಖ ಆಧಾರ ಸ್ತಂಭವಾಗಿದೆ ಎಂದು ಬಲರಾಮ ಭಾರ್ಗವ ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...