alex Certify ಕೋಮು ಸೌಹಾರ್ದ ಮೆರೆದ ಮುಸ್ಲಿಂ ಕುಟುಂಬ: ಹಿಂದೂ ದೇವಾಲಯ ನಿರ್ಮಾಣಕ್ಕೆ 2.5 ಕೋಟಿ ರೂ. ಮೌಲ್ಯದ ಭೂಮಿ ದಾನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಮು ಸೌಹಾರ್ದ ಮೆರೆದ ಮುಸ್ಲಿಂ ಕುಟುಂಬ: ಹಿಂದೂ ದೇವಾಲಯ ನಿರ್ಮಾಣಕ್ಕೆ 2.5 ಕೋಟಿ ರೂ. ಮೌಲ್ಯದ ಭೂಮಿ ದಾನ

ದೇಶದಲ್ಲಿ ಕೋಮು ಸೌಹಾರ್ದತೆಗೆ ಮತ್ತೊಂದು ಉದಾಹರಣೆಯಾಗಿ ಬಿಹಾರದ ಮುಸ್ಲಿಂ ಕುಟುಂಬವೊಂದು ಪೂರ್ವ ಚಂಪಾರಣ್ ಜಿಲ್ಲೆಯ ಕೈತ್ವಾಲಿಯಾ ಪ್ರದೇಶದಲ್ಲಿ ವಿಶ್ವದ ಅತಿ ದೊಡ್ಡ ಹಿಂದೂ ದೇವಾಲಯ-ವಿರಾಟ್ ರಾಮಾಯಣ ಮಂದಿರ ನಿರ್ಮಾಣಕ್ಕೆ 2.5 ಕೋಟಿ ರೂ. ಮೌಲ್ಯದ ಭೂಮಿ ದಾನ ಮಾಡಿದೆ.

ಈ ವಿಚಾರವಾಗಿ ಮಾತನಾಡಿದ ಪಾಟ್ನಾ ಮೂಲದ ಮಹಾವೀರ ಮಂದಿರ ಟ್ರಸ್ಟ್​​ನ ಮುಖ್ಯಸ್ಥ ಆಚಾರ್ಯ ಕಿಶೋರ್​ ಕುನಾಲ್​, ಭೂಮಿಯನ್ನು ದಾನ ಮಾಡಿರುವ ಇಶ್ತಿಯಾಕ್​ ಅಹ್ಮದ್​ ಖಾನ್​ ಗುವಾಹಟಿ ಮೂಲದ ಪೂರ್ವ ಚಂಪಾರಣ್​​ನ ಉದ್ಯಮಿ ಎಂದು ಹೇಳಿದ್ದಾರೆ.

ಇಶ್ತಿಯಾಕ್​​ ಅಹ್ಮದ್​ ಖಾನ್​​ ಕೆಲ ದಿನಗಳ ಹಿಂದಷ್ಟೇ ಕೇಶರಿಯಾ ಉಪವಿಭಾಗದ ರಿಜಿಸ್ಟ್ರಾರ್​ ಕಚೇರಿಯಲ್ಲಿ ದೇವಾಲಯದ ನಿರ್ಮಾಣಕ್ಕಾಗಿ ತಮ್ಮ ಕುಟುಂಬಕ್ಕೆ ಸೇರಿದ ಭೂಮಿಯನ್ನು ದಾನ ನೀಡುವುದಾಗಿ ಬರೆದುಕೊಟ್ಟಿದ್ದಾರೆ ಎಂದು ಭಾರತೀಯ ಪೊಲೀಸ್​ ಇಲಾಖೆಯ ನಿವೃತ್ತ ಅಧಿಕಾರಿ ಕುನಾಲ್​ ಹೇಳಿದರು.

ಖಾನ್​ ಹಾಗೂ ಅವರ ಕುಟುಂಬ ಈ ರೀತಿ ಹಿಂದೂ ಮಂದಿರ ನಿರ್ಮಾಣಕ್ಕೆ ತಮ್ಮ ವೈಯಕ್ತಿಕ ಆಸ್ತಿ ದಾನ ನೀಡುವ ಮೂಲಕ ಕೋಮು ಸೌಹಾರ್ದತೆ ಮೆರೆದಿದ್ದಾರೆ. ಮುಸ್ಲಿಂ ಬಾಂಧವರ ಸಹಾಯವಿರದೇ ಹೋಗಿದ್ದರೆ ನಮಗೆ ಇಷ್ಟು ದೊಡ್ಡ ಮಟ್ಟದ ಯೋಜನೆಯನ್ನು ಆರಂಭಿಸಲು ಸಾಧ್ಯವಾಗುತ್ತಿರಲಿಲ್ಲ ಎಂದು ಆಚಾರ್ಯ ಕಿಶೋರ್​ ಕುನಾಲ್​ ಹೇಳಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...