alex Certify ಕೋಟಿಗಟ್ಟಲೆ ಹಣದೊಂದಿಗೆ ಉಕ್ರೇನ್​​​ ನಿಂದ ಪರಾರಿಯಾಗಲೆತ್ನಿಸಿದ ಮಾಜಿ ಸಂಸದನ ಪತ್ನಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೋಟಿಗಟ್ಟಲೆ ಹಣದೊಂದಿಗೆ ಉಕ್ರೇನ್​​​ ನಿಂದ ಪರಾರಿಯಾಗಲೆತ್ನಿಸಿದ ಮಾಜಿ ಸಂಸದನ ಪತ್ನಿ….!

ಉಕ್ರೇನ್​​ನ ಮಾಜಿ ಸಂಸದ ಕೊಟ್ವಿಟ್ಸ್ಕಿ ಪತ್ನಿ ಸೂಟ್​​ಕೇಸ್​​​ಗಳಲ್ಲಿ 28 ಮಿಲಿಯನ್​ ಡಾಲರ್​ ಹಾಗೂ 1.3 ಮಿಲಿಯನ್​ ಯುರೋಗಳಷ್ಟು ಹಣದ ಸಮೇತ ದೇಶದಿಂದ ಪಲಾಯನ ಮಾಡಲು ಯತ್ನಿಸಿದ್ದಾರೆ ಎಂದು ವರದಿಯಾಗಿದೆ.

ಯುದ್ಧಪೀಡಿತ ಉಕ್ರೇನ್​ನಿಂದ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಮಹಿಳೆಯು ಜಕರ್​ಪಾಟಿಯಾ ಪ್ರಾಂತ್ಯದ ಮೂಲಕ ಹಂಗೇರಿಯನ್ನು ಪ್ರವೇಶಿಸಲು ಯತ್ನಿಸಿದಳು. ಆದರೆ ಹಂಗೇರಿಯಾ ಗಡಿ ಕಾವಲುದಾರರು ಹಣದ ಸಮೇತ ಮಹಿಳೆಯನ್ನು ಹಿಡಿದಿದ್ದಾರೆ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ.

ಫೆಬ್ರವರಿ 24 ರಂದು ರಷ್ಯಾ ಉಕ್ರೇನ್ ವಿರುದ್ಧ ಯುದ್ಧ ಘೋಷಿಸಿದೆ. ಅಂದಿನಿಂದ ಇಂದಿನವರೆಗೂ ರಷ್ಯಾದ ಪಡೆ ಉಕ್ರೇನ್​ನ ವಿವಿಧ ಭಾಗಗಳಲ್ಲಿ ಮಿಲಿಟರಿ ಕಾರ್ಯಾಚರಣೆಯನ್ನು ನಡೆಸುತ್ತಲೇ ಇದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...