alex Certify ಕೊಳಗೇರಿಯಿಂದ ಮೈಕ್ರೋಸಾಫ್ಟ್​ ಕಚೇರಿಯವರೆಗೆ..! ಸ್ಪೂರ್ತಿದಾಯಕವಾಗಿದೆ ಈ ಯುವತಿಯ ಯಶೋಗಾಥೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಳಗೇರಿಯಿಂದ ಮೈಕ್ರೋಸಾಫ್ಟ್​ ಕಚೇರಿಯವರೆಗೆ..! ಸ್ಪೂರ್ತಿದಾಯಕವಾಗಿದೆ ಈ ಯುವತಿಯ ಯಶೋಗಾಥೆ

ಒಂದು ಕಂಪ್ಯೂಟರ್​ ಖರೀದಿ ಮಾಡಲು ಹೆಣಗಾಡುತ್ತಿದ್ದ ದಿನದಿಂದ ವಿಶ್ವದ ಅತ್ಯುನ್ನತ ಐಟಿ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಳ್ಳುವವರೆಗೂ ಈ ಯುವತಿ ಸಾಹಸಗಾಥೆ ನಿಜಕ್ಕೂ ಸ್ಪೂರ್ತಿದಾಯಕವಾಗಿದೆ.

ಮೈಕ್ರೋಸಾಫ್ಟ್​ ಕಂಪನಿಯಲ್ಲಿ ಪ್ರಾಡಕ್ಟ್​​ ಡಿಸೈನ್​ ಮ್ಯಾನೇಜರ್ ಆಗಿರುವ ಶಹೀನಾ ಅತಾರ್​ವಾಲಾ ತಾವು ಸ್ಲಂನಲ್ಲಿ ಕಳೆದ ದಿನಗಳು ಹಾಗೂ ಇದೀಗ ಮುಂಬೈನ ಪ್ರತಿಷ್ಠಿತ ಅಪಾರ್ಟ್​ಮೆಂಟ್​ ನಲ್ಲಿ ವಾಸಿಸುವಷ್ಟು ಸಬಲರಾದ ಬಗ್ಗೆ ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ನೆಟ್​ಫ್ಲಿಕ್ಸ್​​ನ ಸಿರೀಸ್​ ಒಂದರಲ್ಲಿ ತನ್ನ ಹಳೆಯ ಮನೆಯನ್ನು ಗಮನಿಸಿದ ಶಹೀನಾ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ತಮ್ಮ ಭೂತಕಾಲದ ಜೀವನದಲ್ಲಿದ್ದ ಕಷ್ಟಗಳನ್ನು ಹೇಳಿಕೊಳ್ಳುವ ಬಗ್ಗೆ ಮನಸ್ಸು ಮಾಡಿದ್ದಾರೆ.

ನೆಟ್​ಫ್ಲಿಕ್ಸ್​ನಲ್ಲಿರುವ ಬ್ಯಾಡ್​ ಬಾಯ್​ ಬಿಲಿಯೇನರ್ಸ್​ ಇಂಡಿಯಾ ಮುಂಬೈನಲ್ಲಿರುವ ಕೊಳೆಗೇರಿಗಳ ಬಗ್ಗೆ ಪಕ್ಷಿನೋಟವನ್ನು ತೋರಿದೆ. 2015ರಲ್ಲಿ ನನ್ನ ಜೀವನವನ್ನು ನಾನು ಕಟ್ಟಿಕೊಳ್ಳಲು ಒಬ್ಬಂಟಿಯಾಗಿ ಹೊರಟೆ. ಫೋಟೋಗಳಲ್ಲಿ ನೀವು ನೋಡುತ್ತಿರುವ ಮನೆಗಳಲ್ಲಿ ಒಂದು ನಮ್ಮದು ಎಂದು ಟ್ವಿಟರ್​ನಲ್ಲಿ ಬರೆದುಕೊಂಡಿದ್ದಾರೆ.

ಶಹೀನಾ ಬಾಂದ್ರಾ ರೈಲ್ವೆ ನಿಲ್ದಾಣದ ಸಮೀಪದಲ್ಲೇ ಇರುವ ದರ್ಗಾ ಗಲ್ಲಿ ಸ್ಲಂನಲ್ಲಿ ವಾಸವಿದ್ದರಂತೆ. ಇವರ ತಂದೆ ಓರ್ವ ಎಣ್ಣೆ ವ್ಯಾಪಾರಿಯಾಗಿದ್ದು ಉತ್ತರ ಪ್ರದೇಶದಿಂದ ಮುಂಬೈಗೆ ವಲಸೆ ಬಂದಿದ್ದರಂತೆ.

ಸ್ಲಂನಲ್ಲಿನ ಜೀವನವು ತುಂಬಾನೇ ಕಠಿಣವಾಗಿತ್ತು. ಕಷ್ಟದ ಜೀವನ ಪರಿಸ್ಥಿತಿ, ಲಿಂಗ ಭೇದ ಹಾಗೂ ಲೈಂಗಿಕ ಕಿರುಕುಳವನ್ನು ಅನುಭವಿಸಬೇಕಾಗಿತ್ತು. ಆದರೆ ಇವೆಲ್ಲವೂ ನನಗೆ ಹೊಸ ಜೀವನವನ್ನು ಕಟ್ಟಿಕೊಳ್ಳಬೇಕು ಎಂಬ ಕುತೂಹಲವನ್ನು ಇನ್ನಷ್ಟು ಹೆಚ್ಚಿಸಿತು ಎಂದು ಹೇಳಿದ್ದಾರೆ.

— Shaheena Attarwala شاہینہ (@RuthlessUx) January 26, 2022

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...