alex Certify ಕೊಲ್ಲೂರಿನ ʼಮೂಕಾಂಬಿಕಾʼದೇವಿ ಸನ್ನಿಧಿಗೆ ಒಮ್ಮೆ ಭೇಟಿ ಕೊಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೊಲ್ಲೂರಿನ ʼಮೂಕಾಂಬಿಕಾʼದೇವಿ ಸನ್ನಿಧಿಗೆ ಒಮ್ಮೆ ಭೇಟಿ ಕೊಡಿ

ಕರ್ನಾಟಕದ ಪ್ರಸಿದ್ಧ ದೇವಾಲಯಗಳಲ್ಲಿ ಒಂದಾದ ಕೊಲ್ಲೂರು ಮೂಕಾಂಬಿಕಾ ದೇವಿಯ ನೆಲೆಯಾದ ಕೊಡಚಾದ್ರಿ ಪರ್ವತ ಶಿಖರವು ಸಮುದ್ರ ಮಟ್ಟದಿಂದ 1343 ಮೀ. ಎತ್ತರದಲ್ಲಿದೆ. ಈ ಶಿಖರವು ದಟ್ಟವಾದ ಅರಣ್ಯದ ಮಧ್ಯ ಭಾಗದಲ್ಲಿದೆ. ಈ ಜಾಗದಲ್ಲಿ ಬೆಂಬಿಡದೇ ಬೀಸುವ ಗಾಳಿಯ ಕಾರಣದಿಂದ ಶಿಖರವು ಬಂಜರಾಗಿದೆ.

ದೇಶದ ಎಲ್ಲೆಡೆಯಿಂದ ಯಾತ್ರಾರ್ಥಿಗಳನ್ನು ತನ್ನತ್ತ ವಿಶೇಷವಾಗಿ ಆಕರ್ಷಿಸುತ್ತಿರುವ ಮೂಕಾಂಬಿಕಾ ದೇವಿಯ ಸನ್ನಿಧಿ ತನ್ನ ಪ್ರಾಕೃತಿಕ ಐಸಿರಿಯಿಂದ ಮನೋಹರವಾಗಿ ಕಾಣುತ್ತದೆ.  ಈ ದೇವಾಲಯವು ದೇಶದ ಮ್ರಮುಖ ಶಕ್ತಿ ಪೀಠಗಳಲ್ಲಿ ಒಂದಾಗಿದ್ದು, ಪಾರ್ವತೀ ದೇವಿಯು ಮೂಕಾಸುರ ಎಂಬ ರಾಕ್ಷಸನನ್ನು ಸಂಹಾರ ಮಾಡಿದ್ದರಿಂದ ಮೂಕಾಂಬಿಕಾ ಎಂಬ ಹೆಸರು ಪಡೆದಳು. ಇಲ್ಲಿರುವ ಗರ್ಭಗುಡಿಯು ಮೂಲತಃ ಜ್ಯೋತಿರ್ಲಿಂಗವನ್ನು ಹೊಂದಿದ್ದು, ಇದರ ಹಿಂಭಾಗದಲ್ಲಿ ಶ್ರೀ ಆದಿ ಶಂಕರರಿಂದ ಸ್ಥಾಪಿತವಾದ ಮೂಕಾಂಬಿಕಾ ದೇವಿಯ ಲೋಹದ ಮೂರ್ತಿ ಇದೆ.

ಇದಷ್ಟೇ ಅಲ್ಲದೇ ದಟ್ಟವಾದ ಕಾಡಿನಲ್ಲಿ ಅರಿಶಿಣ ಗುಂಡಿ ಜಲಪಾತವಿದೆ. ಈ ಜಲಪಾತದ ಧುಮ್ಮಿಕ್ಕುವ ಜಲಧಾರೆಯ ಮೇಲೆ ಸೂರ್ಯನ ರಶ್ಮಿ ಬಿದ್ದಾಗ, ನೀರು ಹಳದಿ ಹಾಗೂ ಕಿತ್ತಳೆ ಬಣ್ಣದಲ್ಲಿ ಕಾಣುವ ಸಲುವಾಗಿ ಇದಕ್ಕೆ ಅರಿಶಿಣ ಜಲಪಾತ ಎಂಬ ಹೆಸರು ಬಂದಿದೆ. ಕೊಲ್ಲೂರು ನಿಸರ್ಗದತ್ತ ರಮಣೀಯ ಸ್ಥಳವಾಗಿದ್ದು, ತನ್ನಲ್ಲಿರುವ ಪ್ರಾಕೃತಿಕ ಸೌಂದರ್ಯದಿಂದ ಮತ್ತು ಜಲಪಾತಗಳಿಂದಾಗಿ ಇಲ್ಲಿನ ಭೇಟಿಯನ್ನು ಮರೆಯಲಾಗದ ಘಳಿಗೆಯಾಗಿಸುವಲ್ಲಿ ಸಂದೇಹವಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...