
ಕೊರೊನಾ ಸೋಂಕು ವಿಶ್ವಕ್ಕೆ ಬಂದಪ್ಪಳಿಸಿದ ಬಳಿಕ ವರ್ಕ್ ಫ್ರಮ್ ಹೋಮ್ ಎಂಬ ಕೆಲಸದ ವಿಧಾನವು ಹೆಚ್ಚು ಪ್ರತೀತಿಯನ್ನು ಪಡೆದುಕೊಳ್ತು. ಆದರೆ ಇದೀಗ ದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಕಡಿಮೆಯಾಗುತ್ತಿದೆ.
ಹೀಗಾಗಿ ಇನ್ಮುಂದೆ ವರ್ಕ್ ಫ್ರಮ್ ಹೋಂ, ರಿಮೋಟ್ ವರ್ಕಿಂಗ್ ಮಾಡೆಲ್ಗಳು ಮುಂದುವರಿಯುತ್ತದೆಯೇ ಅಥವಾ ಸಿಬ್ಬಂದಿ ಕಂಪನಿಗೆ ಮರಳುವ ದಿನ ಹತ್ತಿರ ಬಂತೇ ಎಂಬ ಕುತೂಹಲ ಬಹುತೇಕ ಎಲ್ಲರಲ್ಲಿದೆ.
ಆರಂಭದಲ್ಲಿ ಈ ವರ್ಕ್ ಫ್ರಮ್ ಹೋಮ್ ಪದ್ಧತಿಯು ಎಲ್ಲರಿಗೂ ಹಿಡಿಸಿರಲಿಲ್ಲ. ಆದರೆ ಕೋವಿಡ್ 19 ಸೋಂಕು ಮುಗಿಯುವ ಲಕ್ಷಣವು ಕಾಣದ ಹಿನ್ನೆಲೆಯಲ್ಲಿ ವರ್ಕ್ ಫ್ರಮ್ ಹೋಮ್ ಎಲ್ಲರ ಕೆಲಸದ ವಿಧಾನವಾಗಿ ಬದಲಾಯಿತು.
ಟಾಟಾ ಸ್ಟೀಲ್, ಮೀಶೋ, ಮೈಕ್ರೋಸಾಫ್ಟ್, ಟ್ವಿಟ್ಟರ್, ಮೇಟಾನಂತಹ ಖಾಸಗಿ ಕಂಪನಿಗಳು ಕಚೇರಿಯಲ್ಲಿ 100 ಪ್ರತಿಶತ ಸಿಬ್ಬಂದಿಯನ್ನು ಹೊಂದುವ ಐಡಿಯಾವನ್ನು ತಿರಸ್ಕರಿಸಿವೆ.
ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್ ನ್ಯೂಸ್: 950 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ RBI
ಟಾಟಾ ಸ್ಟೀಲ್ ತನ್ನ ಉದ್ಯೋಗಿಗಳಿಗೆ ಎಲ್ಲಿಂದ ಬೇಕಿದ್ದರೂ ಕೆಲಸ ಮಾಡಲು ಅವಕಾಶ ಮಾಡಿಕೊಟ್ಟಿದೆ. ಆದರೆ ಮೀಶೋ ಬೌಂಡರಿ ಲೆಸ್ ಅಪ್ರೋಚ್ ವಿಧಾನವನ್ನು ಅಳವಡಿಸಿಕೊಂಡಿದೆ. ಇನ್ನು ಟಿಸಿಎಸ್ ಹಾಗೂ ವಿಪ್ರೋ ಕಂಪನಿಗಳು ಹೈಬ್ರಿಡ್ ವರ್ಕ್ ಮಾಡೆಲ್ಗೆ ಆದ್ಯತೆ ನೀಡಲು ಮುಂದಾಗಿವೆ.
ಕಂಪನಿಗಳಲ್ಲಿ 100 ಪ್ರತಿಶತ ಸಿಬ್ಬಂದಿ ಹಾಜರಾತಿ ಬಹುಶಃ ಒಂದು ಹಳೆಯ ಕಾರ್ಯವಿಧಾನವಾಗಬಹುದು ಎಂದು ಹ್ಯೂಮನ್ ರಿಸೋರ್ಸ್ ವ್ಯವಸ್ಥಾಪಕರು ಅಭಿಪ್ರಾಯಪಟ್ಟಿದ್ದಾರೆ. ಐಟಿ ಸೇರಿದಂತೆ ಹಲವಾರು ವಲಯಗಳಲ್ಲಿ ಉದ್ಯೋಗಿಗಳಿಗೆ ವರ್ಕ್ ಫ್ರಮ್ ಹೋಮ್ಗೆ ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆಯಿದೆ.
100 ರಷ್ಟು ಹಾಜರಾತಿ ಅಥವಾ ಕಚೇರಿಯಲ್ಲಿ ಪೂರ್ಣ ಸಾಮರ್ಥ್ಯವು ಹಿಂದಿನ ವಿಷಯವಾಗಬಹುದು ಎಂದು ಮಾನವ ಸಂಪನ್ಮೂಲ ವ್ಯವಸ್ಥಾಪಕರು ಅಭಿಪ್ರಾಯಪಟ್ಟಿದ್ದಾರೆ. ಐಟಿ ಸೇರಿದಂತೆ ಹಲವಾರು ವಲಯಗಳು ಉದ್ಯೋಗಿಗಳು ಎಲ್ಲಿಂದಲಾದರೂ ಕೆಲಸ ಮಾಡಲು ಒತ್ತಾಯಿಸುವ ಪ್ರವೃತ್ತಿಗೆ ಸಾಕ್ಷಿಯಾಗುತ್ತಿವೆ ಎಂದು cnbctv18 ವರದಿ ಹೇಳುತ್ತದೆ.