alex Certify ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್: 950 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ RBI | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಉದ್ಯೋಗಾಕಾಂಕ್ಷಿಗಳಿಗೆ ಭರ್ಜರಿ ಗುಡ್‌ ನ್ಯೂಸ್: 950 ಹುದ್ದೆಗಳಿಗೆ ಅರ್ಜಿ ಆಹ್ವಾನಿಸಿದ RBI

ಭಾರತೀಯ ರಿಸರ್ವ್ ಬ್ಯಾಂಕ್​ 950 ಸಹಾಯಕ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಈ ಹುದ್ದೆಗಳಿಗೆ ನೋಂದಣಿ ಪ್ರಕ್ರಿಯೆಯು ಫೆಬ್ರವರಿ 17ರಿಂದ ಆರಂಭಗೊಳ್ಳಲಿದೆ ಎಂದು ಆರ್.​ಬಿ.ಐ. ಮಾಹಿತಿ ನೀಡಿದೆ.

ಈ ಹುದ್ದೆಗೆ ಅರ್ಜಿ ಸಲ್ಲಿಸಲು ಮಾರ್ಚ್​ 08 ಕೊನೆಯ ದಿನಾಂಕವಾಗಿದೆ. ಆಸಕ್ತ ಹಾಗೂ ಅರ್ಹ ಅಭ್ಯರ್ಥಿಗಳು ಆರ್.​ಬಿ.ಐ.ನ ಅಧಿಕೃತ ವೆಬ್​ಸೈಟ್​ rbi.org.in ಮೂಲಕ ಅರ್ಜಿ ಸಲ್ಲಿಸಬಹುದು.

ಅರ್ಹತಾ ಮಾನದಂಡ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಯಾವುದೇ ವಿಭಾಗದಲ್ಲಿ ಬ್ಯಾಚುಲರ್ ಡಿಗ್ರಿಯನ್ನು 50 ಪ್ರತಿಶತ ಅಂಕಗಳೊಂದಿಗೆ ಪಡೆದಿರಬೇಕು . ( ಎಸ್ಸಿ/ಎಸ್ಟಿ/ ಪಿಡಬ್ಲುಡಿ ಅಭ್ಯರ್ಥಿಗಳು ಉತ್ತೀರ್ಣರಾದರೆ ಸಾಕು)

ವಯಸ್ಸಿನ ಮಾನದಂಡ : ಕನಿಷ್ಟ 20 ಹಾಗೂ 28 ವರ್ಷ ವಯಸ್ಸು

ಅರ್ಜಿ ಶುಲ್ಕ : ಅರ್ಜಿ ಶುಲ್ಕವನ್ನು ನೆಟ್​ ಬ್ಯಾಂಕಿಂಗ್​, ಡೆಬಿಟ್​ ಕಾರ್ಡ್​ ಅಥವಾ ಕ್ರೆಡಿಟ್​ ಕಾರ್ಡ್ ಮೂಲಕ ಪಾವತಿಸಬೇಕು.

Gen/EWS/OBC ಅಭ್ಯರ್ಥಿಗಳು 450 ರೂಪಾಯಿಗಳನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕು. SC/ST/PWD/Ex-S ಅಭ್ಯರ್ಥಿಗಳು 50 ರೂಪಾಯಿಯನ್ನು ಅರ್ಜಿ ಶುಲ್ಕವಾಗಿ ಪಾವತಿಸಬೇಕು.

ಅರ್ಜಿ ಸಲ್ಲಿಸುವುದು ಹೇಗೆ..? : ಆಸಕ್ತ ಅಭ್ಯರ್ಥಿಗಳು ಆರ್.​ಬಿ.ಐ.ನ ಅಧಿಕೃತ ವೆಬ್​ಸೈಟ್​ rbi.org.in. ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

ಆನ್​ಲೈನ್​ ಅಪ್ಲಿಕೇಶನ್​ ಆರಂಭ ದಿನಾಂಕ: 2022ರ ಫೆಬ್ರವರಿ 17

ಆನ್​ಲೈನ್​ ಅಪ್ಲಿಕೇಶನ್​​ಗೆ ಕೊನೆಯ ದಿನಾಂಕ : 2022ರ ಮಾರ್ಚ್​ 08

ಅರ್ಜಿ ಶುಲ್ಕ ಪಾವತಿಗೆ ಕೊನೆಯ ದಿನಾಂಕ : 2022ರ ಮಾರ್ಚ್​ 08

ಆರ್.​ಬಿ.ಐ. ಸಹಾಯಕ ಆನ್​ಲೈನ್​ ಎಕ್ಸಾಂ ನಡೆಯುವ ದಿನಾಂಕ : ಮಾರ್ಚ್​ 26 ಹಾಗೂ 27

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...