alex Certify ಕೈಯಲ್ಲಿ ರೈಫಲ್‌ ಹಿಡಿದು ಮಗುವಿನೊಂದಿಗೆ ರಸ್ತೆ ದಾಟಿದ ಉಕ್ರೇನ್ ಮಹಿಳೆ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈಯಲ್ಲಿ ರೈಫಲ್‌ ಹಿಡಿದು ಮಗುವಿನೊಂದಿಗೆ ರಸ್ತೆ ದಾಟಿದ ಉಕ್ರೇನ್ ಮಹಿಳೆ..!

ರಷ್ಯಾದೊಂದಿಗಿನ ಯುದ್ಧದ ನಡುವೆ ಉಕ್ರೇನ್ ಮಹಿಳೆಯೊಬ್ಬರು ರೈಫಲ್ ಹಿಡಿದುಕೊಂಡು ತನ್ನ ಮಗುವಿನೊಂದಿಗೆ ನಡೆಯುತ್ತಿರುವ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಫೋಟೋವನ್ನು ಉಕ್ರೇನ್‌ನ ಸೆಂಟರ್ ಫಾರ್ ಸ್ಟ್ರಾಟೆಜಿಕ್ ಕಮ್ಯುನಿಕೇಷನ್ಸ್ ಮತ್ತು ಇನ್ಫರ್ಮೇಷನ್ ಸೆಕ್ಯುರಿಟಿ ಟ್ವಿಟ್ಟರ್‌ನಲ್ಲಿ ಪೋಸ್ಟ್ ಮಾಡಿದೆ.

ಫೋಟೋದಲ್ಲಿ ಮಹಿಳೆ ಜೀಬ್ರಾ ಕ್ರಾಸಿಂಗ್‌ನಲ್ಲಿ ನಡೆಯುತ್ತಿರುವುದು ಕಂಡುಬಂದಿದೆ. ಮಗುವಿನ ಕೈಯನ್ನು ತನ್ನ ಬಲಗೈಯಿಂದ ಹಿಡಿದಿದ್ದರೆ, ಆಕೆಯ ಎಡ ಭುಜದ ಮೇಲೆ ರೈಫಲ್ ನೇತಾಡುತ್ತಿದೆ. ಗುಲಾಬಿ ಬಣ್ಣದ ಜಾಕೆಟ್ ಧರಿಸಿರುವ ಮಗು ಬ್ಯಾಗ್ ಅನ್ನು ಬೆನ್ನ ಮೇಲೆ ಹಾಕಿರೋ ಫೋಟೋವನ್ನು ಗಮನಿಸಬಹುದು. ಈ ತಾಯಿಯನ್ನು ಉಕ್ರೇನ್ ಅದ್ಭುತ ಮಹಿಳೆ ಎಂದು ಕರೆದಿದೆ. ಪ್ರತಿಯೊಬ್ಬ ಉಕ್ರೇನಿಯನ್ ತಾಯಿ ಕೂಡ ವಂಡರ್ ವುಮನ್ ಎಂದು ಕರೆಯಲು ಅರ್ಹರು ಎಂದು ಫೋಟೋಗೆ ಶೀರ್ಷಿಕೆ ನೀಡಲಾಗಿದೆ.

ಈ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಮಹಿಳೆಯ ಧೈರ್ಯಕ್ಕೆ ಸೆಲ್ಯೂಟ್ ಮಾಡಿದ್ದಾರೆ. ನೀವು ಯೋಚಿಸುವುದಕ್ಕಿಂತ ಹೆಚ್ಚು ಬಲಶಾಲಿಯಾಗಿದ್ದೀರಿ ಎಂದು ಬಳಕೆದಾರರೊಬ್ಬರು ಪ್ರತಿಕ್ರಿಯಿಸಿದ್ದಾರೆ.

— Stratcom Centre UA (@StratcomCentre) March 5, 2022

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...