alex Certify ಕೈದಿಗಳಿಗೆ ಮನರಂಜನೆ ನೀಡಲೆಂದೇ ಎಫ್​ಎಂ ಚಾನೆಲ್​ ಆರಂಭಿಸಿದೆ ಈ ಜೈಲು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೈದಿಗಳಿಗೆ ಮನರಂಜನೆ ನೀಡಲೆಂದೇ ಎಫ್​ಎಂ ಚಾನೆಲ್​ ಆರಂಭಿಸಿದೆ ಈ ಜೈಲು…!

ಇಂದೋರ್‌ನಲ್ಲಿರುವ ಸೆಂಟ್ರಲ್ ಜೈಲು ತನ್ನದೇ ಆದ ಎಫ್‌ಎಂ ರೇಡಿಯೋ ಚಾನೆಲ್ ‘ಜೈಲ್ ವಾಣಿ-ಎಫ್‌ಎಂ 18.77’ ಅನ್ನು ಸ್ಥಾಪಿಸಿದೆ. ಈ ಹೊಸ ಎಫ್​ಎಂ ಚಾನೆಲ್ ನಾಲ್ಕು ಗೋಡೆಗಳ ಬೆಳವಣಿಗೆಗಳ ಬಗ್ಗೆ ಕೈದಿಗಳಿಗೆ ಮಾಹಿತಿಯನ್ನು ನೀಡುತ್ತದೆ.

ಸ್ಥಳೀಯ ಮಾಧ್ಯಮಗಳು ನೀಡಿರುವ ಮಾಹಿತಿಯ ಪ್ರಕಾರ ಈ ರೇಡಿಯೋ ಚಾನೆಲ್ ಕೈದಿಗಳಿಗೆ ದಿನನಿತ್ಯದ ಬೆಳವಣಿಗೆಗಳ ಬಗ್ಗೆ ಮಾಹಿತಿ ನೀಡುವುದು ಮಾತ್ರವಲ್ಲದೇ ಕೈದಿಗಳಿಗೆ ಮನರಂಜನೆಯನ್ನೂ ನೀಡುತ್ತದೆ ಎಂದು ತಿಳಿದುಬಂದಿದೆ.

ಕೈದಿಗಳು ಆರೋಗ್ಯ ಹಾಗೂ ಸಾಮಾಜಿಕ ಸಮಸ್ಯೆಗಳಿಗೆ ಸಂಬಂಧಿಸಿದ ಮಾಹಿತಿಯ ಜೊತೆಯಲ್ಲಿ ಮನರಂಜನಾ ಕಾರ್ಯಕ್ರಮಗಳನ್ನೂ ಆನಂದಿಸಬಹುದಾಗಿದೆ ಎಂದು ಜೈಲಿನ ಸೂಪರಿಟೆಂಡೆಂಟ್​ ಅಲ್ಕಾ ಸೋನ್ಕರ್​ ಮಾಹಿತಿ ನೀಡಿದರು.

ಈ ರೇಡಿಯೋ ಚಾನೆಲ್​ಗಳ ಮೂಲಕ ಕೈದಿಗಳು ಪ್ರಪಂಚದಲ್ಲಿ ಏನು ನಡೆಯುತ್ತಿದೆ ಎಂಬುದರ ಬಗ್ಗೆ ಮಾಹಿತಿಯನ್ನು ಪಡೆದುಕೊಳ್ಳುತ್ತಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...