alex Certify ಕೇವಲ 9 ಸೆಕೆಂಡ್​ಗಳಲ್ಲಿ ನೆಲಸಮಗೊಳ್ಳಲಿದೆ ನೋಯ್ಡಾದ ಅತಿ ಎತ್ತರದ ಅವಳಿ ಕಟ್ಟಡ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 9 ಸೆಕೆಂಡ್​ಗಳಲ್ಲಿ ನೆಲಸಮಗೊಳ್ಳಲಿದೆ ನೋಯ್ಡಾದ ಅತಿ ಎತ್ತರದ ಅವಳಿ ಕಟ್ಟಡ

ನೋಯ್ಡಾ ಸೆಕ್ಟರ್​​ 93 ಎನಲ್ಲಿ ಮೇ 22ರಂದು ಮಧ್ಯಾಹ್ನ 2:30ಕ್ಕೆ ಸರಿಯಾಗಿ ಕೇವಲ 9 ಸೆಕಂಡ್​ಗಳ ಅವಧಿಯಲ್ಲಿ ದೇಶದ ಅತೀ ಎತ್ತರದ ಕಟ್ಟಡವೊಂದು ನೆಲಸಮಗೊಳ್ಳಲಿದೆ.

ಈ ಕಟ್ಟಡವನ್ನು ನೆಲಸಮಗೊಳಿಸುವಂತೆ ಕಳೆದ ವರ್ಷ ಆಗಸ್ಟ್​ 31ರಂದು ಸುಪ್ರೀಂ ಕೋರ್ಟ್​ ತೀರ್ಪನ್ನು ನೀಡಿತ್ತು. ಈ ಆದೇಶ ನೀಡಿದ 9 ತಿಂಗಳುಗಳ ಬಳಿಕ ಕಟ್ಟಡ ನೆಲಸಮಗೊಳ್ಳಲಿದೆ.

ಈ ಕಟ್ಟಡವು ಸ್ಫೋಟಗೊಳ್ಳುವ ಹಿನ್ನೆಲೆಯಲ್ಲಿ ಟವರ್​ನ ಸುತ್ತ ಸುಮಾರು 1500 ಕುಟುಂಬಗಳು ತಮ್ಮ ಮನೆಯನ್ನು ತೊರೆಯಬೇಕಾಗುತ್ತದೆ. ಟವರ್​​ನತ್ತ ತೆರಳುವ ರಸ್ತೆಗಳು ಹಾಗೂ ನೋಯ್ಡಾ ಎಕ್ಸ್​​ಪ್ರೆಸ್​ ವೇ ಪಕ್ಕದ ರಸ್ತೆಗಳನ್ನು ಮುಚ್ಚಲಾಗುತ್ತದೆ. 4000 ಕೆಜಿ ಸ್ಪೋಟಕಗಳನ್ನು ಬಳಸಿ ಟವರ್​ನ್ನು ಸ್ಪೋಟಿಸಲಾಗುತ್ತದೆ.

ನಿಯೋಜನೆಯನ್ನು ಹಸ್ತಾಂತರಿಸಿದ ಕಂಪನಿಯಾದ ಎಡಿಫೈಸ್​​ ಇಂಜಿನಿಯರಿಂಗ್​​ ಸೋಮವಾರದಂದು ಕಟ್ಟಡ ನಾಶದ ಯೋಜನೆಯನ್ನು ಹಂಚಿಕೊಂಡಿದೆ. ಇದರಲ್ಲಿ 31 ಮಹಡಿಗಳನ್ನು ಹೊಂದಿರುವ ಕಟ್ಟಡವು ಮೊದಲು ನೆಲಸಮವಾಗಲಿದೆ. ನಂತರ 32 ಮಹಡಿಗಳನ್ನು ಹೊಂದಿರುವ ಕಟ್ಟಡವು ನೆಲಸಮಗೊಳ್ಳಲಿದೆ. ಕಟ್ಟಡಗಳು ಒಳಮುಖವಾಗಿ ನೆಲಸಮಗೊಳ್ಳಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...