alex Certify ಕೇವಲ 3.8 ಲಕ್ಷಕ್ಕೆ ಸಿಗುತ್ತಿದೆ Maruti Brezza SUV…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ 3.8 ಲಕ್ಷಕ್ಕೆ ಸಿಗುತ್ತಿದೆ Maruti Brezza SUV…!

ಭಾರತದಲ್ಲಿ ಸಬ್-4 ಮೀಟರ್ ಎಸ್‌ಯುವಿ ವಿಭಾಗದಲ್ಲಿ ಬೇಡಿಕೆ ಸಾಕಷ್ಟು ಹೆಚ್ಚಾಗಿದೆ. ಈ ವಿಭಾಗದಲ್ಲಿ SUVಗಳ ಮಾರಾಟವೂ ಜೋರಾಗಿದೆ. ಮಾರುತಿ ಸುಜುಕಿ ಬ್ರೆಝಾ ಕೂಡ ಈ ವಿಭಾಗದ SUV ಆಗಿದ್ದು ಭರ್ಜರಿ ಮಾರಾಟ ಕಾಣ್ತಿದೆ. ಮಾರುತಿ ಸುಜುಕಿ ಬ್ರೆಜ್ಜಾದ ಫೇಸ್‌ಲಿಫ್ಟ್ ಆವೃತ್ತಿಯನ್ನು ಈಗಾಗ್ಲೇ ಬಿಡುಗಡೆ ಮಾಡಲಾಗಿದೆ. ಫೇಸ್‌ಲಿಫ್ಟ್‌ ಆವೃತ್ತಿ ಬಂದ ನಂತರ ಕಾರಿನ ಸೇಲ್ಸ್‌ ಜಾಸ್ತಿಯಾಗಿದೆ.

ಇದೀಗ ಬ್ರೆಜ್ಜಾದ 2022ರ ಫೇಸ್‌ಲಿಫ್ಟ್ ಆವೃತ್ತಿಯನ್ನು ಮಾರಾಟ ಮಾಡಲಾಗುತ್ತಿದೆ, ಇದರ ಬೆಲೆ ಸುಮಾರು 8 ಲಕ್ಷ ರೂಪಾಯಿಗಳಿಂದ ಪ್ರಾರಂಭವಾಗುತ್ತದೆ. ಆದರೆ ಬಜೆಟ್ ಅಷ್ಟು ಇಲ್ಲದಿದ್ದರೆ ಹಳೆಯ ಬ್ರೆಜ್ಜಾವನ್ನು ಕೊಂಡುಕೊಳ್ಳಬಹುದು. ಮಾರುತಿ ಸುಜುಕಿ ಟ್ರೂ ವ್ಯಾಲ್ಯೂ ವೆಬ್‌ಸೈಟ್‌ನಲ್ಲಿ ಅನೇಕ ಬಳಸಿದ ಬ್ರೆಝಾಗಳು ಮಾರಾಟಕ್ಕೆ ಲಭ್ಯವಿವೆ. ಇವುಗಳ ಬೆಲೆ ಕೇವಲ 3.8 ಲಕ್ಷ ರೂಪಾಯಿಗಳಿಂದ ಆರಂಭವಾಗುತ್ತದೆ.

2017ರ ಮಾಡೆಲ್ ಮಾರುತಿ ವಿಟಾರಾ ಬ್ರೆಝಾ VDI, 2018ರ ಮಾಡೆಲ್ Vitara Brezza LDI, 2016ರ ಮಾಡೆಲ್ Vitara Brezza LDI, 2018ರ ಮಾಡೆಲ್ Vitara Brezza ZDI ಹೀಗೆ ಅನೇಕ ಸೆಕೆಂಡ್‌ ಹ್ಯಾಂಡ್‌ ಕಾರುಗಳು ಲಭ್ಯವಿವೆ. ದೇಶದ ನಾನಾ ಭಾಗಗಳಲ್ಲಿ ಈ ಕಾರುಗಳು ಕಡಿಮೆ ಬೆಲೆಗೆ ಮಾರಾಟಕ್ಕಿದ್ದು, ಕಡಿಮೆ ಬಜೆಟ್‌ನಲ್ಲಿ ಇವುಗಳನ್ನು ಕೊಂಡುಕೊಳ್ಳಬಹುದು.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...