alex Certify ಕೇವಲ ಒಂದು ಕೋಲಿನಿಂದ ಸಿಂಹವನ್ನು ಹೆದರಿಸಿದ ಭೂಪ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇವಲ ಒಂದು ಕೋಲಿನಿಂದ ಸಿಂಹವನ್ನು ಹೆದರಿಸಿದ ಭೂಪ..!

ನಿಮ್ಮ ಮೇಲೆ ನಿಮಗೆ ನಂಬಿಕೆಯಿದ್ದಾಗ, ನೀವು ಏನು ಬೇಕಾದರೂ ಸಾಧಿಸಬಹುದು. ಸಿಂಹ, ಹುಲಿ ಇವ್ಯಾವುದಕ್ಕೂ ನೀವು ಹೆದರುವ ಪ್ರಮೇಯವೇ ಬರುವುದಿಲ್ಲ. ಅಯ್ಯಬ್ಬಾ.. ಸಿಂಹಕ್ಕೆ ಹೆದರದೆ ಅದನ್ನು ಓಡಿಸುವುದು ಸಾಧ್ಯವೇ ಎಂಬಂತಹ ಪ್ರಶ್ನೆ ನಿಮ್ಮ ಮನಸ್ಸಿನಲ್ಲಿ ಮೂಡೋದು ಸಹಜ. ಇದು ವಿಲಕ್ಷಣವಾಗಿ ತೋರುತ್ತದೆಯಾದರೂ, ಇತ್ತೀಚಿಗೆ ವೈರಲ್ ಆದ ವಿಡಿಯೋ ನೋಡಿದ್ರೆ ಖಂಡಿತಾ ನೀವು ನಿಬ್ಬೆರಗಾಗ್ತೀರಾ..!

ಅನಿಮಲ್ಸ್ ಪವರ್ಸ್ ಇನ್‌ಸ್ಟಾಗ್ರಾಮ್ ಪುಟದಲ್ಲಿ ವಿಡಿಯೋವೊಂದನ್ನು  ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ, ವ್ಯಕ್ತಿಯೊಬ್ಬ ಸಿಂಹವನ್ನು ಕೇವಲ ಕೋಲಿನಿಂದ ಹೆದರಿಸಿ ಓಡಿಸುತ್ತಿರುವ ಮೈ ಜುಮ್ಮೆನ್ನಿಸೋ ದೃಶ್ಯವನ್ನು ತೋರಿಸಲಾಗಿದೆ. ಹಾಗಂತ ಇದೇನು ಮೃಗಾಲಯ ಅಥವಾ ಸಂರಕ್ಷಿತ ಪರಿಸರವಲ್ಲ. ಆದರೆ, ಇದು ಕಾಡಿನ ಮಧ್ಯದಲ್ಲಿದೆ. ಗಾಬರಿಗೊಂಡ ಸಿಂಹವು ಆತನ ಕೈಯಲ್ಲಿದ್ದ ಕೋಲು ಕಂಡು ಓಟಕ್ಕಿತ್ತಿದೆ.

ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಿದ ನಂತರ ಈ ವಿಡಿಯೋ 55,000ಕ್ಕೂ ಹೆಚ್ಚು ಲೈಕ್ಸ್ ಗಳು ಮತ್ತು ಸುಮಾರು 8 ಲಕ್ಷ ವೀಕ್ಷಣೆಗಳನ್ನು ಗಳಿಸಿದೆ. ಸಿಂಹವು ಕೇವಲ ವ್ಯಕ್ತಿಯ ಕೈಯಲ್ಲಿ ಕೋಲು ಕಂಡು ಭಯಭೀತವಾಗಿ ಓಡುತ್ತಿರುವುದನ್ನು ನೋಡಿ ನೆಟ್ಟಿಗರು ಆಶ್ಚರ್ಯಚಕಿತರಾಗಿದ್ದಾರೆ. ಕೆಲವರು ಈ ವಿಡಿಯೋವನ್ನು ನಕಲಿ ಎಂದು ಕರೆದಿದ್ದಾರೆ. ಇನ್ನೂ ಕೆಲವರು ಬಹುಶಃ ಆತ ಅದರ ತರಬೇತುದಾರ ಆಗಿರಬಹುದು ಅಂತಾ ಅಂದಾಜಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...