alex Certify ಕೇರಳ ಮಹಿಳೆಗೆ ಮರಣ ದಂಡನೆ ಆದೇಶ ಎತ್ತಿ ಹಿಡಿದ ಯೆಮೆನ್​ ಕೋರ್ಟ್..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇರಳ ಮಹಿಳೆಗೆ ಮರಣ ದಂಡನೆ ಆದೇಶ ಎತ್ತಿ ಹಿಡಿದ ಯೆಮೆನ್​ ಕೋರ್ಟ್..!

ಯೆಮೆನ್​​ ಪ್ರಜೆಯ ಕೊಲೆ ಪ್ರಕರಣದಲ್ಲಿ ಕೇರಳ ಮಹಿಳೆಗೆ ವಿಧಿಸಲಾಗಿದ್ದ ಮರಣದಂಡನೆ ಆದೇಶವನ್ನು ರದ್ದು ಮಾಡುವಂತೆ ಕೋರಿ ಯೆಮೆನ್​ ನ್ಯಾಯಾಲಯಕ್ಕೆ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಕೋರ್ಟ್​ ತಿರಸ್ಕರಿಸಿದೆ.

ಕೇರಳದ ಪಾಲಕ್ಕಾಡ್​ ಜಿಲ್ಲೆಯವರಾದ ನಿಮಿಷಾ ಪ್ರಿಯ ತಲಾಲ್​ ಅಬ್ದು ಮಹದಿಯನ್ನು ಹತ್ಯೆಗೈದ ಆರೋಪದ ಅಡಿಯಲ್ಲಿ ಯೆಮೆನ್​ನಲ್ಲಿ ಜೈಲುಪಾಲಾಗಿದ್ದಾರೆ.

2017 ರಲ್ಲಿ ಈ ಕೃತ್ಯ ನಡೆದಿತ್ತು. ಮರಣದಂಡನೆ ಆದೇಶದ ವಿರುದ್ಧ ನಿಮಿಷಾ ಪ್ರಿಯಾ ಕುಟುಂಬ ಮೇಲ್ಮನವಿ ಸಲ್ಲಿಸಿತ್ತು. ಯೆಮೆನ್​ ರಾಜಧಾನಿ ಸನಾದಲ್ಲಿ ನ್ಯಾಯಾಲಯವು ಈ ಅರ್ಜಿಯನ್ನು ತಿರಸ್ಕರಿಸಿದೆ.

ಮಹಿಳೆ ಎಂಬ ಕಾರಣಕ್ಕೆ ಮತ್ತು ತನ್ನ ವಯಸ್ಸಾದ ತಾಯಿ ಹಾಗೂ ಆರು ವರ್ಷದ ಮಗನನ್ನು ಪರಿಗಣಿಸಿ ಶಿಕ್ಷೆಯ ಪ್ರಮಾಣವನ್ನು ಕಡಿಮೆ ಮಾಡಬೇಕೆಂದು ನಿಮಿಷಾ ಕೋರ್ಟ್ ಮುಂದೆ ಮನವಿ ಮಾಡಿದ್ದರು.

ಮೇಲ್ಮನವಿ ತಿರಸ್ಕೃತಗೊಂಡಿರುವ ಹಿನ್ನೆಲೆಯಲ್ಲಿ ಸುಪ್ರೀಂ ಜ್ಯುಡಿಷಿಯಲ್​ ಕೌನ್ಸಿಲ್​ಗೆ ಅರ್ಜಿ ಸಲ್ಲಿಸುವುದು ನಿಮಿಷಾ ಮುಂದಿರುವ ಆಯ್ಕೆಯಾಗಿದೆ. ಆದರೆ ಇಲ್ಲೂ ಕೂಡ ನಿಮಿಷಾಗೆ ಯಾವುದೇ ವಿನಾಯಿತಿ ಸಿಗುವಂತೆ ಕಾಣುತ್ತಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...