alex Certify ಕೇಜ್ರಿವಾಲ್‌ ಬಳಿಕ ಮತ್ತೊಬ್ಬ ಜನಪ್ರತಿನಿಧಿಗೆ ಕೊರೊನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೇಜ್ರಿವಾಲ್‌ ಬಳಿಕ ಮತ್ತೊಬ್ಬ ಜನಪ್ರತಿನಿಧಿಗೆ ಕೊರೊನಾ

 

ಬಿಜೆಪಿ ಸಂಸದ ಮನೋಜ್ ತಿವಾರಿ ಅವರಲ್ಲಿ ಕೊರೋನಾ ಸೋಂಕು ದೃಢವಾಗಿದೆ. ಈ ಮೂಲಕ ಕೋವಿಡ್ ಪಾಸಿಟಿವ್ ಆಗಿರುವ ರಾಜಕಾರಣಿಗಳ ಲಿಸ್ಟ್ ಗೆ ಮನೋಜ್ ಸಹ ಸೇರಿಕೊಂಡಿದ್ದಾರೆ‌. ಈ ಬಗ್ಗೆ ಸ್ವತಃ ಸಂಸದರೆ ಟ್ವೀಟ್ ಮಾಡಿ ಕೋವಿಡ್ ಪಾಸಿಟಿವ್ ಆಗಿರುವುದನ್ನ ಖಚಿತಪಡಿಸಿದ್ದಾರೆ.

ಭಾನುವಾರ ಮನೋಜ್ ತಿವಾರಿಯವರಿಗೆ ಅಸ್ವಸ್ಥತೆ ಕಾಡಿದೆ. ಕೆಮ್ಮು, ಶೀತ ಹಾಗೂ ಜ್ವರದಿಂದ ಬಳಲುತ್ತಿದ್ದ ಸಂಸದರು ನಿನ್ನೆ ಉತ್ತರಾಖಂಡದ ರುದ್ರಪುರದ ಚುನಾವಣ ಪ್ರಚಾರಕ್ಕೆ ತೆರಳಬೇಕಿತ್ತು. ಆದರೆ ಅಸ್ವಸ್ಥರಾಗಿದ್ದರಿಂದ ಪ್ರಚಾರಕ್ಕೆ ತೆರಳಲಿಲ್ಲ. ಆನಂತರ ಕೊರೋನಾ ಪರೀಕ್ಷೆಗೆ ಒಳಗಾಗಿದ್ದು ಇಂದು ಬೆಳಗ್ಗೆ ಮನೋಜ್ ತಿವಾರಿಯವರಲ್ಲಿ ಕೊರೋನಾ ಸೋಂಕು ಪತ್ತೆಯಾಗಿದೆ‌.

ಸೂಪರ್ ಮಾರ್ಕೆಟ್ ತಿಂಡಿ ಮೇಲೆ ಉಗುಳಿದ್ದ ಮಹಿಳೆಗೆ ಜೈಲು

ಎಲ್ಲರು ಮುನ್ನೆಚ್ಚರಿಕೆ ವಹಿಸಿ, ನನ್ನ ಆರೋಗ್ಯ ಸ್ಥಿರವಾಗಿದೆ‌. ನಾನು ಪ್ರತ್ಯೇಕವಾಗಿ ಮನೆಯಲ್ಲಿ ಕ್ವಾರಂಟೈನ್ ಆಗಿದ್ದೇನೆ. ದಯವಿಟ್ಟು ಎಲ್ಲರು ಕಾಳಜಿ ವಹಿಸಿ, ನಿಮ್ಮ ಕುಟುಂಬವನ್ನ ರಕ್ಷಿಸಿಕೊಳ್ಳಿ ಎಂದು ಟ್ವೀಟ್ ಮಾಡಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹಾಗೂ ಕೇಂದ್ರ ಸಚಿವ ಮಹೇಂದ್ರನಾಥ್ ಪಾಂಡೆ ಅವರಲ್ಲಿ ಕೊರೋನಾ ಸೋಂಕು ದೃಢವಾಗಿರುವುದನ್ನ ಇಂದು ಬೆಳಗ್ಗೆ ಟ್ವೀಟ್ ಮೂಲಕ ತಿಳಿಸಿದ್ದರು‌.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...