alex Certify ಕೆಲಸದಲ್ಲಿ ಗುರಿ ಮುಟ್ಟದಿದ್ರೆ ತಿನ್ಬೇಕು ಹಸಿ ಮೊಟ್ಟೆ….! ಈ ದೇಶದ ಉದ್ಯೋಗಿಗಳಿಗೆ ವಿಚಿತ್ರ ಶಿಕ್ಷೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸದಲ್ಲಿ ಗುರಿ ಮುಟ್ಟದಿದ್ರೆ ತಿನ್ಬೇಕು ಹಸಿ ಮೊಟ್ಟೆ….! ಈ ದೇಶದ ಉದ್ಯೋಗಿಗಳಿಗೆ ವಿಚಿತ್ರ ಶಿಕ್ಷೆ

ಪ್ರತಿ ದೇಶದಲ್ಲೂ ವಿಭಿನ್ನ ನಿಯಮ ಮತ್ತು ನಿಬಂಧನೆಗಳಿರುತ್ತವೆ. ಆದರೆ ಕಚೇರಿ ಕೆಲಸದ ವಿಚಾರಕ್ಕೆ ಬಂದ್ರೆ ಎಲ್ಲಾ ಕಡೆ ಉದ್ಯೋಗಿಗಳಿಗೆ ಒತ್ತಡ ಇದ್ದೇ ಇದೆ. ಚೀನಾದಲ್ಲಂತೂ ಕೆಲಸ ಶಿಕ್ಷೆಗೆ ಸಮಾನ. ಸದ್ಯ ಚೀನಾದ ಕಂಪನಿಯೊಂದು ಉದ್ಯೋಗಿಗಳಿಗೆ ನೀಡಿರುವ ವಿಚಿತ್ರ ಶಿಕ್ಷೆ ಭಾರೀ ಸುದ್ದಿ ಮಾಡ್ತಿದೆ.

ಚೀನಾದ ಈ ಕಂಪನಿ ಉದ್ಯೋಗಿಗಳು ತಾನು ಬಯಸಿದಂತೆ ಕೆಲಸ ಮಾಡದೇ ಇದ್ರೆ ಹಸಿ ಮೊಟ್ಟೆಗಳನ್ನು ತಿನ್ನುವ ಶಿಕ್ಷೆ ವಿಧಿಸುತ್ತದೆ. ಹಸಿ ಮೊಟ್ಟೆಗಳನ್ನು ತಿನ್ನಲು ನಿರಾಕರಿಸಿದ್ರೆ ಅವರ ಕೆಲಸಕ್ಕೇ ಕುತ್ತು ಬರುತ್ತದೆ. ಚೀನಾದ ಝೆಂಗ್ಝೌನಲ್ಲಿರುವ ಕಂಪನಿಯೊಂದು ಈ ವಿಲಕ್ಷಣ ಶಿಕ್ಷೆಯನ್ನು ವಿಧಿಸುತ್ತಿದೆ.  ಕಂಪನಿಯಲ್ಲಿ ಇಂಟರ್ನ್‌ ಆಗಿ ಕೆಲಸ ಮಾಡ್ತಿದ್ದ ವ್ಯಕ್ತಿಯೊಬ್ಬ ಈ ಅನುಭವವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ.

ಉದ್ಯೋಗಿ ತನಗೆ ಕೊಟ್ಟಿರೋ ಟಾರ್ಗೆಟ್‌ ರೀಚ್‌ ಆಗದೇ ಇದ್ರೆ, ಕಂಪನಿಯ ನಿರೀಕ್ಷೆಗಳಿಗೆ ತಕ್ಕಂತೆ ಬದುಕದಿದ್ದರೆ ಅವರು ಹಸಿ ಮೊಟ್ಟೆಗಳನ್ನು ತಿನ್ನಬೇಕು. ಇಂಟರ್ನ್‌ಶಿಪ್ ಸಮಯದಲ್ಲಿ ಆತ ಮೊಟ್ಟೆ ತಿನ್ನಲು ನಿರಾಕರಿಸಿದ್ದನಂತೆ. ತಕ್ಷಣವೇ ಆತನ ಇಂಟರ್ನ್‌ಶಿಪ್‌ ಅನ್ನು ಕಡಿತ ಮಾಡಲಾಯ್ತು. ಕೆಲವರು ಹಸಿ ಮೊಟ್ಟೆ ಸೇವಿಸಲು ಇಷ್ಟವಾಗದೇ ಅಲ್ಲೇ ವಾಂತಿ ಮಾಡಿಕೊಳ್ತಾರಂತೆ. ಆದರೂ ಹಿರಿಯ ಅಧಿಕಾರಿಗಳು ಅವರನ್ನು ಬಿಡುವುದಿಲ್ಲ.

ಚೀನಾದ ಕಂಪನಿಯ ಈ ವಿಚಿತ್ರ ನಿಯಮದ ಬಗ್ಗೆ ಜಾಲತಾಣಗಳಲ್ಲಿ ಟೀಕೆ ವ್ಯಕ್ತವಾಗಿದೆ. ಇದು ಅಮಾನವೀಯ ಎಂದು ಹಲವರು ಕಮೆಂಟ್‌ ಮಾಡಿದ್ದಾರೆ. ಹಸಿ ಮೊಟ್ಟೆಗಳನ್ನು ತಿನ್ನುವುದು ಅನಾರೋಗ್ಯಕರ ಎಂದೂ ಹೇಳಲಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...