alex Certify ಕೆಲಸಕ್ಕೆ ಸೇರಿದ 8 ದಿನಗಳಲ್ಲೇ ನಡೆಯಿತು ದುರಂತ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸಕ್ಕೆ ಸೇರಿದ 8 ದಿನಗಳಲ್ಲೇ ನಡೆಯಿತು ದುರಂತ

ತಿರುವನಂತಪುರಂ: ಯುವತಿಯೊಬ್ಬಳು ಸರ್ಕಾರಿ ಕೆಲಸಕ್ಕೆ ಸೇರಿ ಕೇವಲ 8 ದಿನಗಳಾಗಿತ್ತು. ಅಷ್ಟರಲ್ಲಿಯೇ ಪಾಪಿಯೊಬ್ಬನ ಕಣ್ಣು ಬಿದ್ದು, ಯುವತಿ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ.

ಈ ಘಟನೆ ಕೇರಳದ ಕೋಜಿಕೋಡ್ ನಲ್ಲಿ ನಡೆದಿದೆ. ಕೃಷ್ಣಪ್ರಿಯಾ(22) ಎಂಬ ಯುವತಿಯೇ ಈ ರೀತಿ ಪ್ರಾಣ ಕಳೆದುಕೊಂಡವರು. ನಂದನ್ ಕುಮಾರ್(26) ಎಂಬ ಯುವಕ ಬೆಂಕಿ ಹಚ್ಚಿ, ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಗರ್ಭಿಣಿಯರ ಆರೋಗ್ಯಕ್ಕೆ ಒಳ್ಳೆಯದಾ ಎಳನೀರು…..?

ಮೃತ ಯುವತಿ ಪಂಚಾಯತ್ ಕಚೇರಿಯಲ್ಲಿ ಯೋಜನಾ ಸಹಾಯಕಿ ಹುದ್ದೆಗೆ ಆಯ್ಕೆಯಾಗಿದ್ದರು. ಅಲ್ಲದೇ, ಕೆಲಸಕ್ಕೆ ಹಾಜರಾಗಿ ಕೇವಲ 8 ದಿನಗಳು ಮಾತ್ರ ಕಳೆದಿತ್ತು. ಈ ಸಂದರ್ಭದಲ್ಲಿ ಅಲ್ಲಿಯೇ ದಿನಗೂಲಿ ನೌಕರನಾಗಿ ಕೆಲಸ ಮಾಡುತ್ತಿದ್ದ ನಂದನ್ ಕುಮಾರ್, ಮದುವೆ ಪ್ರಸ್ತಾಪ ಮುಂದಿಟ್ಟಿದ್ದಾನೆ. ಇದಕ್ಕೆ ಯುವತಿ ಒಪ್ಪಿಲ್ಲ. ಹೀಗಾಗಿ ಪಂಚಾಯತ್ ಕಚೇರಿ ಮುಂದೆ ಯುವತಿಗೆ ಬೆಂಕಿ ಹಚ್ಚಿ, ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಕೂಡಲೇ ನೌಕರಸ್ಥರು ಹಾಗೂ ಸ್ಥಳೀಯರು ಇಬ್ಬರನ್ನೂ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ, ಸಾವನ್ನಪ್ಪಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...