alex Certify ಕೂದಲ ತುದಿ ಕವಲೊಡೆದಿದೆಯಾ….? ಈ ಸಮಸ್ಯೆಗೂ ಇದೆ ‘ಮದ್ದು’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕೂದಲ ತುದಿ ಕವಲೊಡೆದಿದೆಯಾ….? ಈ ಸಮಸ್ಯೆಗೂ ಇದೆ ‘ಮದ್ದು’

ತ್ವಚೆಯನ್ನು ಆರೈಕೆ ಮಾಡುವಷ್ಟೇ ಮಹತ್ವವನ್ನು ಕೂದಲ ಕಾಳಜಿಗೂ ಕೊಟ್ಟರೆ ಮಾತ್ರ ನಿಮ್ಮ ಸೌಂದರ್ಯ ನೈಸರ್ಗಿಕವಾಗಿಯೂ, ಆಕರ್ಷಕವಾಗಿಯೂ ಕಾಣಿಸಿಕೊಳ್ಳುತ್ತದೆ. ಕೂದಲು ಕವಲೊಡೆಯುವುದರಿಂದ ಉದ್ದಗೆ ಬೆಳೆಯುವುದಿಲ್ಲ ಮತ್ತು ಉದುರುವುದೂ ಹೆಚ್ಚುತ್ತದೆ.

ಕೂದಲು ಕವಲೊಡೆಯುವುದನ್ನು ತಪ್ಪಿಸಲು ಮೊಟ್ಟೆ ಮತ್ತು ಮೊಸರಿನ ಮಿಶ್ರಣವನ್ನು ಬಳಸುವುದು ಒಳ್ಳೆಯದು. ಇದರಲ್ಲಿ ವಿಟಮಿನ್ ಬಿ ಮತ್ತು ಎ ಅಂಶಗಳಿದ್ದು ಕೂದಲನ್ನು ಬಲಿಷ್ಠಗೊಳಿಸುತ್ತದೆ. ಕೂದಲನ್ನು ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳುತ್ತದೆ.

 ಅವಕಾಡೊ ಮತ್ತು ಬಾಳೆಹಣ್ಣಿನ ಮಾಸ್ಕ್ ನಿಮ್ಮ ಕೂದಲಿಗೆ ಹೊಳಪು ನೀಡುತ್ತದೆ. ಇವೆರಡನ್ನೂ ಚೆನ್ನಾಗಿ ರುಬ್ಬಿ ನಿಮ್ಮ ಕೂದಲಿಗೆ ಹಚ್ಚಿಕೊಳ್ಳಿ. 20 ನಿಮಿಷದ ಬಳಿಕ ಉಗುರು ಬೆಚ್ಚಗಿನ ನೀರಿನಿಂದ ತಲೆ ತೊಳೆಯಿರಿ.

ಕೊಬ್ಬರಿ ಎಣ್ಣೆ ಮತ್ತು ಆಲೀವ್ ಎಣ್ಣೆಯ ಮಾಸ್ಕ್ ನಿಂದಲೂ ನಿಮ್ಮ ಕೂದಲು ಸೀಳಾಗುವ ಸಮಸ್ಯೆಯಿಂದ ಮುಕ್ತಿ ಪಡೆಯಬಹುದು. ಅಲೋವೇರಾ ಮತ್ತು ಜೇನನ್ನು ಬೆರೆಸಿ ಹಚ್ಚಿಕೊಂಡರೂ ನಿಮ್ಮ ಸಮಸ್ಯೆ ಬಗೆಹರಿಯುತ್ತದೆ. ಇವುಗಳ ಬಳಕೆಯಿಂದ ಯಾವುದೇ ಅಡ್ಡ ಪರಿಣಾಮಗಳಿಲ್ಲ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...