alex Certify ಕುಶಲಕರ್ಮಿಗಳಿಗೆ ಭರ್ಜರಿ ಗುಡ್ ನ್ಯೂಸ್; ಸಾಲದ ಜೊತೆಗೆ ಸಹಾಯಧನ ಯೋಜನೆಗೆ ‘ಗ್ರೀನ್ ಸಿಗ್ನಲ್’ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಶಲಕರ್ಮಿಗಳಿಗೆ ಭರ್ಜರಿ ಗುಡ್ ನ್ಯೂಸ್; ಸಾಲದ ಜೊತೆಗೆ ಸಹಾಯಧನ ಯೋಜನೆಗೆ ‘ಗ್ರೀನ್ ಸಿಗ್ನಲ್’

ಕುಂಬಾರ, ಚಮ್ಮಾರಿಕೆ, ಕಮ್ಮಾರ, ಬಡಗಿ, ಶಿಲ್ಪಿಗಳು, ಭಜಂತ್ರಿ, ಬುಟ್ಟಿ ಹೆಣೆಯುವವರು, ವಿಶ್ವಕರ್ಮರು ಸೇರಿದಂತೆ ಅತಿ ಸಣ್ಣ ಕುಶಲಕರ್ಮಿಗಳಿಗೆ ರಾಜ್ಯ ಸರ್ಕಾರ ಭರ್ಜರಿ ಗುಡ್ ನ್ಯೂಸ್ ನೀಡಿದೆ. ಇವರಿಗೆ ಸಾಲ, ಸಹಾಯಧನ ಒದಗಿಸುವ ಹೊಸ ಯೋಜನೆಗೆ ಈಗ ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಈ ವಿಶೇಷ ಯೋಜನೆ ಅಡಿ ಬ್ಯಾಂಕುಗಳಿಂದ ತಲಾ 50,000 ರೂಪಾಯಿ ಸಾಲ – ಸಹಾಯಧನ ನೀಡಲಾಗುತ್ತಿದ್ದು, ಈ ಪೈಕಿ 35,000 ರೂಪಾಯಿ ಸಾಲವಾಗಿದ್ದರೆ 15,000 ರೂಪಾಯಿ ಸಹಾಯಧನ ಸಿಗಲಿದೆ. ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯ ಮೂಲಕ ಈ ಯೋಜನೆ ಜಾರಿಗೆ ಬರಲಿದೆ.

ಪ್ರಸ್ತುತ ರಾಜ್ಯದಲ್ಲಿ 35,000 ಅತಿ ಸಣ್ಣ ನೋಂದಾಯಿತ ಕುಶಲಕರ್ಮಿಗಳಿದ್ದು, ನೋಂದಾಯಿಸಿಕೊಳ್ಳದ ಕುಶಲಕರ್ಮಿಗಳಿಗೂ ಸಾಲ ಸೌಲಭ್ಯ ಒದಗಿಸುವ ಉದ್ದೇಶವನ್ನು ರಾಜ್ಯ ಸರ್ಕಾರ ಹೊಂದಿದೆ.

ಈ ಯೋಜನೆಯಡಿ ಪ್ರಯೋಜನ ಪಡೆಯುವಂತಹ ಕುಶಲಕರ್ಮಿಗಳಿಗೆ ಕನಿಷ್ಠ 18 ವರ್ಷಗಳಾಗಿರಬೇಕು. ಬ್ಯಾಂಕುಗಳಿಂದ ಪಡೆದ ಸಾಲಕ್ಕೆ ಮಾತ್ರ ಸಹಾಯಧನ ನೀಡಲಾಗುತ್ತಿದ್ದು, ಒಬ್ಬರಿಗೆ ಒಂದು ಬಾರಿ ಮಾತ್ರ ಈ ಸೌಲಭ್ಯ ಸಿಗಲಿದೆ. ಇದರ ಪ್ರಯೋಜನ ಪಡೆಯಲು ರಾಜ್ಯ ಕರಕುಶಲ ಅಭಿವೃದ್ಧಿ ನಿಗಮ (ಕರಕುಶಲ) ಅಥವಾ ಅಭಿವೃದ್ಧಿ ಆಯುಕ್ತರ ಕಚೇರಿಯಲ್ಲಿ ನೋಂದಣಿ ಆಗಿರಬೇಕು ಅಥವಾ ಉಪನಿರ್ದೇಶಕರು ಗ್ರಾಮೀಣ ಕೈಗಾರಿಕೆ ಅಥವಾ ಸ್ಥಳೀಯ ಗ್ರಾಮ ಪಂಚಾಯಿತಿ / ನಗರ ಸ್ಥಳೀಯ ಸಂಸ್ಥೆಯಿಂದ ದೃಢೀಕರಣಗೊಂಡಿರಬೇಕಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...