alex Certify ಕುರ್ತಾ -ಪೈಜಾಮಾ ಧರಿಸಿದ್ದಕ್ಕೆ ಶಿಕ್ಷಕನಿಗೆ ನೋಟೀಸ್: ನೆಟ್ಟಿಗರಿಂದ ಆಕ್ರೋಶ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುರ್ತಾ -ಪೈಜಾಮಾ ಧರಿಸಿದ್ದಕ್ಕೆ ಶಿಕ್ಷಕನಿಗೆ ನೋಟೀಸ್: ನೆಟ್ಟಿಗರಿಂದ ಆಕ್ರೋಶ

ಲಖಿಸರಾಯ್​ ಜಿಲ್ಲಾಧಿಕಾರಿ ಶಾಲಾ ಮುಖ್ಯೋಪಾಧ್ಯಾಯರ ಉಡುಪನ್ನು ಖಂಡಿಸಿದ ಬಳಿಕ ಸೋಶಿಯಲ್​ ಮೀಡಿಯಾದಲ್ಲಿ ವ್ಯಾಪಕ ವಿರೋಧವನ್ನು ಎದುರಿಸುತ್ತಿದ್ದಾರೆ. ಬಿಹಾರದ ಲಖಿಸರಾಯ್​ ಜಿಲ್ಲೆಯ ಜಿಲ್ಲಾಧಿಕಾರಿ ಸಂಜಯ್​ ಕುಮಾರ್​ ಸಿಂಗ್​ ಕೆಲಸದ ಸ್ಥಳದಲ್ಲಿ ಕುರ್ತಾ ಪೈಜಾಮ ಧರಿಸಿ ಬಂದಿದ್ದ ಶಾಲಾ ಮುಖ್ಯೋಪಾಧ್ಯಾಯ ನಿರ್ಭಯ್​ ಕುಮಾರ್​ ಸಿಂಗ್​ ಮೇಲೆ ಕೂಗಾಡಿದ್ದು ಈ ವಿಡಿಯೋ ಸೋಶಿಯಲ್​ ಮೀಡಿಯಾಗಳಲ್ಲಿ ವೈರಲ್​ ಆಗಿದೆ.

ಸಂಜಯ್​ ಕುಮಾರ್​​ ಶಾಲೆಗೆ ಬರುವಾಗ ಮುಖ್ಯೋಪಾಧ್ಯಾಯರು ಧರಿಸಿ ಬಂದಿದ್ದ ಉಡುಪನ್ನು ಕಂಡು ಅತೀವ ಅತೃಪ್ತಿಯನ್ನು ಹೊರ ಹಾಕಿದ್ದರು. ಮುಖ್ಯೋಪಾಧ್ಯಾಯ ಶಿಕ್ಷಕನಿಗಿಂತ ಹೆಚ್ಚಾಗಿ ರಾಜಕಾರಣಿಯಂತೆ ಕಾಣುತ್ತಾರೆ ಎಂದು ಸಂಜಯ್​ ಕುಮಾರ್​ ಸಿಂಗ್​ ಹೇಳಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿರುವ ವಿಡಿಯೋದಲ್ಲಿ ಸಂಜಯ್​ ಕುಮಾರ್​ ಸಿಂಗ್​ ಶಿಕ್ಷಕ ನಿರ್ಭಯ್​ ಕುಮಾರ್​ ಸಿಂಗ್​ಗೆ ನೀವು ಶಿಕ್ಷಕರಂತೆ ಕಾಣುತ್ತೀರಾ..? ನೀವು ಈ ಉಡುಪಿನಲ್ಲಿ ಜನಪ್ರತಿನಿಧಿಯಂತೆ ಕಾಣುತ್ತಿದ್ದೀರಿ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಳಿಕ ಜಿಲ್ಲಾಧಿಕಾರಿ ಶಾಲೆಯ ನಿರ್ವಹಣೆಯ ಬಗ್ಗೆಯೂ ಪ್ರಶ್ನೆ ಮಾಡುತ್ತಾರೆ. ಮುಖ್ಯೋಪಾಧ್ಯಾಯರ ವಿರುದ್ಧ ದೂರು ನೀಡಲು ಮೇಲಾಧಿಕಾರಿಗಳಿಗೆ ಸಂಜಯ್​ ಕರೆ ಕೂಡ ಮಾಡಿದ್ದಾರೆ. ನಿರ್ಭಯ್​ ಸಿಂಗ್​​ರನ್ನು ಅಮಾನತುಗೊಳಿಸುವಂತೆ ಹಾಗೂ ಅವರಿಗೆ ಸಂಬಳ ಕಡಿತಗೊಳಿಸುವಂತೆ ಹೇಳಿದ್ದಾರೆ. ಈ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದ್ದು ಜಿಲ್ಲಾಧಿಕಾರಿ ವಿರುದ್ಧ ಆಕ್ರೋಶ ಹೊರ ಹಾಕ್ತಿದ್ದಾರೆ. ಶಾಲಾ ಶಿಕ್ಷಕ ಕುರ್ತಾ ಪೈಜಾಮಾ ಧರಿಸುವುದು ಅಪರಾಧವೇ ಎಂದು ಪ್ರಶ್ನೆ ಮಾಡ್ತಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...