alex Certify ಕುರಿಮರಿಯ ಅದ್ದೂರಿ ಬರ್ತಡೇ ಆಚರಣೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುರಿಮರಿಯ ಅದ್ದೂರಿ ಬರ್ತಡೇ ಆಚರಣೆ…!

ವ್ಯಕ್ತಿಯೊಬ್ಬರು ತಾವು ಅತ್ಯಂತ ಪ್ರೀತಿಯಿಂದ ಸಾಕಿದ ಕುರಿಮರಿಯ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿರುವ ಅಪರೂಪದ ಘಟನೆ ಚಿತ್ರದುರ್ಗ ಜಿಲ್ಲೆಯಲ್ಲಿ ನಡೆದಿದೆ.

ಹಿರಿಯೂರು ತಾಲೂಕಿನ ಟಿಬಿ ಗೊಲ್ಲರಹಟ್ಟಿಯ ಕೃಷ್ಣಮೂರ್ತಿ ಎಂಬವರು ತಮ್ಮ ಕುಟುಂಬ ಸದಸ್ಯರೊಂದಿಗೆ ಸೇರಿ ಬರೋಬ್ಬರಿ 5 ಕೆಜಿ ಕೇಕ್ ಕತ್ತರಿಸುವ ಮೂಲಕ ಕುರಿಮರಿಯ ಹುಟ್ಟುಹಬ್ಬ ಆಚರಿಸಿದ್ದಾರೆ.

ತಾಯಿ ಮೃತಪಟ್ಟಿರುವ ಹೆಣ್ಣು ಕುರಿಯನ್ನು ತಮ್ಮ ಕುಟುಂಬ ಸದಸ್ಯರಂತೆ ಕೃಷ್ಣಮೂರ್ತಿಯವರು ಪರಿಗಣಿಸಿದ್ದು, ಇದಕ್ಕೆ ಮೇವಿನ ಜೊತೆಯಲ್ಲಿ ಮನೆಯಲ್ಲಿ ಮಾಡುವ ಇಡ್ಲಿ-ದೋಸೆ ಸಹ ನೀಡುತ್ತಾರೆ. ಇದೀಗ ಅದರ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...