alex Certify ಕುಡಿಯಲು ಹಾಲು ತರಲು ವಿಳಂಬ ಮಾಡಿದ ಪತ್ನಿಗೆ ತಲಾಕ್​ ನೀಡಿದ ಪತಿರಾಯ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕುಡಿಯಲು ಹಾಲು ತರಲು ವಿಳಂಬ ಮಾಡಿದ ಪತ್ನಿಗೆ ತಲಾಕ್​ ನೀಡಿದ ಪತಿರಾಯ….!

ತನಗೆ ಕುಡಿಯಲು ಹಾಲು ನೀಡುವ ಮುನ್ನ ಮಕ್ಕಳಿಗೆ ನೀಡಿದಳು ಎಂಬ ಕಾರಣಕ್ಕೆ ಪತಿಯೊಬ್ಬ ತನ್ನ ಪತ್ನಿಗೆ ತ್ರಿವಳಿ ತಲಾಕ್​ ನೀಡಿದ ಘಟನೆಯು ವರದಿಯಾಗಿದೆ. ಅಹಮದಾಬಾದ್​ನ ಕರಂಜ್​​ನ ನಿವಾಸಿಯಾದ 31 ವರ್ಷದ ಮಹಿಳೆಯು ತನ್ನ ಪತಿಯ ಮನೆಯಲ್ಲಿ ನನಗೆ ವರದಕ್ಷಿಣೆಗಾಗಿ ಪೀಡಿಸುತ್ತಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ಮದುವೆಯಾದ ಮೇಲೆ ನನಗೆ ವರದಕ್ಷಿಣೆ ತರುವಂತೆ ಗಂಡನ ಮನೆಯವರು ಪೀಡಿಸುತ್ತಿದ್ದಾರೆ ಎಂದು ಆರೋಪಿಸಿ ಮಹಿಳೆಯು ಮಂಗಳವಾರದಂದು ಪೊಲೀಸ್​ ಠಾಣೆಗೆ ದೂರು ನೀಡಿದ್ದಾಳೆ. 2008ರಲ್ಲಿ ಮದುವೆಯಾಗಿದ್ದ ಈ ಮಹಿಳೆಯು ನಾಡಿಯಾದ್​ನಲ್ಲಿರುವ ತನ್ನ ಗಂಡನ ಮನೆಗೆ ಶಿಫ್ಟ್​ ಆಗಿದ್ದರು.

ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ಮಹಿಳೆಯ ಪತಿ ಹಾಗೂ ಆತನ ಪೋಷಕರು ನನ್ನ ತವರು ಮನೆಯಿಂದ ಈ ಕೂಡಲೇ 1 ಲಕ್ಷ ರೂಪಾಯಿಯನ್ನು ತರುವಂತೆ ಪೀಡಿಸಿದ್ದರು ಎಂದು ಮಹಿಳೆ ಆರೋಪಿಸಿದ್ದಾರೆ. ಇದೇ ಕಾರಣಕ್ಕಾಗಿ ಪತಿಯ ಮನೆಯವರಿಗೂ ಹಾಗೂ ನನಗೂ ವಾಗ್ವಾದ ಏರ್ಪಟ್ಟಿತ್ತು. ನನ್ನ ಮೇಲೆ ಪತಿಯ ಮನೆಯವರು ಹಲ್ಲೆ ನಡೆಸಿದ್ದಾರೆ ಎಂದು ಮಹಿಳೆಯು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಈ ಗಲಾಟೆಯ ಬಳಿಕ ನನ್ನ ಐದು ವರ್ಷದ ಮಗಳು ನನಗೆ ಕುಡಿಯಲು ಹಾಲು ಹಾಗೂ ತಿನ್ನಲು ಸ್ನ್ಯಾಕ್ಸ್​ ನೀಡುವಂತೆ ಕೇಳಿದ್ದಾರೆ. ಇದೇ ಸಮಯಕ್ಕೆ ಸರಿಯಾಗಿ ಪತಿ ತನಗೂ ಕುಡಿಯಲು ಹಾಲು ತರುವಂತೆ ಕೇಳಿದ್ದ. ನಾನು ಮೊದಲು ಮಗಳಿಗೆ ಹಾಲು ನೀಡಿದೆ. ಇಷ್ಟಕ್ಕೇ ಕೋಪಗೊಂಡ ಪತಿ ನನಗೆ ತಲಾಕ್​ ನೀಡಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...