alex Certify ಕಿಮ್‌ ಕರ್ದಾಶಿಯನ್‌ಳಂತೆ ಕಾಣಲು 4.7 ಕೋಟಿ ರೂ. ಖರ್ಚು, ಮತ್ತೆ ಹಳೆ ರೂಪಕ್ಕೆ ಮರಳಲು ಇಂಥಾ ಕೆಲಸ ಮಾಡಿದ್ದಾಳೆ ಈ ಮಾಡೆಲ್ ! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಿಮ್‌ ಕರ್ದಾಶಿಯನ್‌ಳಂತೆ ಕಾಣಲು 4.7 ಕೋಟಿ ರೂ. ಖರ್ಚು, ಮತ್ತೆ ಹಳೆ ರೂಪಕ್ಕೆ ಮರಳಲು ಇಂಥಾ ಕೆಲಸ ಮಾಡಿದ್ದಾಳೆ ಈ ಮಾಡೆಲ್ !

ಬಾಲಿವುಡ್‌, ಹಾಲಿವುಡ್‌ ನಟಿಯರನ್ನು ನೋಡಿ ನಾವೂ ಅವರಂತೆ ಸುಂದರವಾಗಿ ಕಾಣಬೇಕೆಂದು ಅಂದುಕೊಳ್ಳೋದು ಸಹಜ. ಆದ್ರೆ ಅದಕ್ಕಾಗಿ ಕೋಟ್ಯಾಂತರ ರೂಪಾಯಿ ಖರ್ಚು ಮಾಡಿ, ಅಪಾಯಕಾರಿ ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಳ್ತಿರೋದು ಮಾತ್ರ ದುರಂತವೇ ಸರಿ.

ಬ್ರೆಜಿಲ್‌ ಮೂಲದ ರೂಪದರ್ಶಿ ಜೆನ್ನಿಫರ್ ಪ್ಯಾಂಪ್ಲೋನಾ ಕೂಡ ಇಂಥದ್ದೇ ಯಡವಟ್‌ ಮಾಡಿಕೊಂಡಿದ್ದಾಳೆ. ಈಕೆಗೆ ಹಾಲಿವುಡ್‌ನ ಕಿಮ್‌ ಕರ್ದಾಶಿಯನ್‌ ಅಂದ್ರೆ ಪಂಚಪ್ರಾಣ. ಅವಳಂತೆಯೇ ಕಾಣಬೇಕು ಅನ್ನೋ ಆಸೆ. ಅದೇ ರೀತಿ ತನ್ನನ್ನು ತಾನು ಬದಲಾಯಿಸಿಕೊಳ್ಳಲು ಸಾಕಷ್ಟು ಶಸ್ತ್ರಚಿಕಿತ್ಸೆಗಳಿಗೆ ಒಳಗಾಗಿದ್ದಾಳೆ ಜೆನ್ನಿಫರ್‌.

ಈ ಪ್ರಕ್ರಿಯೆಗೆ ಆಕೆ ಖರ್ಚು ಮಾಡಿದ್ದು ಬರೋಬ್ಬರಿ 4.7 ಕೋಟಿ ರೂಪಾಯಿ. ಆದ್ರೆ ಫಲಿತಾಂಶ ಆಕೆಗೆ ಇಷ್ಟವಾಗಿಲ್ಲ. ಕೊನೆಗೆ ಮರಳಿ ತನ್ನ ಅಸಲಿ ರೂಪವನ್ನೇ ಪಡೆಯಲು ಜೆನ್ನಿಫರ್‌ ನಿರ್ಧರಿಸಿದ್ಲು. ಹಾಗಾಗಿ ಮರಳಿ ತನ್ನದೇ ರೂಪ ಪಡೆಯಲು ಮತ್ತೆ 95 ಲಕ್ಷ ರೂಪಾಯಿ ವೆಚ್ಚ ಮಾಡಿದ್ದಾಳೆ.

 

ಕಿಮ್‌ ಕರ್ದಾಶಿಯನ್‌ಳಂತೆ ಕಾಣಬೇಕೆಂಬ ಬಯಕೆಯನ್ನು ಈಡೇರಿಸಿಕೊಳ್ಳಲು ಜೆನ್ನಿಫರ್‌ 12 ವರ್ಷಗಳ ಅವಧಿಯಲ್ಲಿ ಸುಮಾರು 40 ಕಾಸ್ಮೆಟಿಕ್‌ ಸರ್ಜರಿಗಳಿಗೆ ಒಳಗಾಗಿದ್ದಾಳೆ. ಆದ್ರೆ ಕೊನೆಯಲ್ಲಿ ಆಕೆಗೆ ಜ್ಞಾನೋದಯವಾಗಿದೆ. ಎಲ್ಲರೂ ಆಕೆಯನ್ನು ಕಿಮ್‌ ಕರ್ದಾಶಿಯನ್‌ ಎಂದೇ ಕರೆಯಲು ಆರಂಭಿಸಿದ್ದರಂತೆ. ಆದ್ರೆ ತಾನೊಬ್ಬ ಉದ್ಯಮಿ, ಸ್ವಂತ ಬಲದಿಂದ ಇಷ್ಟೆಲ್ಲಾ ಮಾಡಿ ಬೇರೆ ಯಾರದ್ದೋ ಹೆಸರಿನಲ್ಲಿ ಕರೆಸಿಕೊಳ್ಳಬೇಕಲ್ಲ ಎಂಬ ಪಶ್ಚಾತ್ತಾಪ ಭಾವನೆ ಅವಳನ್ನು ಕಾಡಿದೆ.

17 ವರ್ಷದವಳಿದ್ದಾಗ ಮೊದಲ ಬಾರಿ ಆಕೆ ಕಾಸ್ಮೆಟಿಕ್‌ ಸರ್ಜರಿಗೆ ಒಳಗಾಗಿದ್ಲು. ದಿನಕಳೆದಂತೆ ಆಕೆಗೆ ಇದೇ ಒಂದು ಚಟವಾಗಿಬಿಟ್ಟಿತ್ತು. ದೇಹದ ಪ್ರತಿ ಅಂಗವನ್ನೂ ಕಿಮ್‌ ಕರ್ದಾಶಿಯನ್‌ಳಂತೆ ಬದಲಾಯಿಸಿಕೊಳ್ಳಲು 40 ಶಸ್ತ್ರಚಿಕಿತ್ಸೆಗಳನ್ನು ಮಾಡಿಸಿಕೊಂಡಿದ್ದಾಳೆ.

ಈ ಬದಲಾವಣೆ ನಂತರ ಇನ್‌ಸ್ಟಾಗ್ರಾಮ್ನಲ್ಲೂ ಆಕೆಗೆ 10 ಲಕ್ಷಕ್ಕೂ ಹೆಚ್ಚು ಫಾಲೋವರ್ಸ್‌ ಸೃಷ್ಟಿಯಾಗಿದ್ದರು. ಆದರೂ ಇದೆಲ್ಲ ತನಗೆ ಸಂತೋಷ ಕೊಡಲಿಲ್ಲ ಎನ್ನುತ್ತಾಳೆ ಜೆನ್ನಿಫರ್‌. ಆಕೆಯನ್ನು ಮರಳಿ ಹಳೆ ರೂಪಕ್ಕೆ ತರುವುದಾಗಿ ಇಸ್ತಾಂಬುಲ್‌ ಮೂಲದ ವೈದ್ಯನೊಬ್ಬ ಭರವಸೆ ಕೊಟ್ಟಿದ್ದ. ಕೂಡಲೇ ಆಕೆ ಮತ್ತೆ ಒಟ್ಟೊಟ್ಟಿಗೆ ಹತ್ತಾರು ಸರ್ಜರಿ ಮಾಡಿಸಿಕೊಂಡಿದ್ದಾಳೆ.

ಪರಿಣಾಮ ಆಕೆಗೆ ಕೆನ್ನೆಯಿಂದ ರಕ್ತಸ್ರಾವ ಸೇರಿದಂತೆ ಅನೇಕ ರೀತಿಯ ಸಮಸ್ಯೆ ಶುರುವಾಗಿತ್ತು. ಸದ್ಯ ಬ್ರೆಜಿಲ್‌ನ ಈ ಮಾಡೆಲ್‌ ನಿಧಾನವಾಗಿ ಚೇತರಿಸಿಕೊಳ್ತಿದ್ದು, ಕಿಮ್‌ ಕರ್ದಾಶಿಯನ್‌ಳಂತೆ ಕಾಣಬೇಕೆಂಬ ಹುಚ್ಚು ಕೂಡ ಇಳಿದಿದೆ. ಮರಳಿ ತನ್ನ ಹಳೆ ರೂಪವನ್ನೇ ಆಕೆ ಪಡೆದುಕೊಳ್ತಿದ್ದಾಳೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...