alex Certify ರುಚಿಕರವಾದ ಕಿತ್ತಳೆ ಸಿಪ್ಪೆಯ ಗೊಜ್ಜು ಸವಿದು ನೋಡಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ರುಚಿಕರವಾದ ಕಿತ್ತಳೆ ಸಿಪ್ಪೆಯ ಗೊಜ್ಜು ಸವಿದು ನೋಡಿ

ಕಿತ್ತಳೆ ಹಣ್ಣು ತಿಂದು ಸಿಪ್ಪೆ ಬಿಸಾಡುತ್ತೇವೆ. ಈ ಸಿಪ್ಪೆಯಿಂದ ರುಚಿಕರವಾದ ಗೊಜ್ಜು ಮಾಡಿಕೊಂಡು ಸವಿಯಬಹುದು. ಮಾಡುವ ವಿಧಾನ ಇಲ್ಲಿದೆ ನೋಡಿ.

ಬೇಕಾಗುವ ಸಾಮಗ್ರಿಗಳು:

1/3 ಕಪ್ ನಷ್ಟು ಕಿತ್ತಳೆಹಣ್ಣಿನ ಸಿಪ್ಪೆ ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ, ಸಣ್ಣ ಲಿಂಬೆಹಣ್ಣಿನ ಗಾತ್ರದಷ್ಟು ಹುಣಸೆಹಣ್ಣು ನೀರಿನಲ್ಲಿ ನೆನೆಸಿದ್ದು, ಸಣ್ಣ ತುಂಡು – ಬೆಲ್ಲ, ½ ಕಪ್ ತೆಂಗಿನಕಾಯಿ ತುರಿ, ¾ ಟೇಬಲ್ ಸ್ಪೂನ್ – ಸಾರಿನಪುಡಿ, 1.5 ಟೇಬಲ್ ಸ್ಪೂನ್ – ಎಣ್ಣೆ, ¼ ಟೀ ಸ್ಪೂನ್ – ಸಾಸಿವೆ, ½ ಟೀ ಸ್ಪೂನ್ – ಉದ್ದಿನಬೇಳೆ, ¼ ಟೀ ಸ್ಪೂನ್ ಅರಿಶಿನ ಪುಡಿ, 10 – ಕರಿಬೇವಿನ ಎಸಳು, 1 ಟೇಬಲ್ ಸ್ಪೂನ್ – ಕೊತ್ತಂಬರಿಸೊಪ್ಪು, 1ಕಪ್ – ನೀರು, ½ ಟೇಬಲ್ ಸ್ಪೂನ್ – ಉಪ್ಪು.

ಮಾಡುವ ವಿಧಾನ:

ಒಂದು ಮಿಕ್ಸಿ ಜಾರಿಗೆ ತೆಂಗಿನಕಾಯಿ ತುರಿ, ರಸಂ ಪುಡಿ ಸೇರಿಸಿ ರುಬ್ಬಿಕೊಳ್ಳಿ. ನಂತರ ಗ್ಯಾಸ್ ಮೇಲೆ ಒಂದು ಪ್ಯಾನ್ ಇಟ್ಟು ಅದಕ್ಕೆ ಎಣ್ಣೆ ಹಾಕಿ ಅದು ಬಿಸಿಯಾಗುತ್ತಲೆ ಸಾಸಿವೆ, ಉದ್ದಿನಬೇಳೆ ಹಾಕಿ ಸಾಸಿವೆ ಸಿಡಿದಾಕ್ಷಣ ಕರಿಬೇವು ಕಿತ್ತಳೆಹಣ್ಣಿನ ಸಿಪ್ಪೆ ಹಾಕಿ 5 ನಿಮಿಷಗಳ ಕಾಲ ಫ್ರೈ ಮಾಡಿಕೊಳ್ಳಿ.

ಇದು ಫ್ರೈ ಆದ ಮೇಲೆ ಹುಣಸೆಹಣ್ಣಿನ ರಸ, ಬೆಲ್ಲ, ಉಪ್ಪು ಹಾಕಿ. ಮಿಕ್ಸ್ ಮಾಡಿ ನಂತರ ರುಬ್ಬಿಟ್ಟುಕೊಂಡ ಮಸಾಲೆ ಸೇರಿಸಿ ನೀರು ಹಾಕಿ 8 ನಿಮಿಷಗಳ ಕಾಲ ಬೇಯಿಸಿಕೊಂಡು ನಂತರ ಕೊತ್ತಂಬರಿಸೊಪ್ಪು ಸೇರಿಸಿ ಗ್ಯಾಸ್ ಆಫ್ ಮಾಡಿದರೆ ರುಚಿಕರವಾದ ಕಿತ್ತಳೆಹಣ್ಣಿನ ಸಿಪ್ಪೆಯ ಗೊಜ್ಜು ರೆಡಿ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...