alex Certify ಕಾಳಿಂಗ ಸರ್ಪಕ್ಕೇ ಮುತ್ತು ಕೊಡಲು ಹೋದ ಸಾಹಸಿ; ಇಲ್ಲಿದೆ ಎದೆ ಝಲ್ಲೆನಿಸುವ ವಿಡಿಯೋ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಳಿಂಗ ಸರ್ಪಕ್ಕೇ ಮುತ್ತು ಕೊಡಲು ಹೋದ ಸಾಹಸಿ; ಇಲ್ಲಿದೆ ಎದೆ ಝಲ್ಲೆನಿಸುವ ವಿಡಿಯೋ…!

ವಿಶ್ವದ ಅತ್ಯಂತ ವಿಷಕಾರಿ ಹಾವುಗಳಲ್ಲಿ ಕಿಂಗ್‌ ಕೋಬ್ರಾ ಕೂಡ ಒಂದು. ಈ ಹಾವು ಕಚ್ಚಿ 15 ನಿಮಿಷಗಳಲ್ಲಿ ವ್ಯಕ್ತಿ ಸಾಯ್ತಾನೆ. ಅಲ್ಪ ಸ್ವಲ್ಪ ವಿಷವೇನಾದ್ರೂ ದೇಹದೊಳಕ್ಕೆ ಹೋದ್ರೆ ಇದು ನರಮಂಡಲದ ಮೇಲೆ ನೇರವಾಗಿ ಪರಿಣಾಮ ಬೀರುವುದರಿಂದ ವ್ಯಕ್ತಿ ಪಾರ್ಶ್ವವಾಯುವಿಗೆ ತುತ್ತಾಗುವ ಅಪಾಯವಿರುತ್ತದೆ.

ಈ ಅಪಾಯಕಾರಿ ಹಾವುಗಳನ್ನು ಹಿಡಿದು ರಕ್ಷಣೆ ಮಾಡುವವರು, ಅವುಗಳನ್ನು ಸಾಕುವವರು ಕೂಡ ಇದ್ದಾರೆ. ಭಾರತದಲ್ಲಿ ಕಿಂಗ್‌ ಕೋಬ್ರಾಗಳು ಹೆಚ್ಚಾಗಿ ಕಂಡು ಬರುತ್ತವೆ. ಇಂಥಾ ಭಯಾನಕ ಕಾಳಿಂಗ ಸರ್ಪಕ್ಕೆ ಮುತ್ತು ಕೊಟ್ರೆ ಹೇಗಿರತ್ತೆ ಹೇಳಿ ?

ಇಂಡೋನೇಷ್ಯಾದಲ್ಲಿ ವ್ಯಕ್ತಿಯೊಬ್ಬ ಇಂಥದ್ದೇ ಹುಚ್ಚು ಸಾಹಸ ಮಾಡಿದ್ದಾನೆ. ಕಾಳಿಂಗ ಸರ್ಪದ ತಲೆಗೆ ಮುತ್ತಿಡಲು ಪ್ರಯತ್ನಿಸಿರುವ ವಿಡಿಯೋ ವೈರಲ್‌ ಆಗಿದೆ. ಆ ಹುಚ್ಚು ಸಾಹಸಿಯೇ ಈ ವಿಡಿಯೋವನ್ನು ತನ್ನ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದಾನೆ. ಇದನ್ನು ನೀವ್ಯಾರೂ ಟ್ರೈ ಮಾಡ್ಬೇಡಿ, ನಾನು ಮತ್ತೊಮ್ಮೆ ಇದೇ ರೀತಿ ಕಿಂಗ್‌ ಕೋಬ್ರಾಗೆ ಕಿಸ್‌ ಮಾಡ್ತೇನೆ ಅಂತಾ ಆತ ಬರೆದುಕೊಂಡಿದ್ದಾನೆ. ಈತನ ಹೆಸರು ಬ್ರಿಯಾನ್ ಬಾರ್ಸಿಕ್.

ಇವನಿಗೆ ಮೊಸಳೆಗಳನ್ನು ಪಳಗಿಸಿ ಅನುಭವ ಇದೆಯಂತೆ. ಹೆಡೆಯೆತ್ತಿ ನಿಂತಿದ್ದ ಕಾಳಿಂಗಕ್ಕೆ ಈತ ಹಿಂದಿನಿಂದ ಬಂದು ಮುತ್ತು ಕೊಡಲು ಯತ್ನಿಸಿದ್ದಾನೆ. ಆಗ ಥಟ್ಟನೆ ಬಾಯ್ತೆರೆದ ಹಾವು ಅವನಿಗೆ ಕಚ್ಚಲು ಯತ್ನಿಸಿದೆ. ಅದೃಷ್ಟವಶಾತ್‌ ಅವನು ಪಾರಾಗಿದ್ದಾನೆ. ಇಷ್ಟಾದರೂ ಬ್ರಿಯಾನ್‌ಗೆ ಸಮಾಧಾನವಾಗಿಲ್ಲ. ಅದೇ ರೀತಿ ಮತ್ತೊಮ್ಮೆ ಪ್ರಯತ್ನಿಸಿ ಕೊನೆಯೂ ಹಾವಿಗೆ ಮುತ್ತು ಕೊಡುವಲ್ಲಿ ಯಶಸ್ವಿಯಾಗಿದ್ದಾನೆ.

https://www.instagram.com/reel/CcSu2JAAy_1/?utm_source=ig_embed&ig_rid=f17f9082-c77e-4fc8-a9f2-6bbec1955b2a

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...