alex Certify ‘ಕಾಲಾ ಚಶ್ಮಾ’ ಹಾಡಿಗೆ ಮಹಿಳೆಯರ ಬಿಂದಾಸ್ ಡಾನ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಾಲಾ ಚಶ್ಮಾ’ ಹಾಡಿಗೆ ಮಹಿಳೆಯರ ಬಿಂದಾಸ್ ಡಾನ್ಸ್

ಯಾವುದೇ ಕಾರ್ಯಕ್ರಮ ಇದ್ದರೂ, ಅಲ್ಲಿ ಮೋಜು ಮಸ್ತಿ ಇದ್ದೆ ಇರುತ್ತೆ. ಅದರಲ್ಲೂ ಸ್ನೇಹಿತರ ಗುಂಪು ಸೇರಿಬಿಟ್ಟರಂತೂ ಅಲ್ಲಿ ಹಾಡು ಡಾನ್ಸ್‌ಗೆ ಬರವೇ ಇರೋಲ್ಲ. ಸೋಶಿಯಲ್ ಮೀಡಿಯಾದಲ್ಲಿ ಈಗ ಇಂತಹದ್ದೇ ಸ್ನೇಹಿತರ ಗುಂಪಿನ ಡಾನ್ಸ್ ವಿಡಿಯೋ ಒಂದು ವೈರಲ್ ಆಗಿದೆ. ಈ ವಿಡಿಯೋದ ಇನ್ನೊಂದು ಸ್ಪೆಷಾಲಿಟಿ ಏನಂದ್ರೆ, ಇಲ್ಲಿ ಬಿಂದಾಸ್ ಆಗಿ ಡಾನ್ಸ್ ಮಾಡಿರುವವರೆಲ್ಲರೂ ಮಹಿಳೆಯರೇ ಆಗಿದ್ದಾರೆ.

ಅದು ಗೆಳತಿಯರೆಲ್ಲ ಸೇರಿ ಅರೆಂಜ್ ಮಾಡಿದ್ದ ಕಿಟ್ಟಿಪಾರ್ಟಿ. ಈ ಪಾರ್ಟಿಗೆ ಮಹಿಳೆಯರು ಸೀರೆ ಉಟ್ಟುಕೊಂಡು ಬಂದಿದ್ದರು. ಇದರಿಂದ ಇವರ ಪಾರ್ಟಿ ಇನ್ನಷ್ಟು ರಂಗೇರಿತ್ತು. ಪಾರ್ಟಿಯಲ್ಲಿ ಮಹಿಳೆಯರೆಲ್ಲರೂ ಬಿಂದಾಸ್ ಆಗಿ ಡಾನ್ಸ್ ಮಾಡ್ತಿರುವಾಗಲೇ ‘ಕಾಲಾ ಚಶ್ಮಾ‘ ಹಾಡನ್ನ ಹಾಕಲಾಗುತ್ತೆ. ಅಲ್ಲೇ ಇದ್ದ ಹಸಿರು ಸೀರೆ ಉಟ್ಟ ಮಹಿಳೆ ತಕ್ಷಣ ಈ ಹಾಡಿನ ಸ್ಪೆಷಲ್ ಸ್ಟೆಪ್ ಒಂದನ್ನ ಮಾಡುತ್ತಾಳೆ. ಇದು ಇತ್ತೀಚೆಗೆ ವೈರಲ್ ಆಗಿರುವ ಸ್ಟೆಪ್.

ಅದೇ ರೀತಿಯ ಸ್ಟೆಪ್‌ನ್ನ ಇಲ್ಲಿ ಈಕೆಯೂ ಮಾಡುತ್ತಾಳೆ. ಯಾವುದೇ ಹಿಂಜರಿಕೆ ಇಲ್ಲದೇ ಆ ಸ್ಟೆಪ್ ಮಾಡಿದಾಕ್ಷಣ ಅಲ್ಲಿದ್ದವರೆಲ್ಲರೂ ಆಕೆಗೆ ಇನ್ನಷ್ಟು ಹುರಿದುಂಬಿಸುತ್ತಾರೆ. ಇನ್ನಷ್ಟು ಜೋಶ್‌ನಲ್ಲಿ ಚೀರಾಡಿ, ಶಿಳ್ಳೆ ಹೊಡೆದು, ಚಪ್ಪಾಳೆ ತಟ್ಟಿ ಆಕೆಯ ಜೊತೆ ಇನ್ನಷ್ಟು ಖುಷಿಯಾಗಿ ಕುಣಿಯತ್ತಾರೆ. ಇವೆಲ್ಲವನ್ನೂ ಈ ವಿಡಿಯೋದಲ್ಲಿ ನೋಡಬಹುದಾಗಿದೆ.

ನಾಟಿ ವರ್ಲ್ಡ್(ತುಂಟ ಜಗತ್ತು) ಅನ್ನೋ ಇನ್ಸ್ಟಾಗ್ರಾಮ್‌ನಲ್ಲಿ ಈ ವಿಡಿಯೋವನ್ನ ಅಪ್ಲೋಡ್ ಮಾಡಲಾಗಿದೆ. ಮತ್ತು ಇದಕ್ಕೆ “ಆರ್ ಆರ್“ ಅನ್ನೋ ಶೀರ್ಷಿಕೆ ಕೊಡಲಾಗಿದೆ. ಈಗ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಸದ್ದು ಮಾಡುತ್ತಿದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...