alex Certify ಕಾರ್ತಿಕ ಮಾಸದ ಈ ಮೂರು ದಿನ ರಾತ್ರಿ ಸಮಯದಲ್ಲಿ ಊಟ ಮಾಡಿದರೆ ಕಾಡುತ್ತೆ ದಾರಿದ್ರ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರ್ತಿಕ ಮಾಸದ ಈ ಮೂರು ದಿನ ರಾತ್ರಿ ಸಮಯದಲ್ಲಿ ಊಟ ಮಾಡಿದರೆ ಕಾಡುತ್ತೆ ದಾರಿದ್ರ್ಯ

ಕಾರ್ತಿಕ ಮಾಸದಲ್ಲಿ ಶಿವ ಕೇಶವನನ್ನು ಪೂಜೆ ಮಾಡಲಾಗುತ್ತದೆ. ಹಾಗಾಗಿ ಕಾರ್ತಿಕ ಮಾಸಕ್ಕಿಂತ ಶ್ರೇಷ್ಠವಾದ ಮಾಸ ಮತ್ತೊಂದಿಲ್ಲ ಎಂದು ಹೇಳುತ್ತಾರೆ.

ಆದಕಾರಣ ಇಂತಹ ಮಹತ್ವವಾದ ಕಾರ್ತಿಕ ಮಾಸದಲ್ಲಿ ಈ ಮೂರು ದಿನ ರಾತ್ರಿ ಸಮಯದಲ್ಲಿ ಊಟ ಮಾಡಬಾರದು. ಅದರಿಂದ ದಟ್ಟ ದಾರಿದ್ರ್ಯ ಕಾಡುತ್ತದೆಯಂತೆ.

ಮೊದಲನೇಯದಾಗಿ ಕಾರ್ತಿಕ ಮಾಸದ ಹುಣ್ಣಿಮೆಯ ದಿನ ರಾತ್ರಿ ಅನ್ನವನ್ನು ಸೇವಿಸಬಾರದು. ಇದರಿಂದ ಕಷ್ಟಗಳು ಹೆಚ್ಚಾಗುತ್ತದೆ. ದಾರಿದ್ರ್ಯ ದೋಷಗಳು ಹೆಚ್ಚಾಗುತ್ತದೆಯಂತೆ. ಹಾಗೇ ಎರಡನೇಯದಾಗಿ ಕಾರ್ತಿಕ ಮಾಸದ ಅಮಾವಾಸ್ಯೆ ದಿನ ರಾತ್ರಿ ಊಟ ಮಾಡಬಾರದು. ಇದರಿಂದ ಆರೋಗ್ಯ ಸಂಬಂಧಿ ಕಾಯಿಲೆಗಳು ಕಾಡುತ್ತದೆಯಂತೆ.

ಹಾಗೇ ಮೂರನೇಯದಾಗಿ ಕಾರ್ತಿಕ ಮಾಸದಲ್ಲಿ ಬರುವಂತಹ ಆದಿವಾರದ ದಿನಗಳು ಅಂದರೆ ಭಾನುವಾರಗಳಂದು ಕೂಡ ರಾತ್ರಿ ಅನ್ನವನ್ನು ಸೇವಿಸಬಾರದು. ಇದಲ್ಲದೆ ಒಂದು ವೇಳೆ ಕಾರ್ತಿಕ ಮಾಸದಲ್ಲಿ ಸೂರ್ಯ ಗ್ರಹಣ, ಚಂದ್ರ ಗ್ರಹಣ ಬಂದರೆ ಆವತ್ತು ಕೂಡ ರಾತ್ರಿ ಊಟ ಮಾಡಬಾರದು. ಅದರ ಬದಲು ಹಣ್ಣು ಹಂಪಲನ್ನು ಸೇವಿಸಬಹುದು. ಈ ರೀತಿ ಕಾರ್ತಿಕ ಮಾಸದಲ್ಲಿ ಈ ನಿಯಮಗಳನ್ನು ಪಾಲಿಸಿದರೆ ಆ ಮಾಸದ ಪುಣ್ಯಫಲ ನಿಮಗೆ ಪ್ರಾಪ್ತಿಯಾಗುತ್ತದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...