alex Certify ಕಾಮನ್ವೆಲ್ತ್‌ ಪದಕ ವಿಜೇತೆಯ ಪತಿ ಅನುಮಾನಾಸ್ಪದ ಸಾವು….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಮನ್ವೆಲ್ತ್‌ ಪದಕ ವಿಜೇತೆಯ ಪತಿ ಅನುಮಾನಾಸ್ಪದ ಸಾವು….!

ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದಿದ್ದ ಆಟಗಾರ್ತಿ ಪೂಜಾ ಸಿಹಾಗ್‌ರ ಪತಿ ಹರಿಯಾಣದ ರೋಹ್ಟಕ್‌ನಲ್ಲಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. ಮೃತ ಅಜಯ್‌ ನಂದಾಲ್‌ರ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಡಲಾಗಿದೆ.

ಮಹಾರಾಣಿ ಕಿಶೋರಿ ಜಾಟ್‌ ಕನ್ಯಾ ಮಹಾವಿದ್ಯಾಲಯದ ಬಳಿ ಈ ಘಟನೆ ನಡೆದಿದೆ. ಡ್ರಗ್ಸ್‌ ಓವರ್‌ ಡೋಸ್‌ನಿಂದ ಅಜಯ್‌ ಸಾವನ್ನಪ್ಪಿದ್ದಾರೆ, ಈ ಘಟನೆಯಲ್ಲಿ ಸ್ನೇಹಿತ ರವಿ ಎಂಬಾತನ ಕೈವಾಡವಿದೆಯೆಂದು ಮೃತರ ತಂದೆ ಆರೋಪ ಮಾಡಿದ್ದಾರೆ.

ಕಾಮನ್ವೆಲ್ತ್‌ ಗೇಮ್ಸ್‌ನ ಮಹಿಳೆಯರ ಫ್ರೀಸ್ಟೈಲ್‌ 76 ಕೆಜಿ ವಿಭಾಗದಲ್ಲಿ ಪೂಜಾ ಸಿಹಾಗ್‌ ಕಂಚಿನ ಪದಕ ಗೆದ್ದಿದ್ದರು. ರೋಚಕ ಹಣಾಹಣಿಯಲ್ಲಿ ಆಸ್ಟ್ರೇಲಿಯಾದ ನಯೋಮಿ ಡೇ ಬ್ರೂನಿಯನ್ನು ಮಣಿಸಿದ್ದರು.

ಬರ್ಮಿಂಗ್‌ಹ್ಯಾಮ್‌ನಲ್ಲಿ ಜುಲೈ 28ರಿಂದ ಆರಂಭವಾಗಿದ್ದ ಕಾಮನ್ವೆಲ್ತ್‌ ಗೇಮ್ಸ್‌ ಆಗಸ್ಟ್‌ 8ರಂದು ಮುಕ್ತಾಯಗೊಂಡಿತ್ತು.

 

 

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...