alex Certify ಕಾಫಿ, ಟೀ ‘ಕಪ್’ ಗಳಲ್ಲಿ ಉಳಿದುಕೊಂಡಿರುವ ಕಲೆ ಹೋಗಲಾಡಿಸಲು ಇಲ್ಲಿದೆ ಟಿಪ್ಸ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾಫಿ, ಟೀ ‘ಕಪ್’ ಗಳಲ್ಲಿ ಉಳಿದುಕೊಂಡಿರುವ ಕಲೆ ಹೋಗಲಾಡಿಸಲು ಇಲ್ಲಿದೆ ಟಿಪ್ಸ್

ಕಾಫಿ, ಟೀ ಕಲೆಗಳು ಯಾವುದರ ಮೇಲೆ ಬಿದ್ದರೂ ಸುಲಭವಾಗಿ ಹೋಗುವುದಿಲ್ಲ. ಟೀ ಹಾಕುವ ಲೋಟ, ಕಪ್, ಸಾಸರ್ ಗಳನ್ನು ಕೂಡ ಎಷ್ಟೇ ತೊಳೆದರೂ ಕಂದು ಬಣ್ಣದ ಕಲೆಗಳು ಹಾಗೆಯೇ ಉಳಿದು ಬಿಡುತ್ತದೆ. ಹಾಗಾಗಿ ಯಾರಾದರೂ ಅತಿಥಿಗಳು ಬಂದಾಗ ಈ ಕಪ್ ಗಳಲ್ಲಿ ಅವರಿಗೆ ಕಾಫಿ ಕೊಡಲು ಮುಜುಗರವಾಗುತ್ತದೆ. ಇಂಥ ಹಟಮಾರಿ ಕಲೆಗಳನ್ನು ಸುಲಭವಾಗಿ ಹೋಗಲಾಡಿಸಲು ಇಲ್ಲಿದೆ ಕೆಲವು ಟಿಪ್ಸ್.

* ಬೇಕಿಂಗ್ ಸೋಡಾ ಅಥವಾ ವಿನಿಗರ್ ಬೆರೆಸಿದ ಬಿಸಿ ನೀರಿನಲ್ಲಿ ಕಲೆಯಾಗಿರುವ ಕಪ್ ಗಳನ್ನು ನೆನೆಸಿಟ್ಟು ನಂತರ ತೊಳೆದರೆ ಕಲೆಗಳು ನಿವಾರಣೆಯಾಗುತ್ತವೆ.

* ಒದ್ದೆ ಬಟ್ಟೆಯನ್ನು ಉಪ್ಪಿನಲ್ಲಿ ಅದ್ದಿ ಕಾಫಿ ಅಥವಾ ಚಹಾ ಕಲೆಯನ್ನು ಒರೆಸಿದರೆ ಅವು ಮರೆಯಾಗುತ್ತವೆ.

* ಬಿಸಿ ನೀರಿಗೆ ಅರ್ಧ ಕಪ್ ನಿಂಬೆರಸ ಸೇರಿಸಿ ಅದರಲ್ಲಿ ಕಲೆಗಳಿರುವ ಕಪ್ ಗಳನ್ನು ಒಂದು ರಾತ್ರಿ ನೆನೆಸಿಟ್ಟು ಮರುದಿನ ತೊಳೆದರೆ ಕಲೆಗಳು ಮಾಯವಾಗುತ್ತವೆ.

* ಬೇಕಿಂಗ್ ಸೋಡಾ ಮತ್ತು ನಿಂಬೆರಸ ಬೆರೆಸಿ ಕಲೆಯ ಮೇಲೆ ಹಚ್ಚಿ ಒರೆಸಿದರೂ ಈ ಕಲೆಗಳು ನಿವಾರಣೆಯಾಗುತ್ತದೆ.

Related News

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...