alex Certify ‘ಕಾಂತಾರ’ ಎಫೆಕ್ಟ್: ಆಟೋಗೆ ಕಾಡಿನಂತೆ ಅಲಂಕಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

‘ಕಾಂತಾರ’ ಎಫೆಕ್ಟ್: ಆಟೋಗೆ ಕಾಡಿನಂತೆ ಅಲಂಕಾರ

ರಿಷಬ್ ಶೆಟ್ಟಿ ನಟಿಸಿ ನಿರ್ದೇಶಿಸಿರುವ ‘ಕಾಂತರಾ’ ಚಿತ್ರ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಈ ಚಿತ್ರ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಈಗಾಗಲೇ ದಾಖಲೆ ಬರೆದಿದ್ದು, ಇನ್ನೂ ಕೂಡ ಹೌಸ್ ಫುಲ್ ಪ್ರದರ್ಶನಗಳನ್ನು ಕಾಣುತ್ತಿದೆ. ದೇಶ ಮಾತ್ರವಲ್ಲದೆ ವಿದೇಶಗಳಲ್ಲೂ ಈ ಚಿತ್ರ ಭಾರಿ ಯಶಸ್ಸು ಕಂಡಿದೆ.

ಚಿತ್ರದ ನಾಗಾಲೋಟ ಈ ರೀತಿ ಮುಂದುವರೆದಿರುವುದರ ಮಧ್ಯೆ ಉಡುಪಿಯ ಆಟೋ ಚಾಲಕರೊಬ್ಬರು ‘ಕಾಂತಾರಾ’ ಪ್ರೇರಣೆಯಿಂದ ತಮ್ಮ ಆಟೋಗೆ ರೆಂಬೆ ಕೊಂಬೆಗಳನ್ನು ಕಟ್ಟಿ ಕಾಡಿನಂತೆ ಸಿಂಗರಿಸಿದ್ದಾರೆ.

ಕಟಪಾಡಿಯ ಆಟೋ ಚಾಲಕ ಜಯಕರ್ ಈ ರೀತಿ ತಮ್ಮ ಆಟೋವನ್ನು ಅಲಂಕರಿಸಿದ್ದು, ಇಷ್ಟು ಮಾತ್ರವಲ್ಲದೆ ಗುರುವಾರ ದಿನವಿಡೀ ಪ್ರಯಾಣಿಕರಿಗೆ ಉಚಿತ ಸೇವೆ ನೀಡಿದ್ದಾರೆ. ಪ್ರತಿ ವರ್ಷದ ದೀಪಾವಳಿಯ ಲಕ್ಷ್ಮಿ ಪೂಜೆಯಂದು ಜಯಕರ್ ತಮ್ಮ ಆಟೋಗೆ ವಿಶಿಷ್ಟ ರೀತಿಯಲ್ಲಿ ಸಿಂಗರಿಸಿ ಪೂಜೆ ಮಾಡುತ್ತಾರೆ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...